ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಮಕ್ಕಳ ಸ್ನೇಹಿ ಪಂಚಾಯತ್ ಕಾರ್ಯಕ್ರಮದ ಭಾಗವಾಗಿ ನವೆಂಬರ್ 14 ರ ಮಕ್ಕಳ ದಿನದಿಂದ ಓದುವ ಬೆಳಕು ಅಭಿಯಾನವನ್ನು ಹಮ್ಮಿಕೊಂಡಿದೆ. ಮಕ್ಕಳಿಗೆ ಉಚಿತ ಸದಸ್ಯತ್ವ ನೀಡಿ ಪುಸ್ತಕಗಳನ್ನು ನೀಡಲಾಗುತ್ತಿದೆ.
ಭಾರತ ಜ್ಞಾನ ವಿಜ್ಞಾನ ಸಮಿತಿಯ ರವಿ ಕಟ್ಕೆರೆ ಮಕ್ಕಳೊಂದಿಗೆ ಕೋಟೇಶ್ವರ ಪಂಚಾಯತ್ ಗೆ ಭೇಟಿ ನೀಡಿದರು. ಅಭಿವೃದ್ಧಿ ಅಧಿಕಾರಿಯವರಾದ ತೇಜಪ್ಪ ಕುಲಾಲ ಮಕ್ಕಳಿಗೆ ಪುಸ್ತಕ ನೀಡಿ ಓದುವ ಬೆಳಕು ಅಭಿಯಾನ ಆರಂಭಿಸಿದರು. ಗ್ರಂಥಪಾಲಕಿ ಶಾರದಾ ಎಲ್ಲ ಮಕ್ಕಳಿಗೂ ಉಚಿತ ಸದಸ್ಯತ್ವ ನೀಡಿದರು.