ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನಿರ್ಮಾಣ ಹಂತದಲ್ಲಿದ್ದ ಬಾವಿಗೆ ಬಿದ್ದು ವ್ಯಕ್ತಿಯೋರ್ವ ಮೃತ ಪಟ್ಟ ಘಟನೆ ಜೂನ್ 13ರಂದು ನಾಡ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದಿದೆ. ಕರ್ಕುಂಜೆ ಗ್ರಾಮದ ಶೆಟ್ರಕಟ್ಟೆ ನಿವಾಸಿ ಲಕ್ಷ್ಮಣ ಪೂಜಾರಿ (38) ಮೃತ ಪಟ್ಟ ದುರ್ದೈವಿ.
ಬಾವಿ ನಿರ್ಮಾಣ ಹಂತದಲ್ಲಿದ್ದು ರಿಂಗ್ ಇಳಿಸುವ ಕಾಮಗಾರಿ ನಡೆಯುತ್ತಿತ್ತು. ಈ ಸಂದರ್ಭ ಆಯಾ ತಪ್ಪಿ ಕಾಲು ಜಾರಿ ಲಕ್ಷ್ಮಣ ಪೂಜಾರಿ ಬಾವಿಗೆ ಬಿದ್ದಿದ್ದಾರೆ. ತಕ್ಷಣ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಆಗಮಿಸಿದ ಕುಂದಾಪುರ ಅಗ್ನಿ ಶಾಮಕದಳದ ಸಿಬ್ಬಂದಿಗಳು, ಗಂಗೊಳ್ಳಿ ಠಾಣೆಯ ಪೊಲೀಸರು, ಗಂಗೊಳ್ಳಿ 24*7 ಅಂಬ್ಯುಲೆನ್ಸ್, ಸ್ವಯಂಸೇವಕ ತಂಡದವರ ಸಹಕಾರದಿಂದ ಶವವನ್ನು ಮೇಲೆತ್ತಲಾಯಿತು. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:
► ಕುಂದಾಪುರ: ಮೃತ ತಾಯಿಯನ್ನು ಕಂಡು ಮಗನೂ ಹೃದಯಾಘಾತದಿಂದ ನಿಧನ – https://kundapraa.com/?p=38595 .
► ಉಡುಪಿ: ಶನಿವಾರ 15 ಕೊರೋನಾ ಪಾಸಿಟಿವ್ ದೃಢ. ಒಟ್ಟು 720 ಮಂದಿ ಡಿಸ್ಚಾರ್ಜ್ – https://kundapraa.com/?p=38608 .
► ಉಡುಪಿ ಜಿಲ್ಲೆ: ಎಸ್.ಎಸ್.ಎಲ್.ಸಿ ಪರೀಕ್ಷೆ ಮಾಹಿತಿಗಾಗಿ ಸಹಾಯವಾಣಿ – https://kundapraa.com/?p=38453 .