ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅಭಿನವ ಕಲಾ ತಂಡದ ಉದ್ಘಾಟನಾ ಸಮಾರಂಭ ಇತ್ತೀಚೆಗೆ ಕುಂದಾಪುರದ ವಿಠಲವಾಡಿಯಲ್ಲಿ ನಡೆಯಿತು.
ಕುಂದಗನ್ನಡದ ರಾಯಾಭಾರಿ ಅಧ್ಯಾಪಕರು ಮನು ಹಂದಾಡಿ ಕಾರ್ಯಕ್ರಮ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ನಾಟಕ ನಿರ್ದೇಕರಾದ ರಾಮಚಂದ್ರ ಉಡುಪ ವಹಿಸಿದ್ದರು. ಕಲಾ ತಂಡದ ಚೊಚ್ಚಲ ನಾಟಕ ಕೃತಿ ‘ರತ್ನ ಶ್ಯಾಮಿಯಾನ’ ಇದರ ಬಿಡುಗಡೆಯನ್ನು ದಿನೇಶ ಗೋಡೆ ನೆರವೇರಿಸಿದರು. ಸಂಸ್ಥೆಯ ಸಾಮಾಜಿಕ ಜಾಲತಾಣವನ್ನು ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ನಾಗರಾಜ ರಾಯಪ್ಪನ ಮಠ ಬಿಡುಗಡೆ ಮಾಡಿದರು.
ಇದೇ ಸಂದರ್ಭದಲ್ಲಿ ನಾಟಕ ನಿರ್ದೇಶಕರಾದ ರಾಮಚಂದ್ರ ಉಡುಪ ಇವರಿಗೆ ಗುರುವಂದನೆ ಸಲ್ಲಿಸಲಾಯಿತು. ಸಂಸ್ಥೆಯ ಸ್ಥಾಪಕರಾದ ನಾಗರಾಜ ವಿಠಲವಾಡಿ, ಗುರು ಕುಂದಾಪುರ, ಉದಯ ಪೂಜಾರಿ, ಉಪಸ್ಥಿತರಿದ್ದರು. ಶ್ರೀನಿವಾಸ ಪೈ ಸ್ವಾಗತಿಸಿದರು, ಚೈತ್ರ ಕಾರ್ಯಕ್ರಮ ನಿರೂಪಿಸಿದರು, ಗುರು ಕುಂದಾಪುರ ವಂದಿಸಿದರು.