ಬೈಂದೂರು ಕ್ಷೇತ್ರದ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಒತ್ತು: ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದ ಮೂಲಭೂತ ಸೌಕರ್ಯ, ಆಡಳಿತಾತ್ಮಕ ಅಭಿವೃದ್ಧಿ ಸೇರಿದಂತೆ ಜನರ ಬಹುಕಾಲದ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದು, ಪ್ರಸ್ತುತ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಕೆಲವು ಕಾಮಗಾರಿಗಳಿಗೆ ಟೆಂಡರ್ ಹಂತದಲ್ಲಿದೆ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಹೇಳಿದರು.

Call us

Click Here

ಅವರು ಮಂಗಳವಾರ ಬೈಂದೂರು ಪ್ರವಾಸಿ ಮಂದಿರದಲ್ಲಿ ಜರುಗಿದ ಪತ್ರಿಕಾಗೋಷ್ಠಿಯನು ಉದ್ದೇಶಿಸಿ ಮಾತನಾದರು. ನಬಾರ್ಡ್ ಯೋಜನೆಯಡಿ ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ 220 ಕೋಟಿ ರೂಪಾಯಿಗಳ ಅನುದಾನ ಬಿಡುಗಡೆಯಾಗಿರುತ್ತದೆ. ಇದರ ನೀಲಿ ನಕ್ಷೆ ತಯಾರಾಗಿದ್ದು, ಮುಂದಿನ ಎರಡು ವರ್ಷದಲ್ಲಿ ಬೈಂದೂರು ಕ್ಷೇತ್ರದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ. ಸೌಕೂರು ಏತ ನೀರಾವರಿಯ 73 ಕೋಟಿ ಕಾಮಗಾರಿ ಪ್ರಗತಿಯಲ್ಲಿದೆ. ಸುಮಾರು 7 ರಿಂದ 8 ಗ್ರಾಮಕ್ಕೆ ಕೃಷಿ ಚಟುವಟಿಕೆಗೆ ನೀರುಣಿಸುವ ಕಾರ್ಯ ಈ ಯೋಜನೆಯಿಂದ ಸಾಕಾರವಾಗಲಿದೆ. ಸುಮನಾವತಿ ನದಿಗೆ ಸುಬ್ಬರಡಿಯಲ್ಲಿ 35 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಇದರಿಂದ ಮೇಲ್ಭಾಗಕ್ಕೆ ಉಪ್ಪುನೀರು ನುಗ್ಗುವುದನ್ನು ತಡೆಯುವುದರೊಂದಿಗೆ ಸಿಹಿ ನೀರನ್ನು ಸಂಗ್ರಹಿಸಬಹುದಾಗಿದೆ. ಸಂಗ್ರಹಗೊಂಡ ನೀರನ್ನು ಕುಡಿಯುವ ನೀರಿಗಾಗಿ, ಕೃಷಿ ಚಟುವಟಿಕೆಗಾಗಿ ಉಪಯೋಗಿಸಬಹುದಾಗಿದ್ದು, ಅಂತರ್ಜಲ ಮಟ್ಟವು ಅಭಿವೃದ್ಧಿಯಾಗಲಿರುತ್ತದೆ. ಮತ್ಸೋದ್ಯಮ ಬೆಂಬಲಕ್ಕೆ ಮರವಂತೆ ಬ್ರೇಕ್ ವಾಟರ್ ಎರಡನೇ ಹಂತದ ಕಾಮಗಾರಿಗೆ 85 ಕೋಟಿ ರೂ. ಅನುದಾನ, ಗಂಗೊಳ್ಳಿ ಮೀನುಗಾರಿಕಾ ಬಂದರಿನಲಿ ಜೆಟ್ಟಿ ಹಾಗೂ ಡಯಾಫ್ರಾಮ್ ಗೋಡೆ ಕಾಮಗಾರಿಗೆ ರೂಪಾಯಿ 4 ಕೋಟಿ, ಕೊಡೇರಿ ಬಂದರು ಅಭಿವೃದ್ಧಿಗೆ ರೂ. 2 ಕೋಟಿ ಮತ್ತು ಕೊಡೇರಿ ನದಿದಂಡೆ ಸಂರಕ್ಷಣೆ ಮತ್ತು ನ್ಯಾವಿಗೇಶನ್ ಚಾನಲ್ ಕಾಮಗಾರಿಗೆ ರೂ. 2.80 ಸೇರಿದಂತೆ ಒಟ್ಟು 93.80 ಕೋಟಿ ರೂ. ಗಳ ಅನುದಾನ ಬಿಡುಗಡೆಯಾಗಿರುತ್ತದೆ ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ರಾಜ್ಯ ಹೆದ್ದಾರಿ ಮದ್ಯದಲ್ಲಿ ಬರುವ ಸಿದ್ದಾಪುರ ಸರ್ಕಲ್ ಅಭಿವೃದ್ಧಿಗೆ ರೂ. 3 ಕೋಟಿ ಅನುದಾನ, ಸೌಕೂರು ದೇವಸ್ಥಾನದ ಸುತ್ತಮುತ್ತಲ ಅಭಿವೃದ್ಧಿಗೆ ರೂ. 2 ಕೋಟಿ, ಕೊಲ್ಲೂರು ದೇವಸ್ಥಾನದ ಸುತ್ತಮುತ್ತಲ ಅಭಿವೃದ್ಧಿಗೆ ರೂ. 2 ಕೋಟಿಗಳ ಅನುದಾನ ಬಿಡುಗಡೆಯಾಗಿದೆ. ವಾರಾಹಿ ಇಲಾಖೆಯಡಿಯಲ್ಲಿ ಒಟ್ಟು ರೂ. 42.48 ಕೋಟಿ ಮೊತ್ತದಲ್ಲಿ ವಿವಿಧ ರಸ್ತೆ ಕಾಮಗಾರಿಗೆ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಒಟ್ಟು 65.15 ಕೋಟಿ ಅನುದಾನ ಬಿಡುಗಡೆಯಾಗಿದ್ದು, 42 ಕೋಟಿ ಮೊತ್ತದ ವಿವಿಧ ರಸ್ತೆ ಕಾಮಗಾರಿಗಳು ಪ್ರಗತಿಯಲ್ಲಿದೆ. ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಎಸ್.ಎಚ್.ಡಿ.ಪಿ)ಯ 20 ಕೋಟಿ ರೂ. ಮೊತ್ತದ ಹೆಮ್ಮಾಡಿ-ನೆಂಪುವರೆಗಿನ ರಸ್ತೆ ದ್ವಿಪಥ ಕಾಮಗಾರಿ ಪ್ರಗತಿಯಲ್ಲಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಶಾಲಾ ಕಟ್ಟಡ ನಿರ್ಮಾಣಕ್ಕೆ ರೂ. 1.20 ಕೋಟಿ ಅನುದಾನ ಮಂಜೂರಾಗಿದ್ದು ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಕಾಮಗಾರಿ ಪ್ರಾರಂಭಿಸಲಾಗಿದೆ ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

Click here

Click here

Click here

Click Here

Call us

Call us

ಬೈಂದೂರು ಪಟ್ಟಣ ಪಂಚಾಯತ್ ಹಾಗೂ ತಾಲೂಕು ಕಛೇರಿಗಳು:
ಬೈಂದೂರು ತಾಲೂಕಿನ ಅಭಿವೃದ್ಧಿಯ ಬಗ್ಗೆ ಶಾಸಕರು ವಿವರ ನೀಡಿ, ಬೈಂದೂರು, ಯಡ್ತರೆ ಹಾಗೂ ಪಡುವರಿ ಗ್ರಾಮ ಪಂಚಾಯತ್ನ ಒಳಗೊಂಡು ಬೈಂದೂರು ಪಟ್ಟಣ ಪಂಚಾಯತ್ ರಚನೆಗೊಂಡಿದ್ದು, ಚುನಾವಣೆಯ ಬಳಿಕ ನೂತನ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬರಲಿದೆ. ತಾಲೂಕು ಪಂಚಾಯತಿಯ ಮಿನಿ ವಿಧಾನಸೌಧ ಹತ್ತು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದ್ದು, ಶೀಘ್ರದಲ್ಲಿ ಶಿಲನ್ಯಾಸ ಮಾಡಲಾಗುತ್ತದೆ. ತಾಲೂಕು ಪಂಚಾಯತ್ ಕಛೇರಿ ನಿರ್ಮಾಣ, ಭೂ ನ್ಯಾಯ ಮಂಡಳಿ ರಚನೆ, ಆಹಾರ ಶಾಖೆ ನಿರ್ಮಾಣ. ಬೈಂದೂರು ಹೊಸ ಬಸ್ ನಿಲ್ದಾಣದ ಅಭಿವೃದ್ಧಿ, ತಾಂತ್ರಿಕ ಕಲಿಕೆಗೆ ಸರ್ಕಾರಿ ಐಟಿಐ ಕಾಲೇಜು ಮೇಲ್ದರ್ಜೆಗೆರಿಸುವುದು, ಕ್ರೀಡಾ ಪ್ರೋತ್ಸಾಹಕ್ಕೆ ವಿಶಾಲ ಒಳ ಹೊರ ಕ್ರೀಡಾಂಗಣ ನಿರ್ಮಾಣ, ಬೈಂದೂರಿನಲ್ಲಿ 100 ಬೆಡ್ ಸರ್ಕಾರಿ ಆಸ್ಪತ್ರೆ, ಡಯಾಲಿಸಿಸ್ ಯಂತ್ರ, ಕೊಲ್ಲೂರಿನಲ್ಲಿ ನೂತನ ಗೋಶಾಲೆ, ಮೂಕಾಂಬಿಕಾ ರೋಡ್ ರೈಲ್ವೆ ನಿಲ್ದಾಣ ಅಭಿವೃದ್ಧಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಯೋಜನೆ ಸಿದ್ದಗೊಂಡಿದೆ ಎಂದರು.

ಅಗ್ನಿಶಾಮಕ ಠಾಣೆ ಈಗಾಗಲೇ ಮಂಜೂರಾಗಿದ್ದು ಯಡ್ತರೆ ಗ್ರಾಮದಲ್ಲಿ ಮಾಡಲು ನಿರ್ಧರಿಸಲಾಗಿರುತ್ತದೆ. ಸದರಿ ಠಾಣೆಗೆ ರೂ. 10 ಕೋಟಿ ಅನುದಾನ ಮಂಜೂರಾಗಿದ್ದು, ಪ್ರಸ್ತಾಪಿತ ಕಾಮಗಾರಿಯು ಟೆಂಡರ್ ಪ್ರಕ್ರಿಯೆಯಲ್ಲಿದೆ. ತಾತ್ಕಾಲಿಕವಾಗಿ ಬೈಂದೂರು ಲೋಕೋಪಯೋಗಿ ಇಲಾಖೆಯ ಕಟ್ಟಡದಲ್ಲಿ ಅಗ್ನಿಶಾಮಕ ಠಾಣೆ ಕಾರ್ಯನಿರ್ವಹಿಸುತ್ತದೆ. ಅಗತ್ಯ ಸಿಬ್ಬಂದಿಗಳನ್ನು ನಿಯೋಜಿಸಲು ಈಗಾಗಲೇ ಗೃಹ ಸಚಿವರಿಗೆ ಮನವಿ ಮಾಡಲಾಗಿದೆ ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಮಳೆಗಾಲದ ಸಂಧರ್ಭದಲ್ಲಿ ಕೆಲವೊಂದು ಪ್ರದೇಶಗಳು ಜಲಾವೃತವಾಗುತ್ತದೆ. ಈ ಸಂಧರ್ಭದಲ್ಲಿ ಸಾರ್ವಜನಿಕರಿಗೆ ಮತ್ತು ಜಾನುವಾರುಗಳಿಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸಲು ಪುನರ್ವಸತಿ ಕೇಂದ್ರ ನಿರ್ಮಾಣಕ್ಕಾಗಿ ಮನವಿ ಸಲ್ಲಿಸಲಾಗಿದೆ. ಪಶ್ಚಿಮ ವಾಹಿನಿ ಯೋಜನೆಯಡಿಯಲ್ಲಿ ಸುಮಾರು ೭೫ ಕೋಟಿ ಹಾಗೂ ಎಸ್.ಸಿ.ಪಿ./ಟಿ.ಎಸ್.ಪಿ. ಯೋಜನೆಯಡಿ 10 ಕೋಟಿ ಸೇರಿದಂತೆ ಒಟ್ಟು 102 ಕೋಟಿ ಮೊತ್ತದ ವಿವಿಧ ಬಹುಪಯೋಗಿ ಅಗತ್ಯ ಕಿಂಡಿ ಅಣೆಕಟ್ಟುಗಳಿಗೆ ಅನುದಾನ ಬಿಡುಗಡೆಯಾಗಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿದೆ. ಪ್ರವಾಸೋದ್ಯಮ ಇಲಾಖೆಯಡಿ ಮರವಂತೆ ಬೀಜ್ ಅಭಿವೃದ್ಧಿಗೆ ಬಿಡುಗಡೆಯಾದ ೫.೦೦ ಕೋಟಿ ಮೊತ್ತದ ಕಾಮಗಾರಿಯ ಅಂದಾಜು ಪಟ್ಟಿ ಸಲ್ಲಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಮತ್ತು ಸೋಮೇಶ್ವರ ಬೀಜ್ ಅಭಿವೃದ್ಧಿಗೆ ರೂ. 5 ಕೋಟಿ ಬಿಡುಗಡೆಯಾಗಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿದೆ. ಒಟ್ಟು ೧೪.೨೦ ಕೋಟಿ ಮೊತ್ತದ ವಿವಿಧ ಮೀನುಗಾರಿಕಾ ಕೊಂಡಿ ರಸ್ತೆಗಳ ಅಂದಾಜು ಪಟ್ಟಿಯನ್ನು ಸಲ್ಲಿಸಿದ್ದು, ಒಂದೆರಡು ತಿಂಗಳಲ್ಲಿ ಅನುದಾನ ಬಿಡುಗಡೆಯಾಗಲಿದೆ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯಡಿಯಲ್ಲಿ ಹೆರಂಜಾಲು ಸಿಬ್ಬಂದಿ ವರ್ಗದ ವಸತಿ ಗೃಹಗಳ ನಿರ್ಮಾಣದ 5 ಕೋಟಿ ಮೊತ್ತದ ಕಾಮಗಾರಿ ಪ್ರಗತಿಯಲ್ಲಿದೆ. ಹಾಗೂ ಬೈಂದೂರಿನಲ್ಲಿ ವಿದ್ಯಾರ್ಥಿ ನಿಲಯದ ನಿರ್ಮಾಣಕ್ಕೆ 4 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು ಟೆಂಡರ್ ಪ್ರಕ್ರಿಯೆ ಮುಗಿದಿರುತ್ತದೆ. ಕರ್ನಾಟಕ ಗೃಹ ಮಂಡಳಿ ಇಲಾಖೆಯಡಿಯಲ್ಲಿ 3.26 ಕೋಟಿ ರೂಪಾಯಿಯ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ನಬಾರ್ಢ್ನಿಂದ ಆಡಳಿತಾತ್ಮಕ ಅನುಮೋದನೆಗಾಗಿ ರೇಖಾ ಅಂದಾಜು ಪಟ್ಟಿಯನ್ನು ಸಲ್ಲಿಸಲಾಗಿದೆ. ನಾಲ್ಕು ಅಂಬೇಡ್ಕರ್ ಭವನ ಮತ್ತು ಒಂದು ಜಗನ್ಜೀವನ್ ರಾಮ್ ಭವನ ನಿರ್ಮಾಣಕ್ಕೆ ಒಟ್ಟು 1 ಕೋಟಿ ಅನುದಾನ ಮಂಜೂರು ಆಗಿದ್ದು, ಕಾಮಗಾರಿ ಸದ್ಯದಲ್ಲೇ ಪ್ರಾರಂಭವಾಗಲಿದೆ ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಹಲವು ಅಭಿವೃದ್ಧಿ ಕಾರ್ಯಗಳಿಗೆ ಮಾನ್ಯ ಸಂಸದರೊಂದಿಗೆ ಮುಖ್ಯಮಂತ್ರಿಯವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಮುಂದಿನ ಹಂತದಲ್ಲಿ ಎಲ್ಲಾ ಯೋಜನೆಗಳನ್ನು ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಮಂಜೂರು ಮಾಡಿಸಲಾಗುವುದು ಎಂದ ಶಾಸಕರು ಬೈಂದೂರು ಕ್ಷೇತ್ರಕ್ಕೆ ಸಂಸದರ ಕೊಡುಗೆ ದೊಡ್ಡದಿದೆ ಎಂದರು.

ಉಡುಪಿ ಜಿಲ್ಲೆಯ ಪ್ರವಾಸೋದ್ಯಮದ ದಿಕ್ಕು ಬದಲಿಸಬಲ್ಲ ಕೊಲ್ಲೂರು-ಕೊಡಚಾದ್ರಿ ಕೇಬಲ್ಕಾರ್ ಯೋಜನೆ ಬಗ್ಗೆ ಈಗಾಗಲೇ ಸಂಸದರೊಂದಿಗೆ ಚರ್ಚಿಸಿದ್ದು ಮುಂದಿನ ದಿನಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಉದ್ದೇಶಿತ ಕಾಮಗಾರಿಯನ್ನು ಮಂಜೂರು ಮಾಡಿಸಲಾಗುವುದು ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ನಾಲ್ವರ ಮೀನುಗಾರರಿಗೆ ಸಂತಾಪ:
ಮೀನುಗಾರಿಕೆಗೆ ತೆರಳಿ ಹಿಂದಿರುಗುತ್ತಿದ್ದ ಸಂದರ್ಭ ದೋಣಿ ಅವಘಡದಲ್ಲಿ ಮೃತರಾದಲಕ್ಷ್ಮಣ ಖಾರ್ವಿ, ನಾಗ ಖಾರ್ವಿ, ಮಂಜುನಾಥ ಕೆ., ಶೇಖರ ಜಿ. ಇವರಿಗೆ ಸರ್ಕಾರದಿಂದ ಗರಿಷ್ಟ ಪ್ರಮಾಣವನ್ನು ಒದಗಿಸಲು ಪ್ರಮಾಣಿಕ ಪ್ರಯತ್ನ ಮಾಡಲಾಗುವುದು. ಅವರ ಕುಟುಂಬದವರಿಗೆ ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿ ದೇವರು ನೀಡಲಿ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬೈಂದೂರು ಬಿಜೆಪಿ ಅಧ್ಯಕ್ಷ ದೀಪಕಕುಮಾರ್ ಶೆಟ್ಟಿ, ಕಾರ್ಯದರ್ಶಿ ಪ್ರಕಾಶ ಪೂಜಾರಿ ಜೆಡ್ಡು, ಬೈಂದೂರು ತಾಲೂಕು ಪಂಚಾಯತ್ ಉಪಾಧ್ಯಕ್ಷೆ ಮಾಲಿನಿ ಕೆ., ಜಿಲ್ಲಾ ಪಂಚಾಯತ್ ಸದಸ್ಯರಾದ ಸುರೇಶ್ ಬಟವಾಡಿ, ಶೋಭಾ ಜಿ. ಪುತ್ರನ್, ತಾಪಂ ಸದಸ್ಯ ಉಮೇಶ್ ಶೆಟ್ಟಿ, ಜಿಲ್ಲಾ ಬಿಜೆಪಿಯ ಬಾಲಚಂದ್ರ ಭಟ್ ಮೊದಲಾದರು ಇದ್ದರು/ಕುಂದಾಪ್ರ ಡಾಟ್ ಕಾಂ ಸುದ್ದಿ./

Leave a Reply