ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯಲ್ಲಿ ಜು.23ರ ಗುರುವಾರ 160 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಈ ಪೈಕಿ ಕುಂದಾಪುರ ತಾಲೂಕಿನ 60, ಉಡುಪಿ ತಾಲೂಕಿನ 87 ಹಾಗೂ ಕಾರ್ಕಳ ತಾಲೂಕಿನ 13 ಮಂದಿಗೆ ಪಾಸಿಟಿವ್ ಬಂದಿದೆ. ಒಟ್ಟು ಪ್ರಕರಣಗಳಲ್ಲಿ 87 ಪುರುಷರು, 59 ಮಹಿಳೆಯರು, 14 ಮಕ್ಕಳು ಸೇರಿದ್ದಾರೆ.
ಇವರಲ್ಲಿ 13 ಮಂದಿ ಮುಂಬೈ, 6 ಮಂದಿ ಬೆಂಗಳೂರು, 2 ಪುಣೆ, ಓರ್ವ ವ್ಯಕ್ತಿ ಮಂಗಳೂರು ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ. ಸಾರಿ 4 ಪ್ರಕರಣ, ILI 42 ಪ್ರಕರಣಗಳಾಗಿದ್ದು ಉಳಿದ ಪ್ರಕರಣಗಳು ಪ್ರಾಥಮಿಕ ಸಂಪರ್ಕದಿಂದ ಬಂದಿದೆ. ಇಂದು 65 ಮಂದಿ ಬಿಡುಗಡೆಗೊಂಡಿದ್ದಾರೆ.
276 ನೆಗೆಟಿವ್:
ಈ ತನಕ ಒಟ್ಟು 26,370 ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 22,871 ನೆಗೆಟಿವ್, 2,846 ಪಾಸಿಟಿವ್ ಬಂದಿದ್ದು, 653 ಮಂದಿಯ ವರದಿ ಬರುವುದು ಬಾಕಿ ಇದೆ. ಇಂದು ಬಂದಿರುವ ವರದಿಯಲ್ಲಿ 276 ನೆಗೆಟಿವ್, 160 ಪಾಸಿಟಿವ್ ಬಂದಿದೆ. ಒಟ್ಟು 1,684 ಮಂದಿ ಹೋಮ್ ಕ್ವಾರಂಟೈನಿನಲ್ಲಿದ್ದಾರೆ.
994 ಸಕ್ರಿಯ ಪ್ರಕರಣ:
ಜಿಲ್ಲೆಯಲ್ಲಿ ಒಟ್ಟು 2,846 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 1,841 ಮಂದಿ ಬಿಡುಗಡೆಯಾಗಿದ್ದು, 994 ಮಂದಿ ಕೊರೋನಾ ಸೋಂಕಿತರಿಗೆ ಉಡುಪಿ, ಕುಂದಾಪುರ, ಕಾರ್ಕಳದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ ಕೊರೋನಾ ಪಾಸಿಟಿವ್ ಇದ್ದ 11 ಮಂದಿ ಮೃತಪಟ್ಟಿದ್ದಾರೆ.
ಇನ್ನಷ್ಟು ಮಾಹಿತಿಗೆ ಕೆಲವು ಸಮಯದ ನಂತರ ಇದೇ ಲಿಂಕ್ ನೋಡಿ