ಅನ್ಯಕೋಮಿನ ಯುವಕರ ನಕಲಿ ವಾಟ್ಸ್ಯಾಪ್‌ ಗ್ರೂಪ್‌: ದೂರು

Call us

Call us

Call us

ಕುಂದಾಪುರ: ಅನ್ಯ ಕೋಮಿನ ಯುವಕರ ತಂಡವೊಂದು ಹಿಂದೂ ಸಂಘಟನೆಯ ಹೆಸರಿನಲ್ಲಿ ನಕಲಿ ಗ್ರೂಪ್‌ವೊಂದನ್ನು ವಾಟ್ಸ್ಯಾಪ್‌ನಲ್ಲಿ ತೆರೆದು, ಅದಕ್ಕೆ ಹಿಂದೂ ಯುವಕರನ್ನು ಸದಸ್ಯರನ್ನಾಗಿ ಮಾಡುವುದರ ಮೂಲಕ ಅವರಿಂದ ಕೆಲವೊಂದು ಮಾಹಿತಿಗಳನ್ನು ಸಂಗ್ರಹಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಿ ಮಂಗಳವಾರ ಕೋಟ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Call us

Click Here

ಕೋಟ ಸಮೀಪದ ಕೆಲವೊಂದು ಯುವಕರ ವಾಟ್ಸ್ಯಾಪ್‌ ಸಂಖ್ಯೆಯನ್ನು ಕಲೆಹಾಕಿದ ಬೆಳ್ತಂಗಡಿ ಮೂಲದ ಅನ್ಯಕೋಮಿನ ಯುವಕರ ತಂಡ, ವೀರ ಕೇಸರಿ, ಹಿಂದೂ ಟೈಗರ್ಸ್‌ ಎನ್ನುವ ಗ್ರೂಪ್‌ ಗಳನ್ನು ಸೃಷ್ಟಿಸಿ ಅದರ ಮೂಲಕ ಮಾಹಿತಿ ಕಲೆಹಾಕಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಲಾಗಿದೆ. ಗ್ರೂಪ್‌ನ ಸದಸ್ಯರು ಅದರ ಮುಖ್ಯಸ್ಥರು ಯಾರು ಎಂದು ಪರಿಶೀಲಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಅನಂತರ ಎಲ್ಲ ಸದಸ್ಯರು ಗ್ರೂಪ್‌ಗಳಿಂದ ಹೊರ ಬಂದಿದ್ದಾರೆ ಎನ್ನಲಾಗಿದೆ.

ಮಾಹಿತಿ ಕಲೆ ಹಾಕುವ ಉದ್ಧೇಶ; ಈ ರೀತಿ ಹಿಂದೂ ಯುವಕರನ್ನು ಸೇರಿಸಿಕೊಂಡು ರಚಿಸಲ್ಪಟ್ಟ ಗ್ರೂಪ್‌ನಲ್ಲಿ ಹಿಂದೂಗಳ ಕುರಿತು ಕೆಲವೊಂದು ಮಾಹಿತಿ ಸಂಗ್ರಹಿಸಲು ಹಾಗೂ ಇತರರ ಮೊಬೈಲ್‌ ಸಂಖ್ಯೆಗಳನ್ನು ಪಡೆದು ದುರುಪಯೋಗಪಡಿಸಿಕೊಳ್ಳಲಾಗುತ್ತದೆ ಎಂದು ಆರೋಪಿಸಲಾಗಿದೆ.

Leave a Reply