ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು: ಶಿಕ್ಷಕರಿಗೆ ಆನ್‌ಲೈನ್ ಎಫ್‌ಡಿಪಿ ಕಾರ‍್ಯಕ್ರಮ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಮಿಜಾರ್ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಿಂದ ಆಯೋಜಿಸಲ್ಪಟ್ಟ ಒಂದು ದಿನದ ಆನ್‌ಲೈನ್ ಫ್ಯಾಕಲ್ಟಿ ಡೆವಲಪ್‌ಮೆಂಟ್ ಪ್ರೋಗ್ರಾಮ್- “ಹೇಗೆ ಬೋಧನಾ- ಕಲಿಕಾ ಪ್ರಕ್ರಿಯೆಯಲ್ಲಿ ಗುಣಮಟ್ಟದ ಬದಲಾವಣೆ ಸಾಧ್ಯ” ಎಂಬ ವಿಷಯದ ಕುರಿತು ಉದ್ಘಾಟನಾ ಕಾರ‍್ಯಕ್ರಮ ನಡೆಯಿತು

Call us

Click Here

ಕಾರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಲಹಾಬಾದ ಐಐಐಟಿಯ ನಿರ್ದೇಶಕ ಪ್ರೋ ಪಿ. ನಾಗಭೂಷಣ್, ಪ್ರತಿಯೊಬ್ಬ ಶಿಕ್ಷಕನೂ ತನ್ನ ಮುಂದಿರುವ ಸವಾಲುಗಳನ್ನ ಮೀರಿ ಯೋಚಿಸಿ, ಕಾರ‍್ಯ ಪ್ರವೃತ್ತನಾದಾಗ ಶಿಕ್ಷಣದ ಮೂಲ ಧ್ಯೇಯ – ಸರ್ವಾಂಗೀಣ ಪ್ರಗತಿ ವಿದ್ಯಾರ್ಥಿಯಲ್ಲಿ ಮೂಡಲು ಸಾಧ್ಯ ನಮ್ಮ ಹೆಚ್ಚಿನ ಶಿಕ್ಷಣ ಸಂಸ್ಥೆಗಳು ವಿಶ್ವವಿದ್ಯಾನಿಲಯಗಳ ಅಧೀನದಲ್ಲಿ ಕಾರ‍್ಯ ನಿರ್ವಹಿಸುವ ಹಿನ್ನಲೆಯಲ್ಲಿ ಅನೇಕ ನಿರ್ಬಂಧಗಳು ತಮ್ಮನ್ನು ಸೀಮಿತಗೊಳಿಸಿದರೂ ಅದನ್ನು ಮೀರಿ ಶಿಕ್ಷಣ ಸಂಸ್ಥೆಗಳು ಹಾಗೂ ಶಿಕ್ಷಕರೂ ದುಡಿಯುವ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಕಾರ‍್ಯರೂಪಕ್ಕೆ ಬರಲಿರುವ ಹೊಸ ಶಿಕ್ಷಣ ನೀತಿ ಶೈಕ್ಷಣಿಕ ಸ್ವಾಯತ್ತತೆಗೆ ಹೆಚ್ಚು ಒತ್ತು ನೀಡಲಿದ್ದು ಶಿಕ್ಷಕರು ಇನ್ನೂ ಹೆಚ್ಚಿನ ಜವಾಬ್ದಾರಿ ಹಾಗೂ ಕಾರ‍್ಯ ಕ್ಷಮತೆಯನ್ನು ಪ್ರದರ್ಶಿಸಬೇಕು ಎಂದರು. ಶಿಕ್ಷಕನು ತಾನು ನಿರ್ವಹಿಸುತ್ತಿರು ಕೆಲಸದ ಆದಾರದ ಮೇಲೆ ತನ್ನನ್ನು ತಾನು ಮೌಲ್ಯಮಾಪನಕ್ಕೆ ಹಚ್ಚಿ, ಪ್ರತಿ ಹಂತದಲ್ಲೂ ಯೋಚಿಸಿ, ಕಾರ‍್ಯವನ್ನು ನೆರವೇರಿಸಬೇಕು. ವಿದ್ಯಾರ್ಥಿಗಳನ್ನು ಪರೀಕ್ಷೆಗಾಗಿ ಸಿದ್ದಪಡಿಸುವ ಪದ್ದತಿಗೆ ಜೋತು ಬೀಳದೆ, ಅವರು ತಾವು ಪಡೆದ ಜ್ಞಾನವನ್ನು ಹೇಗೆ ಜೀವನದಲ್ಲಿ ಆಳವಡಿಸಿಕೊಳ್ಳಲು ಸಾಧ್ಯ ಎಂಬುದನ್ನು ಕಲಿಸುವ ಶಿಕ್ಷಣ ಬೇಕು ಎಂದರು. ಈ ಹಿನ್ನಲೆಯಲ್ಲಿ ಶಿಕ್ಷಕನು ತರಗತಿಗಳಲ್ಲಿ ಏಕಾಲಾಪ ಪದ್ದತಿಯನ್ನು ಅನುಸರಿಸದೆ ಸಂವಾದ, ಸಂಭಾಷಣೆಗೆ ಹೆಚ್ಚಿನ ಒತ್ತನ್ನು ನೀಡಬೇಕು ಎಂದರು.

ಕಾರ‍್ಯಕ್ರಮದಲ್ಲಿ ಉಪಸ್ಥಿತರಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೆಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಆಳ್ವಾಸ್ ತಾನು ಹೊಂದಿರುವ ವಿವಿಧ ಪ್ರತಿಷ್ಟಿತ ಸಂಸ್ಥೆಗಳೊಂದಿಗಿನ ಶೈಕ್ಷಣಿಕ ಒಡಂಬಡಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ಹೆಚ್ಚು ಹೆಚ್ಚು ಅನ್ವಹಿಕ ಜ್ಞಾನವನ್ನು ಲಭಿಸುವಂತೆ ಮಾಡುತ್ತಿದ್ದು, ಸಿಗುವ ಪ್ರತಿ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿದೆ ಎಂದರು.

ಈ ಒಂದು ದಿನದ ಎಫ್‌ಡಿಪಿ ಕಾರ‍್ಯಗಾರವನ್ನು ಐಐಐಟಿ ಅಲಹಾಬಾದ್ ಹಾಗೂ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ನಡುವೆ 2008ರಲ್ಲಿ ನಡೆದ ಶೈಕ್ಷಣಿಕ ಒಪ್ಪಂದದ ನೆಲೆಯಲ್ಲಿ ಆಯೋಜಿಸಲಾಗಿತ್ತು. ಈ ಒಪ್ಪಂದದಿಂದ ಇದುವರೆಗೆ ಕಾಲೇಜಿನ 120ಕ್ಕೂ ಅಧಿಕ ವಿದ್ಯಾರ್ಥಿಗಳು ಮ್ಯಾಷಿನ ಲರ್ನಿಂಗ್ ಹಾಗೂ ಡೀಪ್ ಲರ್ನಿಂಗ್ ಕ್ಷೇತ್ರದಲ್ಲಿ3 ಸಲ ಅಲ್ಲಿನ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಪಡೆದಿದ್ದು, 40ಕ್ಕೂ ಅಧಿಕ ವಿದ್ಯಾರ್ಥಿಗಳು ಅಲ್ಲಿ ಇಂಟನ್‌ಶಿಫ್ ಮಾಡಲು ಅವಕಾಶ ಪಡೆದುದಲ್ಲದೆ, ಸದಾ ಅಲ್ಲಿನ 8 ರಿಂದ10 ಉಪನ್ಯಾಸಕರು ತರಬೇತಿ ನೀಡಲು ಮೂಡುಬಿದಿರೆಗೆ ಆಗಮಿಸುತ್ತಿರುತ್ತಾರೆ.

ಒಂದು ದಿನದ ಕಾರ‍್ಯಗಾರದಲ್ಲಿ ಡಾ. ಪಿ. ನಾಗಭೂಷಣ್ ತಮ್ಮ ಪ್ರಧಾನ ಭಾಷಣದಲ್ಲಿ “ಸಮ್ ತೋಟ್ಸ್ ಫಾರ್ ಬೆಟರ್ ಟಿಚಿಂಗ್ – ಲರ್ನಿಂಗ್ ಅಂಡರ್ ಅಫೀಲಿಯೆಟಿಂಗ್ ಕನ್ಸ್‌ಟ್ರೆಂಟ್ಸ್”, ಒಮಾನ್( ಮಸ್ಕತ್) ಮಿಡ್ಲೀಸ್ಟ್ ಕಾಲೇಜಿನ ಡಾ. ಸೈಯದ್ ಝಾಕಿರ್ ಅಲಿ ’ಕಂಟೀನ್ಯೂಸ್ ಅಸೆಸೆಮೆಂಟ್ಸ್ ಸಮ್ ಎಕ್ಸಪೀರಿಯನ್ಸ್ ಟೂ ಇಂಪ್ರೂ ಕ್ವಾಲಿಟಿ ಇನ್ ಟೀಚಿಂಗ್ ಆಂಡ್ ಲರ್ನಿಂಗ್ ಪ್ರೋಸೆಸ್’, ಐಐಐಟಿ ಅಲಹಾಬಾದ್‌ನ ಸಹಾಯಕ ಪ್ರಾಧ್ಯಾಪಕ ವ್ರಿಜೇಂದರ್ ಸಿಂಗ್ ಹಾಗೂ ಐಐಐಟಿ ಅಲಹಾಬಾದ್‌ನ ಡಾ ಮಹಮ್ಮದ್ ಜಾವೇದ್ ವಿವಿಧ ವಿಚಾರಗಳ ಕುರಿತು ಮಾಹಿತಿ ನೀಡಿದರು.

Click here

Click here

Click here

Click Here

Call us

Call us

ಈ ಕಾರ‍್ಯಗಾರದಲ್ಲಿ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ‍್ಯ ಡಾ ಪೀಟರ್ ಫೆರ್ನಾಂಡೀಸ್, ಕಾಲೇಜಿ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ ಮಂಜುನಾಥ ಕೊಠಾರಿ ಹಾಗೂ ಕಾಲೇಜಿನ ಎಲ್ಲಾ ವಿಭಾಗದ ಉಪನ್ಯಾಸಕರು ಪಾಲ್ಗೊಂಡರು. ಸಹಾಯಕ ಪ್ರಾಧ್ಯಪಕಿ ಮೇಘಾ ಹೆಗ್ಡೆ ನಿರ್ವಹಿಸಿ, ಶಿಲ್ಪಾ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು.

Leave a Reply