ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಗೋಳಿಹೊಳೆ ಯಲ್ಲಿ ಶ್ರೀ ವಿನಾಯಕ ಆಟೋರಿಕ್ಷಾ ಗೂಡ್ಸ್ ಟೆಂಪೋ ಮತ್ತು ಟ್ಯಾಕ್ಸಿ ಚಾಲಕ-ಮಾಲಕರ ಸಂಘದಿಂದ 65ನೇ ಕನ್ನಡ ರಾಜ್ಯೋತ್ಸವ ಸಮಾರಂಭ ಮತ್ತು ವಾಹನದ ಮೆರವಣಿಗೆ ಆಚರಿಸಲಾಯಿತು .
ಸಮಾರಂಭಕ್ಕೆ ಬೈಂದೂರು ಪೊಲೀಸ್ ಠಾಣಾಧಿಕಾರಿ ಸಂಗೀತ ರವರು ತಾಯಿ ಭುವನೇಶ್ವರಿ ಮಾಲಾರ್ಪಣೆ ಮಾಡಿ ನಂತರ ಧ್ವಜರೋಹಣ ನೆರವೇರಿಸಿ ಕನ್ನಡ ರಾಜ್ಯೋತ್ಸವದ ಸಂದೇಶ ನೀಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಮೂಕಾಂಬಿಕಾ ದೇವಳದ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶಿವರಾಮ್ ಭಟ್ಟರು ಶ್ರೀ ಭುವನೇಶ್ವರಿ ತಾಯಿ ರಥಕ್ಕೆ ಪೂಜೆಯನ್ನು ಮಾಡಿ ರಾಜ್ಯೋತ್ಸವದ ಸಂದೇಶವನ್ನು ಹೇಳಿದರು ಈ ಕಾರ್ಯಕ್ರಮದಲ್ಲಿ ಚಾಲಕ – ಮಾಲಕ ಸಂಘದ ಅಧ್ಯಕ್ಷರಾದ ಮಂಜು ಪೂಜಾರಿ ಸಸಿಹಿತ್ಲು ಮತ್ತು ಕಾರ್ಯದರ್ಶಿ ನಾರಾಯಣ ಪೂಜಾರಿ ಹಾಗೂ ಖಜಾಂಚಿ ಯವರಾದ ಗೋಪಾಲ್ ಮರಾಠಿ ಮತ್ತು ಗೋಳಿಹೊಳೆ ಅರೆಶಿರೂರು ಎಲ್ಲೂರು ಎಳಜಿತ ಘಟಕದ ಸರ್ವ ಸದಸ್ಯರು ಊರಿನ ಗ್ರಾಮಸ್ಥರು ಹಾಜರಿದ್ದರು