ಕುಂದಾಪ್ರ ಡಾಟ್ ಕಾಂ ಸುದ್ದಿ.
ಮರವಂತೆ: ಮನುಷ್ಯನ ಶರೀರ ದೃಢವಾಗಿದ್ದರೆ ರೋಗ ಅಷ್ಟಾಗಿ ಬಾಧಿಸದು. ಭಾರತೀಯ ಪರಂಪರೆಯ ಅಯುರ್ವೇದ ಪದ್ಧತಿಯಲ್ಲಿ ಅಂತಹ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರ ಮತ್ತು ಔಷಧಿಗಳು ರೂಢಿಯ್ಲವೆ ಎಂದು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಹೇಳಿದರು.
ಮರವಂತೆಯ ಸಾಧನಾ ಸಮುದಾಯ ಭವನದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಅವರು ಆಲೂರಿನ ಚಿತ್ರಕೂಟ ಮತ್ತು ತೇಜಸ್ವೇದ ಸಂಸ್ಥೆಗಳು ಹೊರತಂದಿರುವ ’ರಕ್ಷಾ ಪಂಚಕ’ ಕಿಟ್ ಬಿಡುಗಡೆಗೊಳಿಸಿ ಮಾತನಾಡಿದರು.
ಮನುಷ್ಯರನ್ನು ಬಾಧಿಸುವ ಕಾಯಿಲೆಗಳು ಕೊರೊನಾದೊಂದಿಗೆ ಅಂತ್ಯವಾಗುವುದಿಲ್ಲ. ಹೊಸ ಕಾಯಿಲೆಗಳು ಬರುತ್ತಲೇ ಇರುತ್ತವೆ ಮತ್ತು ಜಗತ್ತನ್ನು ಬದಲಾಯಿಸುತ್ತ ಹೋಗುತ್ತವೆ. ಅದಕ್ಕೆ ಮನುಷ್ಯ ಹೊಂದಿಕೊಳ್ಳಬೇಕಾಗುತ್ತದೆ. ಭಾರತೀಯ ಔಷಧ ಪದ್ಧತಿ ರೋಗ ಬಂದ ಮೇಲೆ ಅದನ್ನು ತಡೆಯುವ ಬದಲು ಅದು ಬರದಂತೆ ಪ್ರತಿರೋಧಿಸುವುದಕ್ಕೆ ಆದ್ಯತೆ ನೀಡುತ್ತದೆ. ಅದು ಆರೋಗ್ಯಪೂರ್ಣ ಆಹಾರ ವಿಹಾರಗಳಿಗೆ ಆದ್ಯತೆ ನೀಡಿ ಸ್ವಸ್ಥ ಜೀವನ ವಿಧಾನವನ್ನು ಪ್ರತಿಪಾದಿಸುತ್ತದೆ. ಈ ಕಾಲದಲ್ಲಿ ಭಾರತೀಯರು ತಮ್ಮ ಪರಂಪರೆಗೆ ಮರಳಬೇಕಾಗುತ್ತದೆ ಎಂದು ಅವರು ಹೇಳಿದರು.
ಕೇದಾರ್ ಮರವಂತೆ ಪ್ರಾರ್ಥನೆ ಹಾಡಿದರು. ಡಾ. ಅನುಲೇಖಾ ಬಾಯಿರಿ ಸ್ವಾಗತಿಸಿದರು. ಡಾ. ರೂಪಶ್ರೀ ಮರವಂತೆ ಪ್ರಾಸ್ತಾವಿಕವಾಗಿ ಮಾತನಾಡಿ ರಕ್ಷಾ ಪಂಚಕ ಒಳಗೊಂಡಿರುವ ಸ್ವಾಸ್ಥ್ಯ ರಸಾಯನ, ರಕ್ಷಕ್ ಹರ್ಬಲ್ ಟೀ, ಸ್ವರಸುಧಾ, ನಾಸಾಮೃತ ಮತ್ತು ರಕ್ಷೋಘ್ನ ದೂಪವನ್ನು ಪರಿಚಯಿಸಿ ಬಳಕೆಯ ವಿಧಾನ ಮತ್ತು ಪರಿಣಾಮಗಳನ್ನು ವಿವರಿಸಿದರು.
ಭಾರತೀಯ ವೈದ್ಯಪದ್ಧತಿಯ ಕೇಂದ್ರೀಯ ಪರಿಷತ್ತಿನ ಸದಸ್ಯ ಡಾ. ತನ್ಮಯ್ ಗೋಸ್ವಾಮಿ, ಭಾರತೀಯ ಆಯುಷ್ ಒಕ್ಕೂಟದ ಕುಂದಾಪುರ ಘಟಕದ ಅಧ್ಯಕ್ಷ ಡಾ. ರವೀಂದ್ರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಿತಾ ಆರ್. ಕೆ ಶುಭ ಹಾರೈಸಿದರು. ಡಾ. ರಾಜೇಶ ಬಾಯಿರಿ ವಂದಿಸಿದರು. ಸಿರಿ ಮರವಂತೆ ನಿರೂಪಿಸಿದರು. ಹಿರಿಯ ಆಯುರ್ವೇದ ವೈದ್ಯ ಡಾ. ಎ. ಆರ್. ಆಚಾರ್ಯ, ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಇದ್ದರು.
ಇದನ್ನೂ ಓದಿ:
► ಎಸ್.ಎಸ್.ಎಲ್.ಸಿ ಪರೀಕ್ಷೆ: ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆ, ಪೋಷಕರು ಆತಂಕ ಪಡುವ ಅಗತ್ಯವಿಲ್ಲ: ಡಿಸಿ ಜಿ. ಜಗದೀಶ್ – https://kundapraa.com/?p=38630 .