ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗಡಿ ಭದ್ರತಾ ದಳದಲ್ಲಿ ಡೆಪ್ಯೂಟಿ ಕಮಾಂಡಂಟ್ ಆಗಿದ್ದ ಕಿರಣ್ ಗೋವಿಂದ ಕೊಡ್ಕಣಿ ಅವರು ಸೇವೆಯಿಂದ ನಿವೃತ್ತರಾಗಿದ್ದಾರೆ.
ಕಿರಣ್ ಗೋವಿಂದ ಕಾಶ್ಮೀರದ ಗಡಿಯಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಅವರು ಸಬ್ ಇನ್ಸಪೆಕ್ಟರ್ ಆಗಿ ವೃತ್ತಿ ಜೀವನ ಆರಂಭಿಸಿ ಡೆಪ್ಯೂಟಿ ಕಮಾಂಡಂಟ್ ಹುದ್ದೆಯ ತನಕ ಪದೋನ್ನತಿ ಹೊಂದಿದ್ದರು. ಮೂಲತಃ ಯಲ್ಲಾಪುರವಾದರೂ ಅವರ ಕುಟುಂಬ ಕುಂದಾಪುರದಲ್ಲಿ ನೆಲೆಸಿತ್ತು.