ನೊಂದ ಜೀವಗಳಿಗೆ ಆಸರೆಯಾಗುತ್ತಿದೆ ‘ಅಪ್ಪ -ಅಮ್ಮ’ ಅನಾಥಾಶ್ರಮ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ವರದಿ.
ಬ್ರಹ್ಮಾವರ: ಒಂದು ಹೊತ್ತಿನ ಊಟಕ್ಕೂ ಪರದಾಡುವ ಬಡವರು, ಬೀದಿ ಬದಿಯಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊಂಡು ತಿರುಗುವವರು, ಮನೆಯಲ್ಲಿ ಎಲ್ಲ ಇದ್ದು ಇಲ್ಲದಂತೆ ಶೋಚನೀಯ ಬದುಕನ್ನು ಸಾಗಿಸುವರು. ಇವರೆಲ್ಲರಿಗೂ ಒಂದು ಬದುಕಿದೆ ಅಂತ ಅನಿಸಿದರೂ ಸಾಕಷ್ಟು ಭಾರಿ ನಿರ್ಲಕ್ಷ್ಯಕ್ಕೆ ಒಳಗಾಗುತ್ತಾರೆ.

Call us

Click Here

ಆದರೆ ಪ್ರಶಾಂತ್ ಪೂಜಾರಿ ಕೂರಾಡಿ ಎಂಬ ಈ ಕರುಣಾಮಯಿ ಯುವಕನೋರ್ವ ದುಬೈನಲ್ಲಿ ಹತ್ತು ವರ್ಷ ದುಡಿದು ಬಳಿಕ ಆ ಕೆಲಸವನ್ನು ತೊರೆದು ಊರಿಗೆ ಮರಳಿದ್ದಲ್ಲದೇ ಅಸಹಾಯಕರ ನೋವಿಗೂ ಸ್ಪಂದಿಸುತ್ತಿದ್ದಾರೆ. ಅವರಿಗಾಗಿಯೇ ಅಪ್ಪ-ಅಮ್ಮ ಅನಾಥಾಶ್ರಮ ಎಂಬ ಸೂರು ನಿರ್ಮಿಸಿ ತನ್ನ ಹಗಲು-ಇರುಳಿನ ದುಡಿಮೆಯ ಜೊತೆ ಅವರಿವರು ಸಹಕಾರದಿಂದ 20 ಜನರ ಬಾಳಿಗೆ ಬೆಳಕಾಗುತ್ತಿದ್ದಾರೆ.

ಬ್ರಹ್ಮಾವರದ ಆಕಾಶವಾಣಿ ಸಮೀಪದಲ್ಲಿರುವ ಗಿರಿಜಾ ಕೃಷ್ಣ ಪೂಜಾರಿ ಚಾರಿಟೇಬಲ್ ಟ್ರಸ್ಟ್ (ರಿ.) ಕೂರಾಡಿ ಅವರ ಅಪ್ಪ-ಅಮ್ಮ ಅನಾಥಾಲಯ ನೊಂದವರ ಬದುಕಿಗೆ ಆಧಾರ ಸ್ಥಂಭವಾಗಿ ಹಲವಾರು ಹಿರಿಯ ಜೀವಗಳ ಕಣ್ಣೀರ ಒರೆಸುವ ಕೆಲಸ ಮಾಡುತ್ತಿದೆ. ಅನಾಥಾಲಯ ಸ್ಥಾಪಿಸಿ 18 ತಿಂಗಳು ಕಳೆದಿದ್ದು ನಿರ್ಗತಿಕರು, ಮಾನಸಿಕ ಅಸ್ವಸ್ಥರು, ಅನಾಥರು ಸೇರಿದಂತೆ 38 ಜನರಿಗೆ ಪುನರ್ವಸತಿ ಕಲ್ಪಿಸಿದ್ದಾರೆ. 19 ಜನರ ಅಪರಿಚಿತರ ವಿಳಾಸ ಪತ್ತೆಗೊಳಿಸಿ ಮನೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಆಶ್ರಮದಲ್ಲಿ 20 ಜನ ಹಿರಿಯ ನಾಗರಿಕರನ್ನು ಅನಾಥ ಪ್ರಜ್ಞೆ ಕಾಡದಂತೆ ವ್ಯವಸ್ಥಿತವಾಗಿ ನೋಡಿಕೊಳ್ಳಲಾಗುತ್ತಿದೆ. ಎಲ್ಲವನ್ನೂ ಉಚಿತವಾಗಿಯೇ ನಿಭಾಯಿಸುತ್ತಿದ್ದಾರೆ.

ಇಷ್ಟೇ ಅಲ್ಲದೇ ಉಚಿತ ಅಂಬುಲೆನ್ಸ್ ಸೇವೆ ಒದಗಿಸುತ್ತಿದ್ದಾರೆ, ಹಾಗೆ ಉಡುಪಿ ಜಿಲ್ಲೆಯ ಕಾಡೂರು ಪಂಚಾಯತ್ ಮುಂಡಾಡಿ ಗ್ರಾಮದ ಶೌಚಾಲಯ ಹೊಸ ಮನೆ ನಿರ್ಮಿಸುವಲ್ಲಿ ಅವರ ಶ್ರಮ -ಕೊಡುಗೆ ದೊಡ್ಡದಿದೆ.

ತಮ್ಮನ್ನು ಹೆತ್ತು ಹೊತ್ತು ಸಲಹಿದ ಸ್ವಂತ ತಂದೆ-ತಾಯಿಯರನ್ನು ಬೀದಿ ಪಾಲು ಮಾಡುವ ಕೆಲವು ಸ್ವಾರ್ಥಿಗಳ ನಡುವೆ ಹಿರಿಯ ನಾಗರಿಕರು, ನಿರ್ಗತಿಕರು, ಅನಾಥರಿಗೆ ಹೊಸ ಜೀವನ ನೀಡಿ ಅವರು ನಮ್ಮಂತೆ ಬದುಕು ಸಾಗಿಸಬೇಕು ಎನ್ನುವ ಪ್ರಶಾಂತ ಪೂಜಾರಿ ಎನ್ನುವ ಯುವಕನ ನಿಸ್ವಾರ್ಥ ಸೇವೆಗೆ ಮೆಚ್ಚಲೇಬೇಕಾದ್ದು.

Click here

Click here

Click here

Click Here

Call us

Call us

ನೀವೂ ಸ್ಪಂದಿಸಿ:
ಅಪ್ಪ-ಅಮ್ಮ ಅನಾಥಾಲಯಕ್ಕೆ ಹಣ ಅಥವಾ ವಸ್ತುವಿನ ರೂಪದಲ್ಲಿ ಸಹಾಯ ಮಾಡಲು ಮನಸ್ಸಿರುವವರು ಪ್ರಶಾಂತ್ ಪೂಜಾರಿ, ಸಂಚಾಲಕರು (9164765898) ಅಪ್ಪ-ಅಮ್ಮ ಅನಾಥಾಲಯ, ಬ್ರಹ್ಮಾವರ, ಪೆಟ್ರೋಲ್ ಬಂಕ್ ಬಳಿ, ನೇರವಾಗಿ ತಲುಪಿಸಿ ಅಥವಾ ಗಿರಿಜಾ ಕೃಷ್ಣ ಚಾರಿಟೇಬಲ್ ಟ್ರಸ್ಟ್(ರಿ) ಕೂರಾಡಿ ಖಾತೆ ಸಂಖ್ಯೆ -021030700001450 IFSC code-SYNB0000210, GOOGLE PAY – 9164765898ಗೆ  ಜಮಾ ಮಾಡಬಹುದು.

ಸಮಾಜದಲ್ಲಿ ಎಲ್ಲಾ ಇದ್ದು ಯಾರು ಇಲ್ಲದ ಹಾಗೆ ಬದುಕುವುದು ತುಂಬಾ ನೋವಿನ ಸಂಗತಿ. ನಿರ್ಗತಿಕರು, ಅನಾಥರಿಗೆ ಹೊಸ ಬದುಕು ಕಲ್ಪಿಸುವ ಇಂಗಿತ ನಮ್ಮದು, ಸರಕಾರ ಇದರ ಬಗ್ಗೆ ಕಾಳಜಿ ವಹಿಸಿ ಸಹಕಾರ ನೀಡಬೇಕು, ಅವರು ನಮ್ಮಂತೆ ಬದುಕುವಂತೆ ದಾರಿ ತೋರಬೇಕು. -ಪ್ರಶಾಂತ್ ಪೂಜಾರಿಸಂಚಾಲಕರು, ಅಪ್ಪ-ಅಮ್ಮ ಅನಾಥಾಲಯ

Leave a Reply