ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಾಸ್ಕ್ ಧರಿಸುವುದರ ಬಗ್ಗೆ ಜಾಗೃತಿ ಮೂಡಿಸುವುದು ಮಾಸ್ಕ್ ದಿನಾಚರಣೆ ಉದ್ದೇಶ. ಎಲ್ಲರೂ ಮಾಸ್ಕ್ ಧರಿಸಿದರಷ್ಟೇ ಸಾಲದು ಸ್ವಚ್ಛತೆ, ದೈಹಿಕ ಅಂತರ ಕಾಪಾಡಿಕೊಂಡರೆ ನಮ್ಮ ಆರೋಗ್ಯ ರಕ್ಷಣೆ ನಾವೇ ಮಾಡಿಕೊಳ್ಳಬಹುದು ಎಂದು ಕುಂದಾಪುರ ಉಪವಿಭಾಗಾಧಿಕಾರಿ ಕೆ. ರಾಜು ಅಭಿಪ್ರಾಯಪಟ್ಟರು.
ಕುಂದಾಪುರ ಪುರಸಭೆ ಆಶ್ರಯದಲ್ಲಿ ಗುರುವಾರ ನಡೆದ ಮಾಸ್ಕ್ ದಿನಚರಣೆ ಜಾಥಕ್ಕೆ ಚಾಲನೆ ನೀಡಿ, ಆರಂಭದಲ್ಲಿ ಕರೋನಾ ನಿಯಂತ್ರಣದಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದ್ದು, ನಂತರ ಬೇರೆ ರಾಜ್ಯದಿಂದ ಬಂದವರಲ್ಲಿ ಕರೋನಾ ಪಾಸಿಟೀವ್ ಕಾಣಿಸಿಕೊಂಡಿದ್ದರಿಂದ ಅತೀ ಹೆಚ್ಚು ಕರೋನಾ ಬಾಧಿತರ ಸಂಖ್ಯೆಯಲ್ಲೂ ಉಡುಪಿ ಮೊದಲ ಸ್ಥಾನಕ್ಕೇರಿತು. ಕರೋನಾ ಗುಣಮುಖರಾಗಿ ಹೋದವರಲ್ಲಿ ಕೂಡಾ ಉಡುಪಿ ಜಿಲ್ಲೆ ಮೊದಲ ಸ್ಥಾನದಿಲ್ಲದೆ. ಇದಕ್ಕೆ ಕಾರಣ ವಾರಿಯರ‍್ಸ್ ಹಾಗೂ ಸಮಾಜದ ಸಹಕಾರ ಎಂದು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಸದಸ್ಯರಾದ ದೇವಕಿ ಸಣ್ಣಯ್ಯ, ಚಂದ್ರಶೇಖರ್ ಖಾರ್ವಿ, ಶ್ರೀಧರ ಶೇರುಗಾರ್, ಪ್ರಭಾಕರ ವಿ., ಸಂತೋಷ್ ಕುಮಾರ್ ಶೆಟ್ಟಿ, ಸಂದೀಪ್ ಖಾರ್ವಿ, ಕಮಲ ಮಂಜುನಾಥ್, ಸ್ಕೌಟ್ ಗೈಡ್ ಸಂಸ್ಥೆ ಅಧ್ಯಕ್ಷೆ ಗುಣರತ್ನಾ, ನಗರ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ವಿಕಾಸ ಹೆಗ್ಡೆ, ಸಮಾಜ ಕಲ್ಯಾಣ ಇಲಾಖಾಧಿಕಾರಿ ರಾಘವೇಂದ್ರ ವರ್ಣೇಕರ್, ತಾಲೂಕು ಆಸ್ಪತ್ರೆ ಫಿಜಿಸಿಯನ್ ಡಾ. ನಾಗೇಶ್, ಸರ್ಕಾರಿ ನೌಕರರ ಸಂಘ ಉಪಾಧ್ಯಕ್ಷ ಪ್ರಕಾಶ್‌ಚಂದ್ರ ಶೆಟ್ಟಿ, ಪುರಸಭೆ ಪರಿಸರ ಎಂಜಿನಿಯರ್ ರಾಘವೇಂದ್ರ, ಆರೋಗ್ಯಾಧಿಕಾರಿ ಶರತ್ ಉಪಸ್ಥಿತರಿದ್ದರು.