ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಗ್ರಾಮೀಣ ಭಾಗದ ಮಕ್ಕಳಲ್ಲಿ ಅಗಾಧ ಪ್ರತಿಭೆ ಇದ್ದು, ಶಿಕ್ಷಣ ಪಡೆಯಲು ಹೆಚ್ಚು ಆಸಕ್ತಿ ತೋರಿದರೆ ಉತ್ತಮ ಸಾಧನೆ ಮಾಡಬಹುದಾಗಿದೆ. ಪ್ರತಿಭೆ ಇದ್ದವರಿಗೆ ಒಂದಿಲ್ಲೊಂದು ರೂಪದಲ್ಲಿ ಸಹಕಾರದ ದೊರೆಯುತ್ತದೆ ಎಂದು ಉಡುಪಿ ಜಿಲ್ಲಾ ಶ್ರೀಮದ್ಭಗವದ್ದೀತಾ ಜಯಂತಿ ಆಚರಣಾ ಸಮಿತಿ ಪ್ರಧಾನ ಸಂಚಾಲಕ ಬಿ. ರಾಮಕೃಷ್ಣ ಶೇರುಗಾರ್ ಹೇಳಿದರು.
ಇಲ್ಲಿನ ಎಳಜಿತ ಶ್ರೀ ರಾಮಕೃಷ್ಣ ಕುಟೀರದಲ್ಲಿ ನಡೆದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ ವಿವಿಧ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡಿ ವಿದ್ಯಾವಂತರಾದಾಗಲೇ ಜಗತ್ತಿನೆದುರು ತಲೆಯೆತ್ತೆ ನಡೆಯಲು ಸಾಧ್ಯ. ಕೆಲವು ವರ್ಷಗಳ ಹಿಂದೆ ಶಿಕ್ಷಣ ಪಡೆಯಲು ಹಿಂದೇಟು ಹಾಕುತ್ತಿದ್ದ ಗ್ರಾಮದಲ್ಲಿ ಶ್ರೀ ರಾಮಕೃಷ್ಣ ಕುಟೀರದ ಮೂಲಕ ಹಲವಾರು ವಿದ್ಯಾರ್ಥಿಗಳು ಇಂದು ಉನ್ನತ ವ್ಯಾಸಂಗವನ್ನೂ ಪೂರೈಸಿರುವುದು ಗಮನಾರ್ಹ ಸಾಧನೆ. ವಿದ್ಯಾರ್ಥಿ ವೇತನ ಪಡೆದು ಉತ್ತಮ ಶಿಕ್ಷಣ ಉದ್ಯೋಗ ಪಡೆದುಕೊಳ್ಳುವುದರ ಜತೆಗೆ ಇತರರಿಗೂ ಸಹಕಾರ ಮಾಡುವ ಗುಣ ಬೆಳಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಶ್ರೀ ರಾಮಕೃಷ್ಣ ಕುಟೀರದ ಸ್ವಾಮಿ ಸತ್ಯಸ್ವರೂಪಾನಂದರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂತೋಷ ಮಧ್ಯಕ್ಷ ಉಪಸ್ಥಿತರಿದ್ದರು. ಯಶೋದಾ ಎಮ್. ಅಡಿಗ ನೈಕಂಬ್ಳಿ ಸ್ವಾಗತಿಸಿ, ನಾಗಶ್ರೀ ಮಧ್ಯಸ್ಥ ಸ್ವಾಗತಿಸಿ ಧನ್ಯವಾದಗೈದರು.










