ಕುಂದಾಪುರ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು: ವಿದ್ಯಾರ್ಥಿಗಳಿಗೆ ಕೆವಿಪಿವೈ ಫೆಲೋಶಿಲ್ ಪಡೆಯಲು ಅವಕಾಶ

Call us

Call us

Call us

ಕುಂದಾಪುರ: ಸುಮಾರು 33 ವರ್ಷಗಳ ತನ್ನ ಇತಿಹಾಸದಲ್ಲಿ ಪ್ರತೀ ವರ್ಷವು ನೂತನ ಯೋಜನೆಗಳ ಮೂಲಕ ಶೈಕ್ಷಣಿಕ ಪ್ರಗತಿಯನ್ನು ಸಾಧಿಸುತ್ತಾ, ಮೈಲುಗಲ್ಲುಗಳನ್ನು ದಾಟುತ್ತಾ ಬರುತ್ತಿರುವ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು, ಕಳೆದ ಶೈಕ್ಷಣಿಕ ವರ್ಷದಲ್ಲಿ” ಪದವಿ ಪೂರ್ವ ಶಿಕ್ಷಣ ಇಲಾಖೆ, ಬೆಂಗಳೂರು ” ನಡೆಸಿದ ದ್ವಿತೀಯ ಪಿ ಯು ಪರೀಕ್ಷೆಯಲ್ಲಿ ದಾಖಲೆಯ 4 ರ‍್ಯಾಂಕ್ ಗಳನ್ನು ತನ್ನ ಬತ್ತಳಿಕೆಗೆ ಹಾಕಿಕೊಳ್ಳುವ ಮುಖೇನ, ಉಡುಪಿ ಜಿಲ್ಲೆಯಲ್ಲಿಯೇ ದಾಖಲೆಯ ಫಲಿತಾಂಶವನ್ನು ದಾಖಲಿಸಿದ ಕುಂದಾಪುರ ತಾಲೂಕಿನ ಪ್ರಪ್ರಥಮ ವಿದ್ಯಾಸಂಸ್ಥೆ ಎಂಬ ಖ್ಯಾತಿಗೆ ಭಾಜನವಾಗಿದೆ. ವೃತ್ತಿಪರ ಕೋರ್ಸ್ ಗಳಿಗೆ ನಡೆಸುವ CET, NEET, JEE ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿ ಉತ್ತಮವಾದ ಫಲಿತಾಂಶವನ್ನು ಪಡೆದುಕೊಂಡಿರುತ್ತದೆ.

Call us

Click Here

ಈಗಾಗಲೇ ಸಂಸ್ಥೆಯಲ್ಲಿ ವೈದ್ಯಕೀಯ ಕ್ಷೇತ್ರದ ಆಕಾಂಕ್ಷಿಗಳಿಗೆ ” NEET “, ಇಂಜಿನಿಯರಿಂಗ್ ಕ್ಷೇತ್ರದ ಆಕಾಂಕ್ಷಿಗಳಿಗೆ ” JEE, CET” ಹಾಗೆಯೇ ವಾಣಿಜ್ಯ ವಿಭಾಗವನ್ನು ಆರಿಸಿಕೊಂಡಿರುವ ” CA, CS ಮತ್ತು ಬ್ಯಾಂಕಿಂಗ್ ಕ್ಷೇತ್ರದಆಕಾಂಕ್ಷಿಗಳಿಗೆ, ವಿಷಯ ತಜ್ಞರುಗಳಿಂದ ಗುಣಮಟ್ಟದ ತರಬೇತಿಗಳನ್ನು ನೀಡಲಾಗುತ್ತಿದ್ದು, ಈಗ ಇನ್ನೊಂದು ಹೆಜ್ಜೆ ಮುಂದುವರೆದು ವಿಜ್ಞಾನ ವಿಭಾಗವನ್ನು ಆರಿಸಿಕೊಂಡು ಸಂಶೋಧನಾ ಕ್ಷೇತ್ರಕ್ಕೆ ಹೋಗ ಬಯಸುವ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯವನ್ನು ನೀಡಿ ಪ್ರೋತ್ಸಾಹಿಸುವ ಉದ್ಧೇಶದಿಂದ “ಇಂಡಿಯನ್ ಇನ್ಸ್ಟಿಟ್ಯೂಟ್ ಓಫ್ ಸೈನ್ಸ್ ” (IISC) ಹಮ್ಮಿಕೊಂಡಿರುವ ” ಕೆವಿಪಿವೈ (Kishore Vaigyanic Protsahan Yojana ) ” Fellowship Award 2020-21 ಎಂಬ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿ ಉತ್ತಮ ಫಲಿತಾಂಶವನ್ನು ಪಡೆಯುವ ಯೋಜನೆಯನ್ನು ಹಾಕಿಕೊಂಡಿರುವ ಉಡುಪಿ ಜಿಲ್ಲೆಯ ಪ್ರಪ್ರಥಮ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಕೆವಿಪಿವೈ ಎಂದರೇನು ?

* ಯುವ ವಿಜ್ಞಾನಿಗಳನ್ನು ಪ್ರೋತ್ಸಾಹಿಸಿ ವೇದಿಕೆಗೆ ತರಲು IISC ಹಾಕಿಕೊಂಡಿರುವ ಅತ್ಯುತ್ತಮ ಯೋಜನೆ.

* ಇದು ಮೂಲ ವಿಜ್ಞಾನ ( Basic science ) ದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಫೆಲೋಶಿಪ್ ಕಾರ್ಯಕ್ರಮವಾಗಿದೆ.

Click here

Click here

Click here

Click Here

Call us

Call us

* ಮೂಲಭೂತ ವಿಜ್ಞಾನ (Basic Science ) ಕೋರ್ಸ್‌ಗಳನ್ನು ಮುಂದುವರಿಸಲು ಮತ್ತು ವಿಜ್ಞಾನದಲ್ಲಿ ಸಂಶೋಧನಾ ವೃತ್ತಿ ಜೀವನ (Research Career) ಕ್ಕೆ ವಿದ್ಯಾರ್ಥಿಗಳನ್ನು ಆಕರ್ಷಿಸಲು ಇದನ್ನು ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ (DST) ವಿಭಾಗವು ಪ್ರಾರಂಭಿಸಿ ಧನಸಹಾಯವನ್ನು ನೀಡುತ್ತಿದೆ .

* ಕೆವಿಪಿವೈ ಅನ್ನು ಸಂಪೂರ್ಣವಾಗಿ ಐ.ಐ.ಎಸ್.ಸಿ ಬೆಂಗಳೂರಿನಲ್ಲಿ ನಿರ್ವಹಿಸಲಾಗುತ್ತದೆ.

ಉದ್ದೇಶ:

* ಪ್ರತಿಭೆ ಮತ್ತು ಸಂಶೋಧನೆಗೆ ಯೋಗ್ಯತೆಯನ್ನು ಹೊಂದಿರುವ ವಿದ್ಯಾರ್ಥಿಗಳನ್ನು ಗುರುತಿಸುವುದು.

* ವಿದ್ಯಾರ್ಥಿಗಳಿಗೆ ಅವರ ಶೈಕ್ಷಣಿಕ ಸಾಮರ್ಥ್ಯವನ್ನು ಅರಿತುಕೊಳ್ಳಲು ಸಹಾಯ ಮಾಡುವುದು.

* ವಿಜ್ಞಾನದಲ್ಲಿ ಸಂಶೋಧನಾ ವೃತ್ತಿಯನ್ನು ತೆಗೆದುಕೊಳ್ಳಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ,ದೇಶದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದು.

ಉಪಯೋಗ :

* KVPY ಪರೀಕ್ಷೆಯಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿಯು ತನ್ನ 3 ವರ್ಷದ ಪದವಿ ಶಿಕ್ಷಣ ( B.Sc,B.Stat,B.S.,B.Maths ) ದ ಸಮಯದಲ್ಲಿ ಪ್ರತಿ ತಿಂಗಳು ರೂಪಾಯಿ 5000 ಅಂದರೆ ( 3 ವರ್ಷ = 36 ತಿಂಗಳು = 36*5000 = 1,80,000) ಹಾಗೂ 2 ವರ್ಷದ ಸ್ನಾತಕೋತ್ತರ ಪದವಿ ಶಿಕ್ಷಣ ( M.Sc, M.S.)ದ ಸಮಯದಲ್ಲಿ ಪ್ರತಿ ತಿಂಗಳು ರೂಪಾಯಿ 7,000 ಅಂದರೆ ( 2 ವರ್ಷ = 24 ತಿಂಗಳು = 24*7000= 1,68,000) ಒಟ್ಟಾರೆ 5 ವರ್ಷಗಳಲ್ಲಿ 3,48,000 ಪ್ರೋತ್ಸಾಹಧನವನ್ನು ಪಡೆಯುತ್ತಾರೆ.

* ರಾಜ್ಯದ ಅತ್ಯುನ್ನತ ವಿದ್ಯಾಸಂಸ್ಥೆಗಳಾದ IISER, IISC ಹಾಗೂ ಇನ್ನಿತರ ಸಂಸ್ಥೆಗಳು ದಾಖಲಾತಿ ಸಂದರ್ಭದಲ್ಲಿ KVPY ಫಲಾನುಭವಿಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತವೆ.

ಪ್ರಮುಖ ದಿನಾಂಕಗಳು :

* KVPY ಪರೀಕ್ಷೆಗೆ ಅರ್ಜಿ ಸಲ್ಲಿಸಲು ಆರಂಭದ ದಿನಾಂಕ : 06/09/20

* KVPY ಪರೀಕ್ಷೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30/10/20

* KVPY ಪರೀಕ್ಷೆ ನಡೆಯುವ ದಿನಾಂಕ : 31/01/21

ನಮ್ಮ ಕಾಲೇಜಿನಲ್ಲಿ KVPY :

* KVPY Online Mock Test registration ಗೆ ಕೊನೆಯ ದಿನಾಂಕ : 13/10/20

* KVPY Online Mock Test ನಡೆಯುವ ದಿನಾಂಕ : 15/10/20

* ನಮ್ಮ ಕಾಲೇಜಿನಲ್ಲಿ ನೀಡುವ 3 ತಿಂಗಳ KVPY online ತರಬೇತಿ ಆರಂಭ ದಿನಾಂಕ : 16/10/20

ಹೆಚ್ಚಿನ ಮಾಹಿತಿಗಾಗಿ :

http://www.kvpy.iisc.ernet.in

ತರಬೇತಿ ಮಾಹಿತಿಗಾಗಿ :
ಸಂಪರ್ಕಿಸಿ : 9141057376, 7795055376, 9731488501, 08254- 232376

Leave a Reply