ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದ್ದು, ಸೋಂಕಿತರ ಸಾವಿನ ಸಂಖ್ಯೆಯು ಸಹ ಗಣನೀಯವಾಗಿ ಹೆಚ್ಚಾಗುತ್ತಿರುವುದರಿಂದ ನಾಗರಿಕರು ಮೃತ ಪಟ್ಟಾಗ ಗೌರವಯುತ ಸಂಸ್ಕಾರ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಕೋವಿಡ್ 19 ಸೋಂಕಿತರು ಮೃತಪಟ್ಟಲ್ಲಿ ಅವರ ಶವ ಸಂಸ್ಕಾರಕ್ಕೆ ಸರಕಾರದಿಂದ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲಾಗಿದ್ದು ಅದರಂತೆ ಶವ ಸಂಸ್ಕಾರವನ್ನು ನಡೆಸಲಾಗುತ್ತಿದೆ.
ಆದರೆ ಇತ್ತೀಚಿನ ದಿನಗಳಲ್ಲಿ ಕೋವಿಡ್ 19 ಸೋಂಕಿತರ ಹಾಗೂ ಇತರ ಪ್ರಕರಣಗಳಲ್ಲಿ ಶವ ಸಂಸ್ಕಾರಕ್ಕೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸುತ್ತಿರುವುದು ಕಂಡುಬರುತ್ತಿದ್ದು ,ಇದು ವಿಷಾದನೀಯ ಬೆಳವಣಿಯಾಗಿದೆ. ಸೋಂಕಿತರ ಶವ ಸಂಸ್ಕಾರ ಸರಕಾರದ ನಿರ್ದೇಶನದಂತೆ ನಡೆಸಲಾಗುತ್ತಿದ್ದು, ಜನರು ಯಾವುದೇ ರೀತಿ ಆತಂಕ ಪಡುವ ಅವಶ್ಯಕತೆ ಇಲ್ಲ. ಸಾರ್ವಜನಿಕರು ,ಶವ ಸಂಸ್ಕಾರಕ್ಕೆ ಯಾವುದೇ ರೀತಿಯ ಪ್ರತಿರೋಧ ಒಡ್ಡಬಾರದಾಗಿ ಎಚ್ಚರಿಕೆ ನೀಡಲಾಗಿದೆ. ಯಾರೇ ಆಗಲಿ ಪ್ರತಿರೋಧ ಒಡ್ಡಿದ್ದರೇ ಕಾನೂನಿನಂತೆ ಕಠಿಣಕ್ರಮವನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾದಂಡಧಿಕಾರಿ ಹಾಗೂ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದ್ದಾರೆ.
ಕೋವಿಡ್-19 ಮೃತದೇಹಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಲು ಮಾರ್ಗಸೂಚಿ:
ಕೋವಿಡ್-19 ಪ್ರಕರಣದ ಮೃತ ದೇಹಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡುವುದಕ್ಕೆ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.
ಸಂಪರ್ಕ ಅಧಿಕಾರಿ:
ಸಂಬಂಧ ಪಟ್ಟ ಮೃತದೇಹದ ವಿಳಾಸದ ವ್ಯಾಪ್ತಿಯ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಸಂಪರ್ಕ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿ. ಸಂಬAಧಪಟ್ಟ ತಹಶೀಲ್ದಾರರೊಂದಿಗೆ ಸಂವಹನ ನಡೆಸಿ ಆಡಳಿತಾತ್ಮಕ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಸಮನ್ವಯ ಸಾಧಿಸುವುದು. ಮೃತದೇಹದ ಸಾಗಾಟ ಜವಾಬ್ದಾರಿಯನ್ನು ಆರೋಗ್ಯ ಇಲಾಖೆಯವರು(ಸಂಬAಧ ಪಟ್ಟ ತಾಲೂಕು ವೈದ್ಯಾಧಿಕಾರಿಗಳು ನಿರ್ವಹಿಸುವುದು.
ಅಂತ್ಯಸಂಸ್ಕಾರದ ವಿಧಿಗಳು ನಡೆಯುವಾಗ ಖುದ್ದು ಹಾಜರಾಗಿ ಮೃತದೇಹ ನಿರ್ವಹಣೆಯ ಮಾರ್ಗಸೂಚಿಗಳು ಪಾಲನೆ ಆಗಿರುವುದನ್ನು ಖಚಿತಪಡಿಸಿಕೊಂಡು, ಅಂತ್ಯಸAಸ್ಕಾರದ ವಿಧಿಗಳನ್ನು ಚಿತ್ರೀಕರಿಸುವ ಮೂಲಕ ದಾಖಲೆಗಳನ್ನು ಇಟ್ಟುಕೊಳ್ಳತಕ್ಕದ್ದು. ಜಿಲ್ಲಾ ಮೃತದೇಹ ನಿರ್ವಹಣಾ ತಂಡದವರಿಗೆ ಮಾಹಿತಿ ನೀಡಿ ಸೂಚನೆ ಪಡೆಯುವುದು. ಕೋವಿಡ್-19 ಡೆತ್ ಆಡಿಟ್ ಸಮಿತಿಗೆ ಸೂಕ್ತ ಮಾಹಿತಿ ನೀಡುವುದು.
ಸ್ಮಶಾನದ ವ್ಯವಸ್ಥೆ:
ಗ್ರಾಮೀಣ ಪ್ರದೇಶದಲ್ಲಿ ಮೃತದೇಹದ ವಿಳಾಸ ಗ್ರಾಮ ಪಂಚಾಯತ್ ಆಡಳಿತ ಅಧಿಕಾರಿ/ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಮೃತದೇಹ ವಿಲೇವಾರಿ ಮಾಡುವ ಜವಾಬ್ದಾರಿಯುತ ಅಧಿಕಾರಿಯಾಗಿರುತ್ತಾರೆ. ಹಾಗೆಯೇ ನಗರಗಳಲ್ಲಿ ಮೃತದೇಹಗಳ ವಿಲೇವಾರಿ ಮಾಡಲು ನಗರ ಸಭೆಯ ಆಯುಕ್ತರು /ಮುಖ್ಯಾಧಿಕಾರಿ ಪುರಸಭೆಗಳು /ಪಟ್ಟನ ಪಂಚಾಯತ್ ಮೃತದೇಹ ವಿಲೇವಾರಿ ಮಾಡುವ ಜವಾಬ್ದಾರಿಯುತ ಅಧಿಕಾರಿಯಾಗಿರುತ್ತಾರೆ. ಮೃತದೇಹದ ವಿಲೇವಾರಿ ಬಗ್ಗೆ ಸ್ಮಶಾನದಲ್ಲಿ ಎಲ್ಲಾ ರೀತಿಯ ಅವಶ್ಯಕ ಸೌಲಭ್ಯಗಳ ಬಗ್ಗೆ ಎಲ್ಲಾ ಪಂಚಾಯತ್ ಆಡಳಿತ ಅಧಿಕಾರಿಗಳು/ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು, ನಗರ ಸಭೆಯ ಆಯುಕ್ತರು/ಮುಖ್ಯಾಧಿಕಾರಿ ಪುರಸಭೆಗಳು/ಪಟ್ಟಣ ಪಂಚಾಯತ್ ಅಧಿಕಾರಿಗಳು ಮುಂಚಿತವಾಗಿ ಪರೀಶಿಲಿಸಿ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವುದು. ಹೊರಜಿಲ್ಲೆಯ ಪ್ರಕರಣವಾಗಿದ್ದ ಮೃತದೇಹವಾಗಿದ್ದಲ್ಲಿ ಮೃತದೇಹ ಇರುವ ಸ್ಥಳದ ಅಧಿಕಾರಿಗಳು ಜವಾಬ್ದಾರಿಯುತ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಬೇಕು. ಮೃತರ ಸಂಬAಧಿಕರೊAದಿಗೆ ಸಂವಹನ ನಡೆಸಿ ಅಂತ್ಯಸAಸ್ಕಾರದ ಬಗ್ಗೆ ಸಂಪೂರ್ಣ ಮಾಹಿತಿ ನೀಡುವುದು. ಅಂತ್ಯಸAಸ್ಕಾರ ಸಂಬAಧಿಕರು ಸಮ್ಮತಿಸದಿದ್ದರೇ ಮಾನವ ಸಂಪನ್ಮೂಲ ಹಾಗೂ ಇತರ ವ್ಯವಸ್ಥೆ ಮಾಡುವುದು. ಅಂತಹ ಸಂದರ್ಭಗಳಲ್ಲಿ ತಂಡವನ್ನು ಮೊದಲೇ ತಯಾರು ಮಾಡಿ ಅವರಿಗೆ ತರಬೇತಿ ನೀಡಲು ಸೂಕ್ತ ಕ್ರಮ ತೆಗೆದುಕೊಳ್ಳುವುದು.
ತಾಲೂಕು ದಂಡಾಧಿಕಾರಿ ಹಾಗೂ ತಹಶೀಲ್ದಾರರ ಕರ್ತವ್ಯ:
ಸಂಬಂಧಪಟ್ಟ ತಹಶೀಲ್ದಾರರು ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಹಾಗೂ ಜಿಲ್ಲಾಡಳಿತಕ್ಕೆ ಮಾಹಿತಿ ನೀಡುವುದು.
ಪೊಲೀಸ್ ಇಲಾಖೆ:
ಶವಸಂಸ್ಕಾರಕ್ಕೆ ಅಗತ್ಯ ಪೊಲೀಸ್ ಬಂದೋಬಸ್ತ್ ನೀಡಿ, ಜವಾಬ್ದಾರಿಯುತ ಅಧಿಕಾರಿಗಳು, ಸಂಪರ್ಕ ಅಧಿಕಾರಿಗಳು ಹಾಗೂ ತಾಲೂಕು ದಂಡಾಧಿಕಾರಿಗಳು ಸಂಬAಧಪಟ್ಟ ಪೊಲೀಸ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಅಗತ್ಯ ಬಂದೋಬಸ್ತ್ ಕ್ರಮ ಜರುಗಿಸಿ ಕೋವಿಡ್-19 ಮೃತದೇಹಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಿ ಯಾವುದೇ ವಿಳಂಬ, ನ್ಯೂನತೆಗಳು ಬಾರದಂತೆ ಕಟ್ಟಿನಿಟ್ಟಾಗಿ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಿ.ಜಗದೀಶ್ ಆದೇಶಿಸಿದ್ದಾರೆ.