ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜೇಸಿಐ ಶಂಕರನಾರಾಯಣದ ಜೇಸಿರೆಟ್ ವಿಭಾಗ ಹಾಗೂ ಕರ್ನಾಟಕ ಬ್ಯಾಂಕ್ ಕುಳ್ಳುoಜೆ ಶಾಖೆ ಶಂಕರನಾರಾಯಣ ಸಹಯೋಗದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ನಡೆದ ‘ನಮ್ಮ ಮನೆಯ ಮುದ್ದು ಕಂದ’ ಭಾವಚಿತ್ರ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭವು ಸಮೃದ್ಧಿ ಯುವಕ ಮಂಡಲದ ವಠಾರದಲ್ಲಿ ಜರುಗಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಜೇಸಿರೆಟ್ ಮತ್ತು ಮಹಿಳಾ ಜೇಸಿಸ್ ವಿಭಾಗ ಜೇಸಿಐ ವಲಯ 15ರ ವಲಯ ನಿರ್ದೇಶಕ ಜೆ ಎಫ್ ಎಸ್ ಜ್ಯೋತಿ ರಮಾನಾಥ್ ಶೆಟ್ಟಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಜೇಸಿರೆಟ್ ವಿಭಾಗ ಕೈಗೊಂಡ ಉತ್ತಮ ಕಾರ್ಯಕ್ರಮಗಳ ಬಗ್ಗೆ ಶ್ಲಾಘಿಸಿದರು. ಸಿಂಡಿಕೇಟ್ ಬ್ಯಾಂಕ್ ನ ನಿವೃತ್ತ ಅಧಿಕಾರಿ ಮಂಜುನಾಥ್ ಕಾಮತ್ ಹಾಲಾಡಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿ ಜೇಸಿರೆಟ್ ವಿಭಾಗ ಅತ್ಯುತ್ತಮ ಕಾರ್ಯಕ್ರಮ ಕೈಗೊಂಡಿದ್ದು ಇಂತಹ ಕಾರ್ಯಕ್ರಮ ಗ್ರಾಮೀಣ ಪ್ರದೇಶದಲ್ಲಿ ನಿರಂತರವಾಗಿ ನಡೆಯಲಿ ಎಂದರು ಹಾಗು ಇಂತಹ ಕಾರ್ಯಕ್ರಮಕ್ಕೆ ಸಹಕಾರದ ಭರವಸೆಯನ್ನು ನೀಡಿದರು.
ಜೇಸಿರೆಟ್ ಅಧ್ಯಕ್ಷೆ ಪಲ್ಲವಿ ಪ್ರವೀಣ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಚೈತ್ರ ಎ. ನಾಯ್ಕ್, ಕರ್ನಾಟಕ ಬ್ಯಾಂಕ್ ಕುಳ್ಳುoಜೆ ಶಾಖೆಯ ಶಾಖಾಧಿಕಾರಿ ಶಿವಪ್ರಸಾದ್, ಹಾಲಾಡಿ ಶಾಖೆಯ ಅಂಚೆ ಪಾಲಕ ಪ್ರವೀಣ್ ನಾಯ್ಕ್ ಬಾಳೆಕೊಡ್ಲು, ಹಾಲಾಡಿ ವಲಯದ ಅಂಗನವಾಡಿ ಮೇಲ್ವಿಚಾರಕಿ ಲಲಿತಾ, ಉದ್ಯಮಿ ರಮಾನಾಥ್ ಶೆಟ್ಟಿ, ಜೇಸಿಐ ಪೂರ್ವಾಧ್ಯಕ್ಷ ರಾಮಚಂದ್ರ ದೇವಾಡಿಗ, ಜೇಸಿ ನಾರಾಯಣ್ ಟಿ, ಗ್ರಾಮ ಪಂಚಾಯತ್ ಮಾಜಿ ಸದಸ್ಯ ರಘುರಾಮ್ ಕುಳ್ಳುoಜೆ, ಉಪಸ್ಥಿರಿದ್ದರು,
ಜೇಸಿರೆಟ್ ಪಲ್ಲವಿ ಪ್ರವೀಣ್ ಸ್ವಾಗತಿಸಿ ಉಪನ್ಯಾಸಕ ಪ್ರಕಾಶ್ ನಾಯ್ಕ್ ಕಾರ್ಯಕ್ರಮ ನಿರೂಪಿಸಿ ಶಿಕ್ಷಕಿ ಶ್ಯಾಮಲ ವಂದಿಸಿದರು.