ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಗೆ ಧ್ವನಿವರ್ಧಕ ಕೊಡುಗೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಪ್ರತಿಭೆ ನಿಮ್ಮದು ವೇದಿಕೆ ನಮ್ಮದು ವಿಶಿಷ್ಟ ಸರಣಿ ಕಾರ್ಯಕ್ರಮದಡಿ ನಿರಂತರ ಪ್ರತೀ ತಿಂಗಳು ಕಾರ್ಯಕ್ರಮ ಸಂಘಟಿಸಿ ಐದು ವರ್ಷ ಯಶಸ್ವಿಯಾಗಿ ಪೂರೈಸಿ ಸಾಂಸ್ಕೃತಿಕ ರಂಗಭೂಮಿಯಲ್ಲಿ ಎಲ್ಲರ ಗಮನ ಸೆಳೆದಿದೆ.ಸರಕಾರ, ಇಲಾಖೆ ಹಾಗೂ ಅಕಾಡೆಮಿಗಳ ಯಾವುದೇ ಧನಸಹಾಯ ಪಡೆಯದೇ ಕಾರ್ಯ ನಿರ್ವಹಿಸುತ್ತಿರುವುದು ಈ ಅಕಾಡೆಮಿಯ ವಿಶೇಷ. ಅನೇಕ ಅಡ್ಡಿ, ಆತಂಕಗಳನ್ನು ದಾಟಿ ೩೫೦ ವರ್ಷದ ಆರನೇ ತಲಾಂತರದ ಪರಂಪರೆಯನ್ನು ಜೀವಂತವಾಗಿರಿಸುವ ಹೊಣೆ ಹೊತ್ತ ಈ ಸಂಸ್ಥೆಗೆ ಸಾರ್ವಜನಿಕರ ಸಹಕಾರ, ಪ್ರೋತ್ಸಾಹವೇ ಜೀವಾಳ.

Call us

Click Here

ಕೋವಿಡ್-19 ಇಂತಹ ವಿಷಮ ಪರಿಸ್ಥಿತಿಯಲ್ಲಿ ಜಗತ್ತೇ ಸ್ತಬ್ಧವಾಗಿರುವ ಗೊಂದಲಗಳ ನಡುವೆಯೂ ಈ ಗೊಂಬೆಯಾಟ ಅಕಾಡೆಮಿಯ ನಿರಂತರ ಚಟುವಟಿಕೆ ಹಾಗೂ ಸಾಧನೆಯ ಹಿನ್ನೆಲೆಯನ್ನು ಕಂಡು ಕಾರ್ಯಕ್ರಮಕ್ಕೆ ಅಗತ್ಯವೆನಿಸಿದ ಧ್ವನಿವರ್ಧಕವನ್ನು ಕೊಡುಗೆಯಾಗಿ ನೀಡಿದ ನಿವೃತ್ತ ಬ್ಯಾಂಕ್ ಮೆನೇಜರ್ ವಿಶ್ವಂಭರ ಐತಾಳ್ ಹಾಗೂ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜ್ಯೋತಿ ಐತಾಳ್ ದಂಪತಿಗಳು ಅಭಿನಂದನಾರ್ಹರು.

ಈ ದಂಪತಿಗಳ ಅತ್ಯುತ್ಸಾಹವೇ ಗೊಂಬೆಯಾಟ ಅಕಾಡೆಮಿಯ ವೇದಿಕೆಯಲ್ಲಿ ತುರ್ತಾಗಿ, ಸರಳವಾಗಿ ಕರೋನಾ ಜಾಗೃತಿಯೊಂದಿಗೆ ಸಮಾರಂಭಕ್ಕೆ ನಾಂದಿ ಹಾಡಿತು. ಧ್ವನಿವರ್ಧಕವನ್ನು ಕೊಡುಗೆಯಾಗಿ ನೀಡಿದ ದಂಪತಿಗಳನ್ನು ಅಕಾಡೆಮಿಯ ಸದಸ್ಯರುಗಳು ಸೇರಿ ಗೌರವಿಸಿದರು. ಶ್ರೀಮತಿ ದೇವಕಿ ಪ್ರಭು, ತಲ್ಲೂರು ಇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಅಕಾಡೆಮಿಯ ಅಧ್ಯಕ್ಷರಾದ ಭಾಸ್ಕರ್ ಕೊಗ್ಗ ಕಾಮತ್ ರವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲರಾದ ಎಮ್. ರತ್ನಾಕರ್ ಪೈ ಯವರ ಅಧ್ಯಕ್ಷತೆಯಲ್ಲಿ ಹಾಗೇ ಅಕಾಡೆಮಿಯ ಹಿತೈಶಿ ಪತ್ರಕರ್ತ ಸಂತೋಷ್ ಕೋಣಿಯವರ ನೇತೃತ್ವದಲ್ಲಿ ಊರಿನ ಪುರೋಹಿತರಾದ ರವೀಶ್ ಹೊಳ್ಳ ರ ಸಮ್ಮುಖದಲ್ಲಿ ವಿಶ್ವಂಭರ ಐತಾಳ್ ಹಾಗೂ ಜ್ಯೋತಿ ಐತಾಳ್ ರವರನ್ನು ವಾಡಿಕೆಯಂತೆ ಫಲ ಪುಷ್ಟ ನೀಡಿ ಗೌರವಿಸಲಾಯಿತು. ಶಿಕ್ಷಕ ನಾಗೇಶ್ ಶ್ಯಾನುಭಾಗ್, ಬಂಟ್ವಾಡಿ ಯವರು ಈ ಚುಟುಕು ಸನ್ಮಾನ ಸಭಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಶಿಕ್ಷಕ ಉದಯ ಭಂಡಾರ್‌ಕಾರ್ ರವರು ಧನ್ಯವಾದ ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಕೃಷ್ಣಮೂರ್ತಿ, ಗೊಂಬೆಯಾಟ ಕಲಾವಿದರಾದ ಮಂಜುನಾಥ ಮೈಪಾಡಿ, ಪ್ರಭಾಕರ ಆಚಾರ್ ಉಪಸ್ಥಿತರಿದ್ದರು. ಚೇತನಾ ಶ್ಯಾನುಭಾಗ್ ಬಂಟ್ವಾಡಿ ಸಹಕರಿಸಿದರು.

 

Leave a Reply