ದ್ವಿತೀಯ ಪಿಯುಸಿ ಫಲಿತಾಂಶ: ವಿವಿಧ ಕಾಲೇಜು ವಿದ್ಯಾರ್ಥಿಗಳ ಸಾಧನೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: 2019–20ನೇ ಸಾಲಿನ ರಾಜ್ಯದ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ವಿವಿಧ ಕಾಲೇಜುಗಳು ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ.

Call us

Click Here

ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜಿಗೆ ಶೆ.100 ಫಲಿತಾಂಶ
ಕುಂದಾಪುರದ ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜು ಶೇ 100 ರಷ್ಟು ಫಲಿತಾಂಶ ದಾಖಲಿಸಿದೆ.

ವಾಣಿಜ್ಯ ವಿಭಾಗದಲ್ಲಿ ಸ್ವಾತಿ ಪೈ 594 ಅಂಕ ಗಳಿಸಿ ರಾಜ್ಯಕ್ಕೆ ನಾಲ್ಕನೇ ಸ್ಥಾನ ಗಳಿಸುವುದರೊಂದಿಗೆ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 84 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 45ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ಮತ್ತು 39 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ರಾಜ್ಯಮಟ್ಟದಲ್ಲಿ ಸೋಹನ್ ಕುಮಾರ್ ಶೆಟ್ಟಿ 589 ಅಂಕಗಳಿಸಿ ರಾಜ್ಯಕ್ಕೆ ಏಳನೇ ಸ್ಥಾನ ಮತ್ತು ಭುವನ್ 588 ಅಂಕಗಳಿಸಿ ಎಂಟನೇ ಸ್ಥಾನ ಗಳಿಸಿದ್ದಾರೆ. ಈ ಬಾರಿಯ ವಿಜ್ಞಾನ ವಿಭಾಗದಲ್ಲಿ 118 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 63 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ಮತ್ತು 55 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಗುರುಕುಲ ಪದವಿ ಪೂರ್ವ ಕಾಲೇಜಿಗೆ ಶೇ.100 ಫಲಿತಾಂಶ:
ಕೋಟೇಶ್ವರ–ವಕ್ವಾಡಿಯ ಬಾಂಡ್ಯಾ ಎಜ್ಯುಕೇಶನ್ ಟ್ರಸ್ಟ್‌ನ ಗುರುಕುಲ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಶೇ.100 ಫಲಿತಾಂಶವನ್ನು ದಾಖಲಿಸಿದ್ದಾರೆ ಎಂದು ಆಡಳಿತ ಮಂಡಳಿಯ ಜಂಟಿ ಆಡಳಿತ ಟ್ರಸ್ಟಿ ಅನುಪಮಾ ಎಸ್‌ ಶೆಟ್ಟಿ ತಿಳಿಸಿದ್ದಾರೆ.

Click here

Click here

Click here

Click Here

Call us

Call us

ಪರೀಕ್ಷೆಯ ಬರೆದ ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದ ಒಟ್ಟು ವಿದ್ಯಾರ್ಥಿಗಳಲ್ಲಿ ಶೇ.33 ಮಂದಿ ವಿಶಿಷ್ಠ ಶ್ರೇಣಿಯಲ್ಲಿ ಹಾಗೂ ಶೇ. 67 ಮಂದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಿರೂರು ಗ್ರೀನ್ ವ್ಯಾಲಿ ಶೇ.100 ಫಲಿತಾಂಶ
ಶಿರೂರು ಗ್ರೀನ್ ವ್ಯಾಲಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಶೇ.100 ಫಲಿತಾಂಶ ದಾಖಲಿಸಿದ್ದಾರೆ. 52 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಎಲ್ಲಾ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಫಾತಿಮಾ (567), ಮರಿಯಮ್ (557) ಹಾಗೂ ಅಫ್ಸಲ್ ಸರೀಫ್ (556) ಅಂಕ, ವಾಣಿಜ್ಯ ವಿಭಾಗದಲ್ಲಿ ಆಯೆಷಾ ಜೈಬಾ (576), ಮೌಲಾನಾ ಆಸ್ಮಿಯಾ (542), ಕಸ್ಮಾ ಬಿಬಿ ನೌಝಾಫಾ (536) ಅಂಕ ಪಡೆದಿದ್ದಾರೆ.

ಆರ್‌.ಶೆಟ್ಟಿ ಕಾಲೇಜಿಗೆ ಶೇ.99.06 ಫಲಿತಾಂಶ
ಆರ್.ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಶೇ. 99.06 ಫಲಿತಾಂಶವನ್ನು ದಾಖಲಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ. 99.47 ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ. 98.73 ಫಲಿತಾಂಶ ಬಂದಿದೆ. ಪರೀಕ್ಷೆಗೆ ಕುಳಿತಿರುವ ವಿದ್ಯಾರ್ಥಿಗಳ ಪೈಕಿ 169 ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲಿ ಹಾಗೂ 233 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಪ್ರಥ್ವಿ ಪಿ ಪುತ್ರನ್ (587), ಶೋನಿಮಾ ಪಿ (586), ಅಭಿಲಾಷ್ ಹತ್ವಾರ್ (586), ವಾಣಿಜ್ಯ ವಿಭಾಗದಲ್ಲಿ ರೋನ್ಸನ್ ಇಮ್ಯಾನುಲ್ ಮಿನೆಜಸ್ (585), ಅಭಿಶ್ರೀ ಮಧ್ಯಸ್ಥ (584) ಅಂಕಗಳನ್ನು ಗಳಿಸಿ ಕಾಲೇಜಿಗೆ ಪ್ರಥಮ, ದ್ವಿತೀಯ ಸ್ಥಾನ ಗಳಿಸಿದ್ದಾರೆ ಎಂದು ಸಂಸ್ಥೆಯ ಪ್ರಾಂಶುಪಾಲ ನವೀನ್‌ಕುಮಾರ ಶೆಟ್ಟಿ ತಿಳಿಸಿದ್ದಾರೆ.

ಎಕ್ಸಲೆಂಟ್ ಪಿಯು ಕಾಲೇಜು ಸುಣ್ಣಾರಿ ಫಲಿತಾಂಶ
ಸುಣ್ಣಾರಿಯ ಎಕ್ಸಲೆಂಟ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ದಾಖಲಿಸಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಸಾಯಿ ಪುಪ್ಪಾಂಜಲಿ ಶೆಟ್ಟಿ 588 ಅಂಕ ಪಡೆದು ರಾಜ್ಯದಲ್ಲಿ 9ನೇ ರ್ಯಾಂಕ್ ಪಡೆದಿದ್ದಾರೆ. ಸುಶ್ಮಿತಾ ಶೆಟ್ಟಿ (581), ವರ್ಷಾ ಶೆಟ್ಟಿ (579), ಅನುಷಾ ಶಾನುಭಾಗ್ (577), ಸ್ವಾತಿ ಪೈ (577), ಶೋಧನ್ ಶೆಟ್ಟಿ (575), ಸುನಿಧಿ (575), ಶ್ರೀನಿವಾಸ ಸಾಮಗ (571), ತನ್ವಿ ಹೆಗ್ಡೆ (570), ಯುಕ್ತಿ ಮೇಸ್ತಾ (570), ಪ್ರಗತಿ ನಾಯಕ್(570), ವಾಣಿಜ್ಯ ವಿಭಾಗದಲ್ಲಿ ಮನ್ವಿತ್(579), ಭಾರವಿ (574), ಮನೀಷ್ ಶೆಟ್ಟಿ (572), ಪ್ರೀಯಾ ಶೆಟ್ಟಿ (570) ಅಂಕ ಪಡೆದಿದ್ದಾರೆ.

ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿಗೆ ಶೇ. 95.6 ಫಲಿತಾಂಶ
ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಉತ್ತಮ ಸಾಧನೆ ಮಾಡಿದ್ದು, ಶೇ. 95.6 ಫಲಿತಾಂಶ ದಾಖಲಿಸಿದೆ.
ಪರೀಕ್ಷೆಗೆ ಹಾಜರಾದ ಒಟ್ಟು 159 ವಿದ್ಯಾರ್ಥಿಗಳ ಪೈಕಿ 152 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. 42 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 88 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 17 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಹಫ್ಸಾ (586), ವಾಣಿಜ್ಯ ವಿಭಾಗದಲ್ಲಿ ಅಕ್ಷಿತಾ (574) ಮತ್ತು ಯಶ್ರ (574) ಹಾಗೂ ಕಲಾ ವಿಭಾಗದಲ್ಲಿ ಚೈತ್ರ (557) ಕಾಲೇಜಿನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಗಣಿತಶಾಸ್ತ್ರ, ಅರ್ಥಶಾಸ್ತ್ರ ಮತ್ತು ಸಂಸ್ಕೃತದಲ್ಲಿ ತಲಾ ಮೂವರು ವಿದ್ಯಾರ್ಥಿಗಳು, ಅಕೌಂಟೆನ್ಸಿ, ಕಂಪ್ಯೂಟರ್ ಸಾಯನ್ಸ್ ಮತ್ತು ಬಯೋಲಜಿಯಲ್ಲಿ ತಲಾ ಒಬ್ಬರು 100 ಅಂಕ ಪಡೆದುಕೊಂಡಿದ್ದಾರೆ.

ಭಂಡಾರ್‌ಕಾರ್ಸ್‌ ಕಾಲೇಜಿಗೆ ಶೇ. 94.37 ಫಲಿತಾಂಶ
ಇಲ್ಲಿನ ಭಂಡಾರ್‌ಕಾರ್ಸ್‌ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಈ ಬಾರಿ ಶೇ. 94.37 ಫಲಿತಾಂಶ ಪಡೆದುಕೊಂಡಿದ್ದಾರೆ. 24 ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲಿ ಹಾಗೂ 82 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಕೀರ್ತಿಕೆ (574) ಪ್ರಥಮ, ಕೇಶವ ಪೂಜಾರಿ (568) ದ್ವಿತೀಯ, ಸಾಗರಿಕಾ ಎನ್ (559) ಹಾಗೂ ಸೃಜನ್ ಆರ್. ಕುಲಾಲ್ (559) ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಶ್ರೇಯಾ ಭಟ್ (588) ಪ್ರಥಮ, ಕೆ.ಕಿರಣ್ ಕಾಮತ್‌ (572) ದ್ವಿತೀಯ, ಪಲ್ಲವಿ (544) ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಕಲಾ ವಿಭಾಗದಲ್ಲಿ ಭ್ರಮರ ಕೆ (552) ಪ್ರಥಮ , ಸುನಿಲ್ ನಾಯಕ್ (503) ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕುಂದಾಪುರ ಸರ್ಕಾರಿ ಪಿ.ಯು ಕಾಲೇಜಿಗೆ ಶೇ.83 ಫಲಿತಾಂಶ
ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ, ಕಲಾ ಹಾಗೂ ವಾಣಿಜ್ಯ ವಿಭಾಗದಲ್ಲಿನ 704 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಶೇ.83 ಫಲಿತಾಂಶ ದಾಖಲಿಸಿದ್ದಾರೆ. 54 ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ನಿಶ್ಮಿತಾ (578) ಪ್ರಥಮ, ಸಂಗೀತಾ (563) ದ್ವಿತೀಯ, ಜೆಸ್ಲೀಟಾ ವಿಯೋಲಾ ಆಲ್ಮೇಡಾ (561) ತೃತೀಯ, ಕಲಾ ವಿಭಾಗದಲ್ಲಿ ಲಾವಣ್ಯ (526) ಪ್ರಥಮ, ಶರಣಪ್ಪ ಬಸಪ್ಪ ಕಲಕಟ್ಟಿ (518) ದ್ವಿತೀಯ, ಸುಚಿತ್ರಾ ಸುಬ್ರಾಯ ಶೆಟ್ಟಿ (499) ತೃತೀಯ, ವಾಣಿಜ್ಯ ವಿಭಾಗದಲ್ಲಿ ಸ್ನೇಹಾ (567) ಪ್ರಥಮ, ನಿಶಾ ಎಸ್‌ ನಾಯ್ಕ್‌ (566) ದ್ವಿತೀಯ ಹಾಗೂ ವಿ.ನವನೀತಾ (554) ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬೈಂದೂರು ಸರಕಾರಿ ಪಿ.ಯು ಕಾಲೇಜಿಗೆ ಶೇ.82.5 ಫಲಿತಾಂಶ
ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಒಟ್ಟು ವಿಜ್ಞಾನ ವಿಭಾಗದಲ್ಲಿ ಶೆ. 90.8, ವಾಣಿಜ್ಯ ವಿಭಾಗದಲ್ಲಿ ಶೇ.80.2 ಹಾಗೂ ಕಲಾ ವಿಭಾಗದಲ್ಲಿ ಶೇ.46 ಫಲಿತಾಂಶ ದಾಖಲಿಸಿದೆ.

ವಿಜ್ಞಾನ ವಿಭಾಗದಲ್ಲಿ ಅನುಶ್ರೀ (570) ವಾಣಿಜ್ಯ ವಿಭಾಗದಲ್ಲಿ ದೀಪಕ್ (570), ಕಲಾ ವಿಭಾದಲ್ಲಿ ಅಜೀನಾ ಕೆ. ಎಸ್ (452) ಅಂಕ ಪಡೆದುಕೊಂಡಿದ್ದಾರೆ. ಒಟ್ಟು 47 ವಿದ್ಯಾರ್ಥಿಗಳು ವಿಶಿಷ್ಟ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಪ್ರಕರಣೆ ತಿಳಿಸಿದೆ.

 

Leave a Reply