ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯಲ್ಲಿ ಜು.21ರ ಮಂಗಳವಾರ 84 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಈ ಪೈಕಿ ಕುಂದಾಪುರ ತಾಲೂಕಿನ 43, ಉಡುಪಿ ತಾಲೂಕಿನ 37 ಹಾಗೂ ಕಾರ್ಕಳ ತಾಲೂಕಿನ 4 ಮಂದಿಗೆ ಪಾಸಿಟಿವ್ ಬಂದಿದೆ. ಒಟ್ಟು ಪ್ರಕರಣಗಳಲ್ಲಿ 48 ಪುರುಷರು, 34 ಮಹಿಳೆಯರು, 2 ಮಕ್ಕಳು ಸೇರಿದ್ದಾರೆ.
ಆದಿಉಡುಪಿಯ ಪ್ರಸಿದ್ಧ ಹೋಟೆಲೊಂದರ 18 ಮಂದಿ ನೌಕರರಿಗೆ ಕೋರೋನ ಧೃಡಗೊಂಡಿದೆ. ಈ ಹೋಟೆಲಿನ ಮಾಲಕರಿಗೆ ಈ ಹಿಂದೆಯೇ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ 20 ಮಂದಿ ನೌಕರರು ಹೋಮ್ ಕ್ವಾರಂಟೈನ್ ನಲ್ಲಿದ್ದರು. ಇದೀಗ ಹೋಮ್ ಕ್ವಾರಂಟೈನ್ ನಲ್ಲಿದ್ದ ಹದಿನೆಂಟು ಮಂದಿಗೆ ಕೊರೋನಾ ಪಾಸಿಟಿವ್ ದೃಢಗೊಂಡಿದೆ.
ಕೇರಳ ಕಣ್ಣೂರು ಮೂಲದ 35 ವರ್ಷದ ವ್ಯಕ್ತಿಯೊಬ್ಬರು ಕೆಲವು ದಿನಗಳ ಹಿಂದೆ ಕಿಡ್ನಿ ಸಮಸ್ಯೆಯಿಂದ ಮಣಿಪಾಲದ ಕೆಎಂಸಿ ಯಲ್ಲಿ ದಾಖಲಾಗಿದ್ದರು, ನಿನ್ನೆ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ.
ಎಸ್‌ಪಿ ಕಚೇರಿ, ನ್ಯಾಯಾಲಯ ಸೀಲ್‌ಡೌನ್:
ಉಡುಪಿ ನ್ಯಾಯಾಲಯ ನ್ಯಾಯಾಧೀಶರೊಬ್ಬರಿಗೆ ಕೊರೋನ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ, ಈ ಹಿನ್ನೆಲೆಯಲ್ಲಿ ಉಡುಪಿ ನ್ಯಾಯಾಲಯ ಸಂಕೀರ್ಣ ವನ್ನು ಎರಡು ದಿನಗಳ ಕಾಲ ಸೀಲ್‌ಡೌನ್ ಮಾಡಲಾಗಿದೆ. ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಜೂ.21 ಮತ್ತು 22ರಂದು ಇಡೀ ನ್ಯಾಯಾಲಯವನ್ನು ಸ್ಯಾನಿಟೈಸ್ ಮಾಡಿ, ಜು.23ರಂದು ಮತ್ತೆ ಕಾರ್ಯ ಆರಂಭಿಸಲಾಗುವುದು ಎಂದು ಜಿಲ್ಲಾ ಮುಖ್ಯ ನ್ಯಾಯಾಧೀಶರ ಪ್ರಕಟನೆ ತಿಳಿಸಿದೆ.
ಉಡುಪಿ ಎಸ್‌ಪಿ ಕಚೇರಿಯಲ್ಲಿರುವ ಡಿಸಿಆರ್‌ಬಿ ಮಹಿಳಾ ಸಿಬಂದಿಗೆ ಕೊರೋನಾ ಪಾಸಿಟಿವ್ ಧೃಢವಾಗಿದ್ದು, ಕೆಲವು ದಿನಗಳಿಂದ ರಜೆಯಲ್ಲಿದ್ದ ಮಹಿಳಾ ಸಿಬಂದಿ ಸೋಮವಾರ ಕೆಲಸಕ್ಕೆ ಹಾಜರಾಗಿದ್ದರು. ಇಂದು ಅವರಿಗೆ ಸೋಂಕು ಧೃಢವಾದದ್ದರಿಂದ, ಎಸ್‌ಪಿ ಕಚೇರಿಯನ್ನು ಬಂದ್ ಮಾಡಿ ಸಾನಿಟೈಸರ್ ಮಾಡಲಾಗುತ್ತಿದ್ದೆಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಎಸ್‌ಪಿ ಕಚೇರಿಯಲ್ಲಿ ಈ ಮೊದಲು ಇಬ್ಬರಿಗೆ ಸೋಂಕು ಧೃಢವಾಗಿತ್ತು
103 ನೆಗೆಟಿವ್:
ಈ ತನಕ ಒಟ್ಟು 25,346 ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 22,460 ನೆಗೆಟಿವ್, 2,405 ಪಾಸಿಟಿವ್ ಬಂದಿದ್ದು, 481 ಮಂದಿಯ ವರದಿ ಬರುವುದು ಬಾಕಿ ಇದೆ. ಇಂದು ಬಂದಿರುವ ವರದಿಯಲ್ಲಿ 103 ನೆಗೆಟಿವ್, 84 ಪಾಸಿಟಿವ್ ಬಂದಿದೆ. ಒಟ್ಟು 2,013 ಮಂದಿ ಹೋಮ್ ಕ್ವಾರಂಟೈನಿನಲ್ಲಿದ್ದಾರೆ.
653 ಸಕ್ರಿಯ ಪ್ರಕರಣ:
ಜಿಲ್ಲೆಯಲ್ಲಿ ಒಟ್ಟು 2,405 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 1,742 ಮಂದಿ ಬಿಡುಗಡೆಯಾಗಿದ್ದು, 653 ಮಂದಿ ಕೊರೋನಾ ಸೋಂಕಿತರಿಗೆ ಉಡುಪಿ, ಕುಂದಾಪುರ, ಕಾರ್ಕಳದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ ಕೊರೋನಾ ಪಾಸಿಟಿವ್ ಇದ್ದ 10 ಮಂದಿ ಮೃತಪಟ್ಟಿದ್ದಾರೆ.
ಇದನ್ನೂ ಓದಿ:
► ಉಡುಪಿ ಡಿಸಿ ನೇತೃತ್ವದಲ್ಲಿ ಕಾರ್ಯಾಚರಣೆ: ಮಾಸ್ಕ್ ಹಾಕದ, ಸಾಮಾಜಿಕ ಅಂತರ ಪಾಲಿಸದವರಿಂದ ದಂಡ ವಸೂಲಿ – https://kundapraa.com/?p=39752 .
► ಉಡುಪಿ ಜಿಲ್ಲೆಯಲ್ಲಿ ನಾಳೆಯಿಂದ ಬಸ್ ಸಂಚಾರ, ಗಡಿ ಸೀಲ್ ಡೌನ್ ತೆರವು: ಜಿಲ್ಲಾಧಿಕಾರಿ – https://kundapraa.com/?p=39760 .