ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜು ಬೋಧಕ-ಬೋಧಕೇತರ ಸಿಬ್ಬಂದಿ ಸಂಘ, ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ವಲಯ ಹಾಗೂ ರೋಟರ‍್ಯಾಕ್ಟ್ ಕುಂದಾಪುರ ದಕ್ಷಿಣ ವಲಯ ಇವರ ಸಂಯೋಜನೆಯಲ್ಲಿ ಹಣ್ಣು ಮತ್ತು ಔಷಧೀಯ ಗಿಡ ವಿತರಣಾ ಕಾರ್ಯಕ್ರಮ ನಡೆಯಿತು.
ಸಂಪನ್ಮೂಲ ವ್ಯಕ್ತಿ ಡಾ| ಉತ್ತಮ್ ಕುಮಾರ್ ಶೆಟ್ಟಿ, ಉತ್ತಮ್ ಹೋಮಿಯೋ ಕ್ಲಿನಿಕ್, ಕುಂದಾಪುರ ಮಾತನಾಡಿ, ಇಡೀ ಜೀವನ ಪದ್ಧತಿ ಹಾಗೂ ಪ್ರಕೃತಿಯೊಂದಿಗಿನ ಕೊಡು-ಕೊಳ್ಳುವಿಕೆಯಲ್ಲಾದ ಸಕರಾತ್ಮಕ ಮಾರ್ಪಾಡುಗಳಿಂದಲೇ ಮನುಕುಲದ ದೈಹಿಕ ಮಾನಸಿಕ ಸ್ಥಿಮಿತತೆ ಕಷ್ಟಸಾಧ್ಯವಾಗಿದ್ದು, ಜೀವ ಸಂಕುಲದ ಸ್ವಾಸ್ಥ್ಯತೆಗಾಗಿ ಪ್ರಕೃತಿ ರಕ್ಷಣೆ ಈ ದಿನಮಾನದ ತುರ್ತು ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ| ಕೊತ್ತಾಡಿ ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ವಲಯ ಕಾರ್ಯದರ್ಶಿಯಾದ ಜೂಡಿತ್ ಮೆಂಡೊನ್ಸ್, ರೋಟರ‍್ಯಾಕ್ಟ್ ಕ್ಲಬ್‌ನ ಅಧ್ಯಕ್ಷ ಹಾಗೂ ರೋಟರಿ ಕ್ಲಬ್‌ನ ಸದಸ್ಯರಾದ ಆಲ್ಡ್ರಿನ್ ಡಿಸೋಜಾ, ಉಪ ಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ ಉಪಸ್ಥಿತರಿದ್ದರು.
ಇಂಗ್ಲೀಷ್ ಉಪನ್ಯಾಸಕಿ ದೀಪಿಕಾ ಜಿ. ಪ್ರಾರ್ಥಿಸಿ, ವಾಣಿಜ್ಯ ಉಪನ್ಯಾಸಕಿ ಧನಶ್ರೀ ಎಮ್. ಕಿಣಿ ಸ್ವಾಗತಿಸಿ, ನಿರೂಪಿಸಿದರು. ಬೋಧಕ-ಬೋಧಕೇತರ ಸಿಬ್ಬಂದಿ ಸಂಘದ ಕಾರ್ಯದರ್ಶಿ ಸತೀಶ್ ಕಾಂಚನ್ ವಂದಿಸಿದರು.
ಕಾಲೇಜು ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರಿಗೆ ವಿವಿಧ ಜಾತಿಯ ಹಣ್ಣು ಮತ್ತು ಔಷಧೀಯ ಗಿಡಗಳನ್ನು ಹಸ್ತಾಂತರಿಸಲಾಯಿತು.