ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಆಟಿ ಅಮವಾಸ್ಯೆಯಂದು ಆಚರಿಸಲಾಗುತ್ತಿರುವ ಕುಂದಾಪ್ರ ಕನ್ನಡ ದಿನದ ಅಂಗವಾಗಿ ಕಲಾಕ್ಷೇತ್ರ – ಕುಂದಾಪುರ ಸಂಸ್ಥೆಯು ನೇತೃತ್ವದಲ್ಲಿ ಜುಲೈ 20ರಂದು ‘ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ’ ಆಚರಿಸಲಾಗುತ್ತಿದೆ.
ಅಂದು ಸಂಜೆ ನಾಲ್ಕು ಗಂಟೆಗೆ ಯಕ್ಷಗಾನದ ಹಾಸ್ಯ ಕಲಾವಿದ ಹಳ್ಳಾಡಿ ಜಯರಾಮ್ ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಹಿರಿಯ ಸಾಹಿತಿ, ರೊಟರಿ ಮಾಜಿ ಗವರ್ನರ್ ಎ.ಎಸ್.ಎನ್. ಹೆಬ್ಬಾರ್ ಅವರು ಕುಂದಾಪ್ರ ಕನ್ನಡದ ಇತಿಹಾಸ ಹಾಗೂ ಬೆಳೆದು ಬಂದ ಹಾದಿಯ ಬಗ್ಗೆ ಮಾತನಾಡಲಿಕ್ಕಿದ್ದಾರೆ.
ಬಹಿರಂಗ ಸಭೆಗೆ ಅವಕಾಶವಿಲ್ಲದ ಕಾರಣ ಪ್ರಮುಖ ಆಹ್ವಾನಿತರು ಈ ಸಮಾರಂಭದಲ್ಲಿ ಭಾಗವಹಿಸಲಿದ್ದು, ಕಾರ್ಯಕ್ರಮದ ನೇರಪ್ರಸಾರವನ್ನು ಕಲಾಕ್ಷೇತ್ರ ಕುಂದಾಪುರ ಹಾಗೂ ಕುಂದಾಪ್ರ ಡಾಟ್ ಕಾಂ ಫೇಸ್ಬುಕ್ ಪೇಜ್ ಮೂಲಕ ವೀಕ್ಷಿಸಬಹುದಾಗಿದೆ.
ಪ್ರಬಂಧ ಸ್ಪರ್ಧೆ:
ನೆರ‍್ಮನಿ ಹಾಳಾರೆ ಕರಿನ ಕಟ್ಟುಕೆ ಜಾಗ ಆಯ್ತ್ ಅಂದಿನಂಬ್ರ್ ಎಂಬ ಕುಂದಾಪ್ರ ಕನ್ನಡ ಚಾಟೋಕ್ತಿಯ ಮೇಲೆ ಎ4 ಅಳತೆಯ ಹಾಳೆಯಲ್ಲಿ ಒಂದು ಪುಟಕ್ಕೆ ಮೀರದಂತೆ ಪ್ರಬಂಧವನ್ನು ಕೈ ಬರಹದ ಮೂಲಕ ಬರೆದು, ಅದರ ಪೋಟೋವನ್ನು ವಾಟ್ಸಪ್, ಇಮೇಲ್ ಅಥವಾ ಅದರ ಮೂಲ ಪ್ರತಿಯನ್ನು ಅಂಚೆಯ ಮೂಲಕ ಜುಲೈ 28ರ ಒಳಗಾಗಿ ನಮಗೆ ಕಳುಹಿಸಬಹುದಾಗಿದೆ. ತೀರ್ಮಾನಕಾರಕರ ತೀರ್ಮಾನದಂತೆ ಉತ್ತಮವಾಗಿ ಮಂಡಿಸಲಾದ ಮೂರು ಪ್ರಭಂಧವನ್ನು ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಎಂದು ಘೋಷಿಸಿ ಆಗೋಸ್ಟ್ 1 ರಂದು ಬಹುಮಾನ ನೀಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಬಿ. ಕಿಶೋರ್ ಕುಮಾರ್ ಕುಂದಾಪುರ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
- ಕಛೇರಿ ವಿಳಾಸ:
ಕಲಾಕ್ಷೇತ್ರ-ಕುಂದಾಪುರ
ಪ್ರಥಮ ಮಹಡಿ
ಎ. ವಿ .ಎನ್. ಬಿಲ್ಡಿಂಗ್
ಯಡ್ತರೆ ಮಂಜಯ್ಯ ಶೆಟ್ಟಿ ರಸ್ತೆ, ಕುಂದಾಪುರ
ಇಮೇಲ್: kalakshtra@gmail.com
ವಾಟ್ಸ್ಯಾಪ್ ನಂ: 9844783053