ಜಾತ್ರೆ ವೇಳೆ ಕೋವಿಡ್ ನಿಯಮ ಪಾಲನೆ ಕಡ್ಡಾಯ: ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ‘ಜಿಲ್ಲೆಯಲ್ಲಿ ಕೋವಿಡ್-19 ಪ್ರಸರಣ ಕ್ಷೀಣಿಸುತ್ತಿದೆಯಾದರೂ ಅದರ ಅಪಾಯ ದೂರಾಗಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ವಿಧಿಸಿರುವ ನಿರ್ಬಂಧಗಳನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಹೇಳಿದರು.

Call us

Click Here

ಡಿಸೆಂಬರ್‌ 1ರಂದು ನಡೆಯುವ ಉಪ್ಪುಂದ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರೆ ನಿರ್ವಹಣೆ ಕುರಿತು ಚರ್ಚಿಸಲು ಶುಕ್ರವಾರ ದೇವಸ್ಥಾನದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಲ್ಲಿನ ಜಾತ್ರೆಯಲ್ಲಿ ಅಸಂಖ್ಯ ಜನ ಸೇರುತ್ತಾರೆ. ಈ ಬಾರಿ ಅದಕ್ಕೆ ಅವಕಾಶ ಕೊಡುವಂತಿಲ್ಲ. ರಥೋತ್ಸವವನ್ನು ದೇವಸ್ಥಾನದ ಪರಂಪರಾಗತ ಪದ್ಧತಿಗೆ ಚ್ಯುತಿ ಬಾರದಂತೆ ಧಾರ್ಮಿಕ ವಿಧಿ ಮತ್ತು ಉತ್ಸವಗಳನ್ನು ನಡೆಸಬೇಕಾಗಿದೆ. ಜಾತ್ರೆಯ ಅಂಗಡಿಗಳಿಗೆ ಅವಕಾಶವಿಲ್ಲ. ರಥೋತ್ಸವದ ಭಾಗವಾಗಿ ನಡೆಯುವ ಕಟ್ಟೆ ಉತ್ಸವಗಳಲ್ಲಿ 25ಕ್ಕಿಂತ ಹೆಚ್ಚು ಜನರು, ರಥೋತ್ಸವದಂದು ಬೆಳಿಗ್ಗಿನ ರಥಾರೋಹಣ ಮತ್ತು ಸಂಜೆಯ ರಥಾವರೋಹಣಗಳಲ್ಲಿ 100ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ. ದೇವರ ದರ್ಶನಕ್ಕೆ ಅವಕಾಶವಿರುತ್ತದೆ. ಕೊರೊನಾ ಸೋಂಕು ಸಂಪೂರ್ಣ ತೊಲಗುವವರೆಗೂ ಇಂತಹ ನಿರ್ಬಂಧ ಅನಿವಾರ್ಯ. ಎಲ್ಲರ ಆರೋಗ್ಯದ ದೃಷ್ಟಿಯಿಂದ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಅವರು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಮಾತನಾಡಿ, ‘ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬಾರದಂತೆ ಸರಳವಾಗಿ ಜಾತ್ರೆ ನಡೆಸಲು ಅವಕಾಶವಿದೆ. ಜಿಲ್ಲೆಯ ಜನರ ಸಹಕಾರದಿಂದ ಕೊರೊನಾ ನಿಯಂತ್ರಣದಲ್ಲಿದೆ. ಮುಂದೆಯೂ ಜನರು ಸ್ವಯಂ ನಿಯಂತ್ರಣ ಸಾಧಿಸಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಗೌರಿ ದೇವಾಡಿಗ, ಸುರೇಶ ಬಟ್ವಾಡಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ಪ್ರಮಿಳಾ ದೇವಾಡಿಗ, ತಹಶೀಲ್ದಾರ್ ಬಸಪ್ಪ ಪಿ. ಪೂಜಾರ್, ಎಎಸ್‌ಪಿ ಹರಿರಾಂಶಂಕರ್, ಬೈಂದೂರು ಪಿಎಸ್‌ಐ ಸಂಗೀತಾ, ದೇವಳದ ತಂತ್ರಿ ಕೊಲ್ಲೂರು ಮಂಜುನಾಥ ಅಡಿಗ, ಪ್ರಧಾನ ಅರ್ಚಕ ಪ್ರಕಾಶ ಉಡುಪ, ಕಾರ್ಯನಿರ್ವಹಣಾಧಿಕಾರಿ ವೆಂಕಟೇಶ್, ಪ್ರಮುಖರಾದ ನೆಲ್ಯಾಡಿ ದೀಪಕ್‌ಕುಮಾರ್ ಶೆಟ್ಟಿ, ಶಿವರಾಮ ಕಾರಂತ್, ಜಯರಾಮ ಶೆಟ್ಟಿ ಇದ್ದರು. ಸಂದೇಶ ಭಟ್ ಕಾರ್ಯಕ್ರಮ ನಿರ್ವಹಿಸಿದರು. ದೇವಳ ವಾರ್ಷಿಕ ಜಾತ್ರಾ ಮಹೋತ್ಸವದ ವಿಧಿಗಳು 26ಕ್ಕೆ ಆರಂಭವಾಗುವುವು. ಡಿ. 1ರಂದು ರಥೋತ್ಸವ, 2ರಂದು ಅವಭೃತ ಸ್ನಾನ ಜರುಗುವುದು.

 

Click here

Click here

Click here

Click Here

Call us

Call us

Leave a Reply