ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಭಾರತೀಯ ಭಾಷೆಗಳು: ರಾಷ್ಟ್ರೀಯ ವೆಬಿನಾರ್

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಭಂಡಾರ್ಕಾರ‍್ಸ್ ಕಾಲೇಜಿನ ಹಿಂದಿ ವಿಭಾಗ ಮತ್ತು ಮಂಗಳೂರು ವಿಶ್ವವಿದ್ಯಾನಿಲಯ ಹಿಂದಿ ಅಧ್ಯಾಪಕರ ಸಂಘ (ವಿಹಾಸ್) ಇವರ ಸಂಯುಕ್ತ ಆಶ್ರಯದಲ್ಲಿರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಭಾರತೀಯ ಭಾಷೆಗಳು ಎಂಬ ವಿಷಯದ ಕುರಿತು ಒಂದು ದಿನದ ರಾಷ್ಟ್ರೀಯ ವೆಬಿನಾರ್ ನಡೆಯಿತು.

Call us

Click Here

ಈ ಕಾರ್ಯಕ್ರಮವನ್ನು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಪಿ. ಸುಬ್ರಮಣ್ಯ ಯಡಪಡಿತಾರವರು ಉದ್ಘಾಟಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾದ ಭಾಗವಹಿಸಿರುವ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ವಿಭಾಗ, ಕರ್ನಾಟಕ ಸರಕಾರಇದರ ವಿಶೇಷ ಅಧಿಕಾರಿಗಳಾಗಿರುವ ಪ್ರೊ. ಎ. ನಾರಾಯಣ ಪ್ರಸಾದ್‌ರವರು ವರ್ತಮಾನದಲ್ಲಿ ಶಿಕ್ಷಣದಲ್ಲಿ ಬದಲಾವಣೆ ಮತ್ತುಆನ್‌ಲೈನ್ ಶಿಕ್ಷಣದ ಮಹತ್ವವನ್ನು ತಿಳಿಸಿದರು.

ಕೇಂದ್ರೀಯ ಆದಿವಾಸಿ ವಿಶ್ವವಿದ್ಯಾಲಯ, ಆಂದ್ರಪ್ರದೇಶಇದರ ಕುಲಪತಿಗಳಾಗಿರುವ ಪ್ರೊ. ಟಿ. ವಿ. ಕಟ್ಟಿಮನಿ ಅವರು ವೆಬಿನಾರ್‌ನಲ್ಲಿ ಮಾತನಾಡಿ ಮಾತೃ ಭಾಷೆ ಮತ್ತು ಭಾರತೀಯ ಭಾಷೆಗಳ ಮಹತ್ವ ವರ್ತಮಾನದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಯೋಜನ ಹಾಗೂ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ರಾಷ್ಟ್ರೀಯ ಶಿಕ್ಷಣ ನೀತಿಯಉದ್ದೇಶವನ್ನು ಸವಿಸ್ತಾರವಾಗಿ ತಿಳಿಸಿದರು.

ಈ ರಾಷ್ಟ್ರೀಯ ವೆಬಿನಾರ್‌ನಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಭಾರತೀಯ ಭಾಷೆಗಳ ಸಂವರ್ಧಕರು, ಹಿರಿಯ ಪತ್ರಕರ್ತರು ಮತ್ತು ಎಸ್.ಟಿ.ಜಿ ವಿಶ್ವವಿದ್ಯಾಲಯ ನವದೆಹಲಿಯ ಪ್ರೊ. ರಾಹುಲ್ ದೇವ್ ಅವರು ಮಾತನಾಡಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಕ್ಕಳು ಲೀಲಾಜಾಲವಾಗಿ ಸರಳವಾಗಿ ಅಭ್ಯಾಸ ಮಾಡುವುದಕ್ಕೆ ಅವಕಾಶವಿದೆ. ಮಕ್ಕಳ ಸಮಗ್ರ ವಿಕಾಸಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ವಿದ್ಯಾರ್ಥಿಗಳು ತಮ್ಮ ಇಷ್ಟದ ಭಾಷಾ ವಿಷಯಗಳನ್ನು ಆಯ್ಕೆ ಮಾಡಿಕೊಂಡು ವಿದ್ಯಾಭ್ಯಾಸವನ್ನು ಪಡೆಯಬಹುದಾಗಿದೆ. ರಾಷ್ಟ್ರೀಯ ಶಿಕ್ಷಣ ಸಂಹಿತೆಯ ಪರಿಚಯ ಮಾಡಿ, ಭಾರತೀಯ ಭಾಷೆಗಳ ಕುರಿತು ಸಂರಕ್ಷಣೆಯ ಮಾರ್ಗಗಳನ್ನು ತಿಳಿಸಿದರು.

Click here

Click here

Click here

Click Here

Call us

Call us

ಕಾಲೇಜಿನ ಪ್ರಾಂಶುಪಾಲರಾದ ಎನ್. ಪಿ. ನಾರಾಯಣ ಶೆಟ್ಟಿಯವರು ಅತಿಥಿಗಳನ್ನು ಸ್ವಾಗತಿಸಿದರು. ಮಂಗಳೂರು ವಿಶ್ವವಿದ್ಯಾಲಯ ಹಿಂದಿ ಅಧ್ಯಾಪಕರ ಸಂಘದ (ವಿಹಾಸ್) ಅಧ್ಯಕ್ಷರಾದ ಪಾಂಪೈ ಕಾಲೇಜು, ಐಕಳ ಇಲ್ಲಿನ ಹಿಂದಿ ವಿಭಾಗ ಮುಖ್ಯಸ್ಥರಾಗಿರುವ ಡಾ. ಎಸ್. ಎ. ಮಂಜುನಾಥ ಕಾರ್ಯಕ್ರಮವನ್ನು ನಿರೂಪಿಸಿದರು.

ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಹಿಂದಿ ಸ್ನಾತಕೋತ್ತರ ಕೇಂದ್ರದ ಹಿಂದಿ ಮುಖ್ಯಸ್ಥರಾಗಿರುವ ಡಾ. ಸುಮಾ ಟಿ. ಆರ್, ಮಂಗಳೂರಿನ ಕೆನರಾ ಕಾಲೇಜಿನ ಹಿಂದಿ ವಿಭಾಗ ಮುಖ್ಯಸ್ಥರಾಗಿರುವ ಡಾ. ಕಲ್ಪನಾ ಪ್ರಭು, ಸುಳ್ಯದ ಸರಕಾರಿ ಕಾಲೇಜಿನ ಹಿಂದಿ ಪ್ರಾಧ್ಯಾಪಕರಾದ ರಾಮಕೃಷ್ಣ ಅವರು ಅತಿಥಿಗಳನ್ನು ಪರಿಚಯಿಸಿದರು.

ಭಂಡಾರ್ಕಾರ‍್ಸ್ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥರಾಗಿರುವ ಪ್ರೊ. ಪ್ರಫುಲ್ಲಾ ಬಿ ಅವರು ವಂದಿಸಿದರು. ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಪ್ರಾಧ್ಯಾಪಕರಾಗಿರುವ ರಾಮಚಂದ್ರ ಆಚಾರ್ ತಾಂತ್ರಿಕ ಸಹಾಯ ನೀಡಿದರು. ವಿದ್ಯಾರ್ಥಿನಿ ನೇಹಾ ಹೊಳ್ಳ ಪ್ರಾರ್ಥಿಸಿದರು.

 

Leave a Reply