ಚುನಾವಣಾ ಪೂರ್ವತಯಾರಿ ಸಭೆಗೆ ತಾ.ಪಂ ಸದಸ್ಯರ ಗೈರು: ಬೈಂದೂರು ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ?

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರ ನಿವಾಸದಲ್ಲಿ ಮಂಗಳವಾರ ನಡೆದ ಗ್ರಾಮ ಪಂಚಾಯಿತಿ ಚುನಾವಣಾ ಪೂರ್ವ ತಯಾರಿ ಸಭೆಗೆ ಬಹುತೇಕ ಬೈಂದೂರು ತಾ.ಪಂ ಸದಸ್ಯರು ಗೈರಾಗಿರುವುದು ಬಿಜೆಪಿ ಪಕ್ಷದಲ್ಲಿ ಹೊಗೆಯಾಡುತ್ತಿದ್ದ ಭಿನ್ನಮತಕ್ಕೆ ಮತ್ತಷ್ಟು ಪುಷ್ಠಿ ನೀಡಿದಂತಾಗಿದೆ.

Call us

Click Here

ಶಾಸಕರ ನೆಂಪು ನಿವಾಸದಲ್ಲಿ ನಡೆದ ಚುನಾವಣಾ ಪೂರ್ವ ತಯಾರಿ ಸಭೆಗೆ ಬೈಂದೂರು ತಾ.ಪಂ ಅಧ್ಯಕ್ಷ ಮಹೇಂದ್ರ ಪೂಜಾರಿ ಸೇರಿದಂತೆ ಒಟ್ಟು ಒಂಭತ್ತು ಬಿಜೆಪಿ ಬೆಂಬಲಿತ ತಾ.ಪಂ ಸದಸ್ಯರ ಪೈಕಿ ಕೇವಲ ಈರ್ವರು ಮಹಿಳಾ ತಾ.ಪಂ ಸದಸ್ಯರು ಭಾಗವಹಿಸಿದ್ದು, ಉಳಿದ ಏಳು ಮಂದಿ ತಾ.ಪಂ ಸದಸ್ಯರು ಗೈರಾಗಿದ್ದಾರೆ. ಬೈಂದೂರು ಬಿಜೆಪಿಯ ಪ್ರಭಾವಿ ನಾಯಕ, ಜಿಲ್ಲಾ ಪಂಚಾಯಿತಿ ಸದಸ್ಯ ಬಾಬು ಹೆಗ್ಡೆಯವರ ಗೈರು ಕೂಡ ಪಕ್ಷದೊಳಗೆ ನಾಯಕರ ಮಧ್ಯೆ ನಡೆಯುತ್ತಿರುವ ಮುಸುಕಿನ ಗುದ್ದಾಟ ಬಹಿರಂಗಗೊಂಡಂತಾಗಿದೆ.

ಪಕ್ಷದ ಎಲ್ಲಾ ಸಭೆಗಳನ್ನು ಶಾಸಕರ ಮನೆಯಲ್ಲಿ ನಡೆಸುವ ಬೈಂದೂರು ಶಾಸಕ ಸುಕುಮಾರ್ ಶೆಟ್ಟಿಯವರ ನಡೆಗೆ ಈ ಹಿಂದೆಯೂ ಸಾಕಷ್ಟು ಪ್ರತಿರೋಧಗಳು ವ್ಯಕ್ತವಾಗಿದ್ದವು. ಆದರೂ ಕೂಡ ಶಾಸಕರು ಚುನಾವಣಾ ಪೂರ್ವ ತಯಾರಿ ಸಭೆಯನ್ನು ಮತ್ತೆ ತಮ್ಮ ನಿವಾಸದಲ್ಲಿ ಆಯೋಜಿಸಿರುವುದು ಮತ್ತು ಬೇರೆ ಪಕ್ಷದಿಂದ ಬಂದವರಿಗೆ ಆದ್ಯತೆ ನೀಡುತ್ತಿರುವುದನ್ನು ವಿರೋಧಿಸಿ, ಕೆಲ ಬಿಜೆಪಿ ಮುಖಂಡರು ಸಭೆಗೆ ಗೈರಾಗುವ ಮೂಲಕ ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಿರುವುದು ತಿಳಿದುಬಂದಿದೆ.

Leave a Reply