ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಭಂಡಾರ್ಕಾರ‍್ಸ್ ಕಾಲೇಜಿನಲ್ಲಿ ಮಣಿಪಾಳದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮತ್ತು ಐಕ್ಯಾಎಸಿ ಆಶ್ರಯದಲ್ಲಿ ಪರಿಣಾಮಕಾರಿ ಸಂಶೋಧನಾ ಗ್ರಂಥಸೂಚಿ – ಸಾಂಸ್ಥಿಕವಾಗಿ ಮೌಲ್ಯಮಾಪನ ಎಂಬ ವಿಷಯದ ಕುರಿತು ರಾಷ್ಟ್ರೀಯ ವೆಬಿನಾರ್ ನಡೆಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಮಣಿಪಾಲದ ಮಾಹೆಯ ಗ್ರಂಥಸೂಚಿಕರಾದ ಶೀಬಾ ಪಕ್ಕನ್ ಮಾತನಾಡಿ, ಸಂಶೋಧನಾ ಕ್ಷೇತ್ರವೆನ್ನುವುದು ಅತ್ಯಂತ ಪ್ರಮುಖವಾದ ಕ್ಷೇತ್ರವಾಗಿದೆ. ಇಲ್ಲಿ ಗ್ರಂಥಸೂಚಿ ಅತಿಮುಖ್ಯ ಪಾತ್ರ ವಹಿಸುತ್ತದೆ. ಸಂಶೋಧನಾ ಕ್ಷೇತ್ರದಲ್ಲಿ ಎದುರಾಗುವ ಹಲವು ಸವಾಲುಗಳನ್ನು ಪರಿಹರಿಸಿಕೊಳ್ಳುವ ವಿಧಾನಗಳ ಕುರಿತು ಸೂಕ್ಷ್ಮವಾಗಿ ಮಾಹಿತಿ ನೀಡಿದರು. ಅಲ್ಲದೇ ಸಂಶೋಧನಾ ಕ್ಷೇತ್ರದಲ್ಲಿ ಒಬ್ಬ ವ್ಯಕ್ತಿ ಸಂಶೋಧನೆ ಮಾಡಿದ ನಂತರ ಸಂಶೋಧಕನ ಸಂಶೋಧನಾ ಜ್ಞಾನವನ್ನು ಹೇಗೆ ಬಳಸಿಕೊಳ್ಳಬಹುದು ಮತ್ತು ಅಲ್ಲಿ ಬರುವಂತಹ ಬರವಣಿಗೆ ನಂತರದ ವಿವಿಧ ಜರ್ನಲ್‌ಗಳಲ್ಲಿ ಪ್ರಕಟಣೆಯ ವಿಧಾನ ಭಾಷಾ ಶೈಲಿ. ಮಾಹಿತಿ ಕಲೆ ಹಾಕುವಂತಹ ವಿಧಾನಗಳ ಕುರಿತು ಸವಿಸ್ತಾರವಾಗಿ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್ .ಪಿ ನಾರಾಯಣ ಶೆಟ್ಟಿ ಮಾತನಾಡಿದರು.
ಸುಮಾರು 81 ಅಂತರಾಷ್ಟ್ರೀಯ ಜನರು ಭಾಗವಹಿಸುವಿಕೆ ಸೇರಿದಂತೆ ಭಾರತದ 34 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ 1600 ಜನರು ನೊಂದಾವಣೆ ಮಾಡಿ 1000 ಜನರು ಈ ವೆಬಿನಾರ್‌ನಲ್ಲಿ ಭಾಗವಹಿಸಿದ್ದರು.
ಉಪನ್ಯಾಸಕರಾದ ವಿಕ್ರಮ್ ಕಾರ್ಯಕ್ರಮ ನಿರ್ವಹಿಸಿ, ಸ್ವಾಗತಿಸಿ ವಂದಿಸಿದರು ಐಕ್ಯಾಎಸಿಯ ಸಂಯೋಜಕರಾದ ಕಾಲೇಜಿನ ಐಟಿ ತಂಡದ ಸಂಯೋಜಕರಾದ ಡಾ. ನಟರಾಜ್. ಎಂ. ಬಿ ಸದಸ್ಯರಾದ ಮತ್ತು ಉಪನ್ಯಸಕರಾದ ಅಮರ್ ಸಿಕ್ವೆರಾ, ಶಂಕರನಾರಾಯಣ, ಗಣೇಶ್‌ಕುಮಾರ್ ಮತ್ತು ಪ್ರವೀಣ್ ತಾಂತ್ರಿಕ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದರು.