ಕುಂದಾಪುರ: ಚಾಲಕನ ಅತೀವೇಗದಿಂದಾಗಿ ನಿಯಂತ್ರಣ ಕಳೆದುಕೊಂಡ ಟಿಪ್ಪರ್ ಒಂದು ರಸ್ತೆ ಬದಿಯಲ್ಲಿ ಮೇಯುತ್ತಿದ್ದ ಜಾನುವಾಗಳ ಮೇಲೆ ಪಲ್ಟಿಯಾದ ಪರಿಣಾಮ ಟಿಪ್ಪರ್ ಅಡಿಯಲ್ಲಿ ಸಿಕ್ಕಿ ಹಾಕೊಂಡ ಎಂರಡು ಜಾನುವಾರುಗಳು ಸಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಕಾಳಾವರ ಸಮೀಪದ ದಬ್ಬೆಕಟ್ಟೆ ಎಂಬಲ್ಲಿ ನಡೆದಿದೆ.
ಜಲ್ಲಿ ತುಂಬಿಕೊಂಡು ಕುಂದಾಪುರದ ಕಡೆಗೆ ಬರುತ್ತಿದ್ದ ಟಿಪ್ಪರ್ ದಬ್ಬೆ ಕಟ್ಟೆ ಸಮೀಪದ ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಇದೇ ಸಂದರ್ಭ ರಸ್ತೆ ಬದಿಯಲ್ಲಿ ಜಾನುವಾರುಗಳು ಮೇಯುತ್ತಿದ್ದವು. ಟಿಪ್ಪರ್ ಜಾನುವಾರುಗಳ ಮೇಲೆ ಅನಿರೀಕ್ಷಿತವಾಗಿ ಬಿದ್ದ ಪರಿಣಾಮ ಎರಡು ದನಗಳು ಸ್ಥಳದಲ್ಲಿಯೇ ಸಾವನ್ನಪ್ಪಿವೆ. ಟಿಪ್ಪರ್ ಪಲ್ಟಿಯಾದ ತಕ್ಷಣ ಸ್ಥಳಿಯರು ಓಡಿ ಬಂದರಾದರೂ ಜಲ್ಲಿ ತುಂಬಿದ್ದ ಟಿಪ್ಪರನ್ನು ಅಲ್ಲಾಡಿಸಲೂ ಸಾಧ್ಯವಾಗಲಿಲ್ಲ.
ಇತ್ತೀಚೆಗೆ ಕುಂದಾಪುರದಲ್ಲಿ ಟಿಪ್ಪರ್‌ಗಳ ಅಟ್ಟಹಾಸ ಹೆಚ್ಚುತ್ತಿದ್ದು ಸಂಚಾರಿ ಪೊಲೀಸರ ಎದುರೇ ಯಮದೂತರಂತೆ ಪ್ರಯಾಣಿಸುತ್ತಿದ್ದು, ಇತ್ತೀಚೆಗೆ ಹಲವು ಅಪಘಾತಗಳಿಗೆ ಕಾರಣವಾಗಿದೆ. ಆದರೆ ಇದುವರೆಗೆ ಸಂಬಂಧಪಟ್ಟ ಇಲಾಖೆಗಳೂ ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ಇಂತಹಾ ಅಪಘಾತಗಳು ಹೆಚ್ಚುತ್ತಲೇ ಇವೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.