ಮಳೆ ಅಬ್ಬರಕ್ಕೆತತ್ತರಿಸಿದ ಕುಂದಾಪುರ, ಹಲವು ಪ್ರದೇಶಗಳು ಜಲಾವೃತ

Call us

Call us

Call us

ಕುಂದಾಪುರ: ತಾಲೂಕು ಭಾನುವಾರ ಮಧ್ಯಾಹ್ನ ಬಳಿಕ ಕುಂಭದ್ರೋಣ ಮಳೆಗೆ ತತ್ತರಿಸಿದ್ದು, ಪ್ರಮುಖ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಕುಂದಾಪುರ, ವಿಠಲವಾಡಿ, ಹಂಗಳೂರು, ನೇರಂಬಳ್ಳಿ, ಗೋಪಲಾಡಿ, ಕೋಟೇಶ್ವರ, ಕಾಳಾವರ, ಬೀಜಾಡಿ, ಗೋಪಾಡಿ, ಹೊದ್ರಾಳಿ, ಆನಗಳ್ಳಿ, ಹೇರಿಕುದ್ರು, ಬಳ್ಕೂರು, ಕೋಣಿ, ಗಂಗೊಳ್ಳಿ ಪ್ರದೇಶದಲ್ಲಿ ಕತಕ ನೆರೆ ಸಷ್ಟಿಯಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.

Call us

Click Here

ರಾಜ್ಯ ಹೆದ್ದಾರಿ ಜಲಾವತ: ಕೋಟೇಶ್ವರ-ಹಾಲಾಡಿ ನಡುವಿನ ಜನ್ನಾಡಿಯಲ್ಲಿ ರಾಜ್ಯ ಹೆದ್ದಾರಿ ನೀರಿನಲ್ಲಿ ಮುಳುಗಡೆಯಾಗಿದ್ದು ಸಂಚಾರ ವ್ಯತ್ಯಯ ಉಂಟಾಗಿದೆ. ಬಸ್ರೂರು-ಕುಂದಾಪುರ ನಡುವೆ ಕೋಣಿ ಎಂಬಲ್ಲಿ ರಾಜ್ಯ ಹೆದ್ದಾರಿ ಜಲಾವತಗೊಂಡಿದೆ. ಸಾವಿರಾರು ಎಕರೆ ಕಷಿಭೂಮಿ ಜಲಾವತಗೊಂಡಿದ್ದು ಭತ್ತದ ಕಷಿ ಅಪಾಯದಂಚಿಗೆ ತಲುಪಿದೆ.

ವಾರಾಹಿ ಅಪಾಯ: ತಾಲೂಕಿನ ಪ್ರಮುಖ ನದಿಗಳಲ್ಲಿ ಒಂದಾದ ವಾರಾಹಿ ನದಿ ಉಕ್ಕಿ ಹರಿಯುತ್ತಲಿದ್ದು ನದಿ ಪಾತ್ರದ ಅಮಾಸೆಬೈಲು, ಮಚ್ಚಟ್ಟು, ಹೊಳೆಬಾಗಿಲು, ತೊಂಬಟ್ಟು ಪ್ರದೇಶಗಳು ಜಲಬಂಧಿಯಾಗಿವೆ. ಬಸ್ರೂರು ಸಮೀಪದ ಮೇರ್ಡಿಯಲ್ಲಿ ಗಾಳಿಮಳೆ ಅಬ್ಬರಕ್ಕೆ ಬಹತ್ ಗೋಳಿಮರ ಬುಡಸಹಿತ ಕಿತ್ತು ನಿಂತ ಲಾರಿಯ ಮೇಲೆ ಬಿದ್ದ ಪರಿಣಾಮ ಗೋವಿಂದ ಪೂಜಾರಿ ಎಂಬವರಿಗೆ ಸೇರಿದ ಲಾರಿ ಜಖಂಗೊಂಡಿದೆ.

ನಾವುಂದ ಸಾಲ್ಬುಡದಲ್ಲಿ ನೆರೆ: ಬೈಂದೂರು ವ್ಯಾಪ್ತಿಯ ನಾವುಂದ ಸಾಲ್ಬುಡ ಎಂಬಲ್ಲಿ ನೆರೆ ಉಂಟಾಗಿದ್ದು ಕುದ್ರು ನಿವಾಸಿಗಳು ದಿಗ್ಬಂಧನಕ್ಕೊಳಗಾಗಿದ್ದಾರೆ. ಸೌಪರ್ಣಿಕಾ ನದಿ ಉಕ್ಕಿ ಹರಿದು ಕಷಿ ಭೂಮಿ, ತೆಂಗಿನತೋಟ, ಮನೆಗಳು ಜಲಾವತಗೊಂಡಿದೆ. ತಾಲೂಕಿನ ಕಾಳಾವರ ಗ್ರಾಮದಲ್ಲಿ ಇದೆ ಮೊದಲ ಬಾರಿಗೆ ನೆರೆ ಕಾಣಿಸಿಕೊಂಡಿದ್ದು ಗ್ರಾಮಸ್ಥರು ತೊಂದರೆಗೀಡಾಗಿದ್ದಾರೆ. ಕಳೆದ 2 ವರ್ಷಗಳಿಂದ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ತೋಡು ಹೂಳೆತ್ತುವ ಕೆಲಸ ಆಗದೆ ಇರುವುದರಿಂದ ನೆರೆ ಕಾಣಿಸಿಕೊಂಡಿದೆ. ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಸೀತಾಮಕ್ಕಿಯಲ್ಲಿ ನೆರೆ: ಕೋಟೇಶ್ವರ ಸಮೀಪದ ಕಲ್ಪತರು ಇಂಡಸ್ಟ್ರಿ ಪಕ್ಕದ ಸೀತಾಮಕ್ಕಿ ಎಂಬಲ್ಲಿ ನೆರೆ ಕಾಣಿಸಿಕೊಂಡಿದ್ದು ಸಂಪರ್ಕ ರಸ್ತೆ ಮುಳುಗಡೆಯಾಗಿದೆ. ಇಲ್ಲಿನ ಸೋಮ ದೇವಾಡಿಗ, ನೀಲು ದೇವಾಡಿಗ, ಶೇಷು ದೇವಾಡಿಗ, ಗಿರಿಜ ದೇವಾಡಿಗ, ಗುಲಾಬಿ ದೇವಾಡಿಗ ಅವರ ಮನೆಗಳಿಗೆ ನೀರು ನುಗ್ಗಿದೆ. ವಯೋವದ್ಧರು, ಮಕ್ಕಳು ಸಂಕಷ್ಟಕ್ಕೀಡಾಗಿದ್ದಾರೆ.

Click here

Click here

Click here

Click Here

Call us

Call us

ಸಂಪರ್ಕ ರಸ್ತೆ ಮುಳುಗಡೆ: ವ್ಯಾಸರಾಜ ಮಠ ರಸ್ತೆ, ಮೇರ್ಡಿ ರಾಜ್ಯ ಹೆದ್ದಾರಿ, ಕೋಣಿ ಪೂರ್ಣಿಮಾ ಬಾರ್ ಎದುರು ರಾಜ್ಯ ಹೆದ್ದಾರಿ, ಬೀಜಾಡಿ ಮೀನುಗಾರಿಕಾ ರಸ್ತೆ, ಕಾಂತೇಶ್ವರ ರಸ್ತೆ ಗೋಪಾಡಿ ಮುಳುಗಡೆಯಾಗಿದೆ. ನದಿಗಳು ಭರ್ತಿ: ತಾಲೂಕಿನ ಸೌಪರ್ಣಿಕಾ, ಚಕ್ರಾ, ಕುಬ್ಜಾ, ಖೇಟಾ, ಪಂಚಗಂಗಾವಳಿ ನದಿ ತುಂಬಿ ಹರಿಯುತ್ತಿದ್ದು ನದಿಪಾತ್ರದ ಅನೇಕ ತಗ್ಗುಪ್ರದೇಶಗಳು ಜಲಾವತಗೊಂಡಿದೆ.

ರಾಷ್ಟ್ರೀಯ ಹೆದ್ದಾರಿ ಜಲಾವತ: ಚತುಷ್ಪಥ ಕಾಮಗಾರಿಯ ಅವಾಂತರದಿಂದ ಹಲವೆಡೆ ರಾಷ್ಟ್ರೀಯ ಹೆದ್ದಾರಿ ಹೊಳೆಯಾಗಿ ಮಾರ್ಪಟ್ಟಿದೆ. ಕುಂಭಾಸಿ, ತೆಕ್ಕಟ್ಟೆ, ಬೀಜಾಡಿ, ಹಂಗಳೂರು, ಕುಂದಾಪುರ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಜಲಾವತಗೊಂಡಿದ್ದು ವಾಹನ ಸಂಚಾರಕ್ಕೆ ಅಡಿತಡೆ ಉಂಟಾಗಿದೆ. ಕುಂದಾಪುರದ ಕೆಎಸ್‌ಆರ್‌ಟಿಸಿ ಡಿಪೊ ಎದುರು ನೀರು ಹರಿಯುವ ತೋಡು ಮುಚ್ಚಲ್ಪಟ್ಟಿರುವುದರಿಂದ ಪ್ರದೇಶದಲ್ಲಿ ಕತಕ ನೆರೆ ಸಷ್ಟಿಯಾಗಿದ್ದು ಜನರು ತೊಂದರೆಗೀಡಾಗಿದ್ದಾರೆ..

ಬ್ರಾಹ್ಮೀಯನ್ನು ತೋಯಿಸಿದ ಕುಬ್ಜೆ: ದೇವಳದ ಕ್ಷೇತ್ರ ಪುರಾಣದಲ್ಲಿ ಉಲ್ಲೇಖಿತವಾದಂತೆ ವರ್ಷಕ್ಕೊಂದು ಬಾರಿ ಕುಬ್ಜಾ ನದಿ ಬ್ರಾಹ್ಮೀಯನ್ನು ತೋಯಿಸುವ ಘಳಿಗೆ ಈ ಬಾರಿಯೂ ಸಂಪನ್ನಗೊಂಡಿದ್ದು, ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು.

ಸಂಜೆ 5.30ರ ನಂತರ ದೇವಳ ಪ್ರಕಾರದಲ್ಲಿ ಹರಿಯುವ ಕುಬ್ಜಾ ನದಿ ಉಕ್ಕಿ ದೇಗುಲದ ಹೊರಪ್ರಾಕಾರದ ಮೂಲಕ ಒಳ ಪ್ರವೇಶಿಸಿ ನೇರವಾಗಿ ಗರ್ಭಗುಡಿಗೆ ಸಾಗಿ ದೇವಿ ವಿಗ್ರಹವನ್ನು ತೋಯಿಸಿದೆ. ಪ್ರತಿ ಮಳೆಗಾಲದಲ್ಲಿಯೂ ಇಂಥ ವಿದ್ಯಮಾನ ನಡೆಯುತ್ತಲಿದ್ದು ಈ ಬಾರಿಯೂ ಘಟಿಸಿದೆ.

ವಿಶೇಷ ಪೂಜೆ: ದೇಗುಲ ಪ್ರವೇಶಿಸಿದ ಕುಬ್ಜಾ ನದಿಗೆ ದೇವಳದ ಆಡಳಿತ ಮಂಡಳಿ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿತು. ನಂತರ ಶ್ರೀದೇವಿಗೆ ವಿಶೇಷ ಪೂಜೆ, ಮಂಗಳಾರತಿ ಬೆಳಗಲಾಯಿತು. ದೇವಳದ ಆಡಳಿತ ಮೊಕ್ತೇಸರ ಸಚ್ಚಿದಾನಂದ ಚಾತ್ರ, ಜತೆ ಮೊಕ್ತೇಸರರಾದ ಬರೆಗುಂಡಿ ಶ್ರೀನಿವಾಸ ಚಾತ್ರ, ಆಜ್ರಿ ಚಂದ್ರಶೇಖರ ಶೆಟ್ಟಿ ಮೊದಲಾದವರು ಇದ್ದರು.

ಮನಸ್ಸಿಗೆ ತೃಪ್ತಿಯಾಗಿದೆ: ಈ ಬಾರಿ ಮಳೆ ಇಳಿಮುಖವಾಗಿದ್ದ ಹಿನ್ನೆಲೆಯಲ್ಲಿ ವಾಡಿಕೆಯಂತೆ ಕುಬ್ಜಾ ನದಿ ಶ್ರೀದೇವಿಯ ಗರ್ಭಗುಡಿ ಪ್ರವೇಶಿಸುತ್ತದೊ ಇಲ್ಲವೊ ಎಂಬ ಆತಂಕವಿತ್ತು. ಬೆಳಗ್ಗಿನಿಂದ ಒಂದೇ ಸವನೆ ಸುರಿಯುತ್ತಿರುವ ಮಳೆಗೆ ಕುಬ್ಜಾ ನದಿ ತುಂಬಿ ಹರಿದು ಸಂಪ್ರದಾಯದಂತೆ ದೇಗುಲ ಪ್ರವೇಶಿಸಿ ದೇವಿಯ ವಿಗ್ರಹ ತೋಯಿಸಿದೆ. ಮನಸ್ಸಿಗೆ ಬಹಳಷ್ಟು ತೃಪ್ತಿ ನೀಡಿದೆ ಎಂದು ನೆರೆದ ಭಕ್ತರು ತಿಳಿಸಿದರು.

Leave a Reply