ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಸುರಭಿ ಸಂಸ್ಥೆಯಿಂದ ತೇಜಸ್ವಿಯವರ ಕೃತಿಗಳಲ್ಲಿ ’ಪರಿಸರ ಮತ್ತು ಬದುಕು’ಎಂಬ ವಿಷಯದ ಕುರಿತು ಆನ್‌ಲೈನ್ ಸ್ಷರ್ಧೆಯನ್ನು (ವಿಮರ್ಶಾತ್ಮಕ ಅನಿಸಿಕೆ ಪ್ರಸ್ತುತಿ ) ಎರ್ಪಡಿಸಲಾಗಿದೆ .
ಸ್ಪರ್ಧೆಯಲ್ಲಿ ಪದವಿ ಪೂರ್ವ ಮತ್ತು ಪದವಿ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ಸಂಕ್ಷಿಪ್ತ ಸ್ವ-ಪರಿಚಯದೊಂದಿಗೆ 5 ರಿಂದ 6 ನಿಮಿಷಗಳ ವರೆಗಿನ ವೀಡಿಯೋವನ್ನು ಕಳುಹಿಸಬಹುದಾಗಿದೆ. ವಿಚಾರ ಮಂಡನೆಯು ವಿಮರ್ಶಾತ್ಮಕ ಅಥವಾ ಅನಿಸಿಕೆ ರೂಪದಲ್ಲಿಯೂ ಇರಬಹುದು. ವೀಡಿಯೋ ಕಳುಹಿಸಲು ಕೊನೆಯ ದಿನಾಂಕ – 20 ನವೆಂಬರ್ 2020. ಸ್ಪರ್ಧೆಯ ಫಲಿತಾಂಶದ ಘೋಷಣಾ ದಿನಾಂಕ -30 ನವೆಂಬರ್ 2020. ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ ಡಿಸೆಂಬರ್ ಮೊದಲ ವಾರದಲ್ಲಿ ನಡೆಯಲಿದೆ.
ವಿಜೇತರಿಗೆ ಆಕರ್ಷಕ ಬಹುಮಾನಗಳಿದ್ದು, ಪ್ರಥಮ ರೂ 5000, ದ್ವಿತೀಯ ರೂ 3000, ತೃತೀಯ ರೂ1000 ಬಹುಮಾನವಿದ್ದು ವಿಜೇತರಿಗೆ ಪ್ರಮಾಣಪತ್ರ ಹಾಗೂ ಗಿಫ್ಟ್ ಹ್ಯಾಂಪರ್ ನೀಡಲಾಗುತ್ತದೆ. ರೆಕಾರ್ಡ್ ಮಾಡಲಾದ ವೀಡಿಯೋವನ್ನು ಇ-ಮೇಲ್ (surabhibyndoorcomp@gmail.com) ಅಥವಾ ವಾಟ್ಸಪ್ (9902213959, 9740241490) ಮೂಲಕ ಕಳುಹಿಸುವುದು. ಈ ಸಾಹಿತ್ಯಿಕ ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸುರಭಿ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.