ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಟ್ಕೇರೆ ಯುವಶಕ್ತಿ ಯುವಕ ಮಂಡಲದ ಆಶ್ರಯದಲ್ಲಿ ೭೪ನೇ ಸರಳವಾಗಿ ಸ್ವಾತಂತ್ರೋತ್ಸವ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕೊರೋನಾ ವಾರಿಯರ್ಸ್ ಆಗಿ ಶ್ರಮಿಸಿದ ಸ್ಥಳೀಯ ಆಶಾ ಕಾರ್ಯಕರ್ತೆ ಸುಮಿತ್ರಾ ಶೇಟ್, ಪಂಚಾಯತ್‌ನ ಪೌರ ಕಾರ್ಮಿಕ ಶ್ರೀ ನಾರಾಯಣ ಹಾಗೂ ಅಣ್ಣಪ್ಪ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಯಾಗಿ ಅಡಿಗಾಸ್ ಯಾತ್ರಾದ ಚೇರ್ಮೆನ್ ನಾಗರಾಜ್ ಅಡಿಗ ಆಗಮಿಸಿದ್ದರು. ಜಯಪ್ರಕಾಶ್ ಶೆಟ್ಟಿ ಕಟ್ಕೇರೆ, ಲಕ್ಷ್ಮಣ್ ಶೆಟ್ಟಿ ಕಟ್ಕೇರೆ, ಪ್ರಶಾಂತ್ ಶೆಟ್ಟಿ ಕಟ್ಕೇರೆ, ಗೌರವಾಧ್ಯಕ್ಷರಾದ ಪ್ರವೀಣ್ ಶೆಟ್ಟಿ ಕಟ್ಕೇರೆ, ಕಾರ್ಯದರ್ಶಿ ಸಂತೋಷ ಪೂಜಾರಿ ಕಟ್ಕೇರೆ, ಮಹೇಶ್ ಭಟ್ ಕಟ್ಕೇರೆ, ಮಧುಕರ್ ಕಟ್ಕೇರೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಟ್ಕೇರೆ ಯುವಶಕ್ತಿ ಯುವಕ ಮಂಡಲದ ಅಧ್ಯಕ್ಷರಾದ ಗಣೇಶ ಶೆಟ್ಟಿ ಕಟ್ಕೇರೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಂಜುನಾಥ್ ಪೂಜಾರಿ ಕಟ್ಕೇರೆ ವಂದಿಸಿದರು.