ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸೌತ್ ಕೆನಾರ ಪೋಟೋಗ್ರಾಫರ್ ಅಸೋಸಿಯೇಶನ್ ರಿ. ಕುಂದಾಪುರ ವಲಯ ಇದರ ವತಿಯಿಂದ ಕುಂದಾಪುರ ಮಹಾತ್ಮ ಗಾಂಧಿ ಪಾರ್ಕ್‌ನಲ್ಲಿರುವ ಗಾಂಧೀಜಿ ಪ್ರತಿಮೆ ಹಾಗೂ ಕುಂದಾಪುರ ಶಾಸ್ತ್ರಿ ವೃತ್ತದಲ್ಲಿರುವ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಜನ್ಮ ದಿನಾಚರಣೆ ಆಚರಿಸಲಾಯಿತು.
ಸೌತ್ ಕೆನಾರ ಪೋಟೋಗ್ರಾಫರ್ ಅಸೋಸಿಯೇಶನ್ ದ, ಕ ಉಡುಪಿ ಇದರ ಉಪಾಧ್ಯಕ್ಷರಾದ ನಾಗರಾಜ ರಾಯಪ್ಪನ ಮಠ ಮಾಲಾರ್ಪಣೆ ಮಾಡಿದರು. ಸಂಸ್ಥೆಯ ಅಧ್ಯಕ್ಷರಾದ ರಾಜಾ ಮಠದ ಬೆಟ್ಟು, ಸಂಚಾಲಕರಾದ ಗಿರೀಶ್ ಜಿ, ಕೆ, ಪ್ರಧಾನ ಕಾರ್ಯದರ್ಶಿ ಅಮೃತ ಬೀಜಾಡಿ, ಉಪಾಧ್ಯಕ್ಷರಾದ ಪ್ರಕಾಶ ಕುಂದೇಶ್ವರ, ಬಾಲಕೃಷ್ಣ ಶೆಟ್ಟಿ, ಕೋಶಾಧಿಕಾರಿ ಗೋಪಾಲ್ ಕಾಂಚನ್, ಮಾಜಿ ಅಧ್ಯಕ್ಷರಾದ ಸುರೇಶ್ ಸುರಭಿ, ದಿನೇಶ ಗೋಡೆ, ಪ್ರಮೋದ್ ಚಂದನ್, ಜೊತೆ ಕಾರ್ಯದರ್ಶಿ ಸುರೇಶ ಮೊಳಹಳ್ಳಿ ಮುಂತಾದವರು ಉಪಸ್ಥಿತರಿದ್ದರು.