ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಡಾ. ಶಿವರಾಮ ಕಾರಂತ ಪ್ರತಿಷ್ಠಾನ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಡಾ. ಕಾರಂತ ಟ್ರಸ್ಟ್ ಉಡುಪಿ, ಯು – ಚಾನೆಲ್ ಸಹಯೋಗದಲ್ಲಿ ನಡೆಯುತ್ತಿರುವ ಡಾ. ಶಿವರಾಮ ಕಾರಂತ ಜನ್ಮ ದಿನೋತ್ಸವ ಹಾಗೂ ಹುಟ್ಟೂರ ಪ್ರಶಸ್ತಿಗೆ 16ನೇ ವರ್ಷದ ಸಂಭ್ರಮದ ಅಂಗವಾಗಿ ನಡೆಯುತ್ತಿರುವ ಸಾಹಿತ್ಯಿಕ – ಸಾಂಸ್ಕೃತಿಕ ಸುಗ್ಗಿ ಆಲ್ಮೋರ – 2020 ಮರೆಯಲಾಗದ ಶಬ್ಧತೀರ ಕಾರ್ಯಕ್ರಮದಲ್ಲಿ ಎಂಟನೇ ದಿನದ ಕಾರಂತ ಚಿಂತನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರದಲ್ಲಿ ಸಾಹಿತಿ ವಿಠ್ಠಲ್ ವಿ. ಗಾಂವ್ಕರ್ ಮಾತನಾಡಿ, ಕಾರಂತರು ನೋಬೆಲ್ ಪ್ರಶಸ್ತಿಗೆ ಆರ್ಹರು ಅವರ ಕಾದಂಬರಿಯಲ್ಲಿ ಹೆಚ್ಚಾಗಿ ಬಡತನ, ಹೋರಾಟ, ಪರಿಸರದ ಬಗ್ಗೆ ಕಾಳಜಿ ಕಾಣುತ್ತದೆ, ಅಲ್ಲದೇ ಅವರ ಮನಸ್ಸು ಯಾವಾಗಲೂ ಹೊಸತನದತ್ತ ಹಾತೊರೆಯುತ್ತಿತ್ತು ಎಂದು ಹೇಳಿದರು.
ಕಾರಂತ ಚಿಂತನ ಕಾರ್ಯಕ್ರಮದ ಎಸ್. ಪಿ. ಮ್ಯೂಸಿಕಲ್ ಕುಂದಾಪುರ ಇವರಿಂದ ಸಂಗೀತ ಸಿಂಚನ ಕಾರ್ಯಕ್ರಮ ನಡೆಯಿತು.
ಕಾರಂತ ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ನಿರೂಪಿಸಿ ಕಾರಂತ್ ಥೀಮ್ ಪಾರ್ಕ್ ಪ್ರಶಾಂತ್ ಸ್ವಾಗತಿಸಿ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮ ಅವರು ವಂದಿಸಿದರು.