ಆಳ್ವಾಸ್: ಜನಾಂದೋಲನ ಜಾಗೃತಿ ಕಾಲ್ನಡಿಗೆ ಜಾಥ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡಬಿದರೆ: ಆಳ್ವಾಸ್ ನ್ಯಾಚರೋಪತಿ ಮತ್ತು ಯೋಗ ವಿಜ್ಞಾನ ಕಾಲೇಜು, ಹಾಗು ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ಸಂಸ್ಥೆ ಪುಣೆ ಇವರ ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆ – 2020 ಆಚರಿಸಲಾಯಿತು. ಕಾರ್ಯಾಕ್ರಮದ ಅಂಗವಾಗಿ ಕೋವಿಡ್-19 ಸಂದರ್ಭದಲ್ಲಿ ಜನತೆ ತೆಗೆದುಕೊಳ್ಳಬೇಕಾದ ಮುಂಜಾಗೃತ ಕ್ರಮಗಳ ಬಗ್ಗೆ ಅರಿವು ಮೂಡಿಸಲು ಜನಾಂದೋಲನ ಜಾಗೃತಿ ಕಾಲ್ನಡಿಗೆ ಜಾಥ, ಮೂಡುಬಿದಿರೆಯ ನವಮಿ ವೃತ್ತದಿಂದ ನಗರ ಪೋಲಿಸ್ ಠಾಣೆಯವರೆಗೆ ಹಮ್ಮಿಕೊಳ್ಳಲಾಯಿತು.

Call us

Click Here

ನಗರ ಠಾಣೆಯ ಪೋಲಿಸ್ ನೀರಿಕ್ಷಕರಾದ ದಿನೇಶ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಪದ್ದತಿಯನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಿಂದ ಮನುಷ್ಯ ದೂರವಿರಬಹುದು . ಪ್ರಸ್ತುತ ದಿನಗಳಲ್ಲಿ ಹೆಚ್ಚಿನ ಜನರು ಮಾನಸಿಕ ಒತ್ತಡಕ್ಕೆ ತುತ್ತಾಗುತ್ತಿದ್ದಾರೆ ಇಂತಹ ಒತ್ತಡದಿಂದ ಹೊರಬರಲು ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ಸಹಕಾರಿಯಾಗಲಿದೆ ಎಂದರು.

ಕೋವಿಡ್ ಸಂಧರ್ಭದಲ್ಲಿ ಆಳವಡಿಸಬೇಕಾದ ಸ್ವಚ್ಚತೆ ಹಾಗೂ ಮಾಸ್ಕ್ ಧರಿಸುವ ಬಗೆಯನ್ನು ತಿಳಿಸಲಾಯಿತು. ಈ ಸಂದರ್ಭದಲ್ಲಿ ಪೋಲಿಸ್ ಸಿಬ್ಬಂದಿಗಳಿಗೆ ಕಾಲೇಜಿನ ವೈದ್ಯ ವಿಧ್ಯಾಥರ್ಿಗಳು ಸೂಕ್ತ ಆಹಾರ ಪದ್ದತಿಗಳ ಬಗ್ಗೆ ಹಾಗೂ ನ್ಯಾಚರೋಪತಿ ಚಿಕಿತ್ಸಾ ವಿಧಾನಗಳ ಬಗ್ಗೆ ತಿಳಿಸಿದರು. ಕಾಲೇಜಿನ ಸಹಾಯಕ ಪ್ರಾದ್ಯಪಕ ಡಾ. ನಿತೇಶ್ ಎಂ.ಕೆ ಉಪಸ್ಥಿತರಿದ್ದರು.

Leave a Reply