ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ದೇವತೆಗಳು ಮದ್ಯ ಮಾಂಸ ತಿನ್ನುವುದಿಲ್ಲ ಅಪೇಕ್ಷಿಸುವುದೂ ಇಲ್ಲ ಪ್ರಾಣಿಗಳನ್ನು ಬಲಿ ನೀಡುವುದರಿಂದ ಮದ್ಯ ಮಾಂಸಗಳ ನೈವೇದ್ಯ ಅರ್ಪಿಸುದರಿಂದ ದೇವಿ ಪ್ರಸನ್ನಳಾಗುತ್ತಾಳೆ ಎನ್ನುವುದು ಅಜ್ಞಾನದ ನಂಬಿಕೆ ಎಂದು ಅಧ್ಯಾತ್ಮಿಕ ಚಿಂತಕ ಕಾಳಿ ಚರಣ್ ಮಹಾರಾಜ್ ಹೇಳಿದರು.
ಕೊಲ್ಲುರಿನ ಮುಕಾಂಬಿಕ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದ ಬಳಿಕ ಅವರು ಸುದ್ದಿಗಾರೊಂದಿಗೆ ಮಾತನಾಡಿದರು, ಯಾವುದೇ ರೀತಿಯ ಜಾತಿ ಹಾಗೂ ಭಾಷಾ ವಾದಗಳು ಸರಿಯಲ್ಲ ಸಮಸ್ತ ಹಿಂದೂ ಒಂದೇ ಎನ್ನುವಭಾವನೆಗಳು ಇರಬೇಕು ಜಾತಿವಾದದಿಂದಲೇ ಅತ್ಯಾಚಾರದಂತಹ ದುಷ್ಕೃತ್ಯಗಳು ನಡೆಯುತ್ತದೆ ಎಂದರು. ಕೃಷಿ ಆಧಾರಿತ ಭಾರತದಲ್ಲಿ ಗೋವುಗಳಿಗೆ ಗೋವಿನ ಉತ್ಪನ್ನಗಳಿಗೂ ಅಂತ್ಯಂತ ಮಹತ್ವವಿದೆ ಭಾವನಾತ್ಮಕ ಸಂಬಂಧಗಳನ್ನು ಇರಿಸಿಕೊಂಡಿರಿರುವ ಗೋವುಗಳನ್ನು ರಕ್ಷಿಸುವ ಅನಿವಾರ್ಯತೆ ಇದೆ. ಭಾರತಿಯ ತಳಿಯ ಗೋವುಗಳನ್ನು ರಕ್ಷಣೆ ಮಾಡುವ ಕಾರ್ಯಗಳು ದೇಶದಲ್ಲಿ ಹೆಚ್ಚಾಗಬೇಕು ದೇಶಿಯ ಗೋವುಗಳಲ್ಲಿ ಔಷದ ಗುಣಗಳ ಮಹತ್ವವಿದೆ ಗೋವುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಅಗತ್ಯ ಕಾನೂನು ಜಾರಿಯಾಗಬೇಕು ಎಂದು ಕಾಳಿ ಚರಣ್ ಮಹಾರಾಜ್ ಹೇಳಿದರು.
ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ, ಶಕ್ತಿರಾಜ್, ಪ್ರತೀಕ್ ಶೆಟ್ಟಿ ಮುಲ್ಕಿ ಅಭಿಶೇಕ್ ಭಂಡಾರಿ ಎಕ್ಕಾರು ಶರತ್ ಹೆಗ್ಡೆ ಇದ್ದರು.