ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು : ಮರವಂತೆ ಜಟ್ಟಿಗ ದೇವಸ್ಥಾನ ರಸ್ತೆ ಅಭಿವೃದ್ಧಿ ಕಾಮಗಾರಿ ಭೂಮಿಪೂಜೆ ಕಾರ್ಯಕ್ರಮ ಇತ್ತೀಚೆಗೆ ನೆಡೆಯಿತು
ಕಾರ್ಯಕ್ರಮದಲ್ಲಿ ಶಾಸಕ ಬಿ. ಎಂ . ಸುಕುಮಾರ ಶೆಟ್ಟಿ ಮಾತನಾಡಿ, ಮರವಂತೆ ಮೀನುಗಾರಿಕಾ ಹೊರಬಂದರು ದ್ವಿತೀಯ ಹಂತದ ಕಾಮಗಾರಿಗೆ ರೂ 85 ಕೋಟಿ ಮಂಜೂರಾಗಿದ್ದು ಶೀಘ್ರವೇ ಕಾಮಗಾರಿ ಆರಂಭವಾಗುವುದು ರೂ 80 ಲಕ್ಷ ವೆಚ್ಚದಲ್ಲಿ ನಡೆಯುವ ಮರವಂತೆ ಜಟ್ಟಿಗ ದೇವಸ್ಥಾನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ನಡೆದ ಭೂಮಿಪೂಜೆ ಸಂದರ್ಭದಲ್ಲಿ ಹೇಳಿದರು.
ಕ್ಷೇತ್ರದ ಕುಡಿಯುವ ನೀರು ಪೂರೈಕೆ ಸಮಸ್ಯೆ ಬಗೆಹರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ರೂ 550 ಕೋಟಿ ಬಿಡುಗಡೆಯಾಗಲಿದೆ. ಅದರಿಂದ ಎಲ್ಲ ಮನೆಗಳಿಗೆ ನೀರು ಪೂರೈಸಲಾಗುವುದು. ಗ್ರಾಮದ ಕೆಟ್ಟು ಹೋಗಿರುವ ಎಲ್ಲ ರಸ್ತೆಗಳನ್ನು ಮೇಲ್ದರ್ಜೆಗೇರಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ತಾಲ್ಲೂಕು ಪಂಚಾಯಿತಿ ಸದಸ್ಯ ಜಗದೀಶ ದೇವಾಡಿಗ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಅನಿತಾ ಆರ್. ಕೆ, ಮಾಜಿ ಸದಸ್ಯರಾದ ಪ್ರಭಾಕರ ಖಾರ್ವಿ, ನಾಗರಾಜ ಖಾರ್ವಿ, ಲೋಕೇಶ ಖಾರ್ವಿ, ಸುಜಾತಾ, ಕೃಷ್ಣ ಮೊಗವೀರ, ಆನಂದ ಪೂಜಾರಿ, ಸುಧಾಕರ ಆಚಾರ್, ರತ್ನಾವತಿ, ಗುತ್ತಿಗೆದಾರ ಚಂದ್ರ ಖಾರ್ವಿ, ಪ್ರಭಾಕರ ಶೆಟ್ಟಿ ಇದ್ದರು. ಸನತ್ ಹೆಬ್ಬಾರ್ ಮತ್ತು ವೆಂಕಟೇಶ ಹೆಬ್ಬಾರ್ ಪೂಜಾವಿಧಿ ನೆರವೇರಿಸಿದರು.
ರೂ 50 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವ ಮೀನುಗಾರಿಕಾ ಮಾರ್ಗದ ಕಾಮಗಾರಿಗೂ ಶಾಸಕರು ಚಾಲನೆ ನೀಡಿದರು. ಮೀನುಗಾರರ ಸೇವಾ ಸಮಿತಿ ಅಧ್ಯಕ್ಷ ಮೋಹನ ಖಾರ್ವಿ ಮತ್ತು ಮಾರ್ಕೆಟಿಂಗ್ ಸಮಿತಿ ಅಧ್ಯಕ್ಷ ಶಂಕರ ಖಾರ್ವಿ ಇದ್ದರು.