ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ, ಜಿಲ್ಲೆಯ ವ್ಯಾಪ್ತಿಗೊಳಪಡುವ 118-ಬೈಂದೂರು, 119 -ಕುಂದಾಪುರ, 120 -ಉಡುಪಿ, 121-ಕಾಪು ಹಾಗೂ 122-ಕಾರ್ಕಳ ವಿಧಾನಸಭಾ ಕ್ಷೇತ್ರಗಳಿಗೆ ಸಂಬAಧಿಸಿದ ಕರಡು ಮತದಾರರ ಪಟ್ಟಿಯನ್ನು ನವೆಂಬರ್ 18 ರಂದು ಚುನಾವಣಾ ಆಯೋಗದ ವೆಬ್‌ಸೈಟ್ https://www.ceokarnataka.kar.nic.in ಹಾಗೂ ಜಿಲ್ಲೆಯ ಎಲ್ಲಾ ಮತಗಟ್ಟೆ ಮಟ್ಟದಲ್ಲಿ ಪ್ರಕಟಿಸಲಾಗಿದೆ.

Call us

Click Here

ಜಿಲ್ಲೆಯ ಮತದಾರರು ಪ್ರಕಟಿಸಲಾದ ಕರಡು ಮತದಾರ ಪಟ್ಟಿಯನ್ನು ಸ್ವತಃ ಪರಿಶೀಲಿಸಿ, ಅವರವರ ಹೆಸರು ಇರುವುದನ್ನು ದೃಢಪಡಿಸಿಕೊಳ್ಳಬೇಕು. ಒಂದು ವೇಳೆ ತಮ್ಮ ವಾಸಸ್ಥಾನದ ವ್ಯಾಪ್ತಿಯ ಮತಗಟ್ಟೆಯ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಣಿ ಆಗದೆ ಇದ್ದಲ್ಲಿ ಜನವರಿ 1, 2021 ಕ್ಕೆ 18 ವರ್ಷ ಪೂರ್ಣಗೊಳ್ಳಲಿರುವ ಅರ್ಹ ಭಾರತೀಯ ನಾಗರಿಕರು ನವೆಂಬರ್ 18 ರಿಂದ ಡಿಸೆಂಬರ್ 17 ರ ವರೆಗೆ ವಿಶೇಷ ಸಂಕ್ಷಿಪ್ತ ಪರಿಷ್ಕರಣಾ ಅವಧಿಯಲ್ಲಿ ನಿಗದಿತ ನಮೂನೆ-6 ರಲ್ಲಿ ಕ್ಷೇತ್ರದ ಮತಗಟ್ಟೆ ಹಂತದ ಅಧಿಕಾರಿ(ಬಿ.ಎಲ್.ಓ) ರವರಿಗೆ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಲು, ಮತದಾರ ಪಟ್ಟಿಯಲ್ಲಿ ತಮ್ಮ ಹೆಸರು, ವಿಳಾಸ ಇತ್ಯಾದಿ ಲೋಪದೋಷಗಳನ್ನು ತಿದ್ದುಪಡಿ ಮಾಡಿಸಿಕೊಳ್ಳಲು ನಮೂನೆ -8 ರ ಅರ್ಜಿಯಲ್ಲಿ ಮತ್ತು ಮತದಾರ ಪಟ್ಟಿಯಲ್ಲಿ ಹೆಸರುಗಳನ್ನು ತೆಗೆದು ಹಾಕಲು ನಮೂನೆ-7 ರಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಈ ಅರ್ಜಿಗಳನ್ನು https://www.nvsp.in ರಲ್ಲಿ ಆನ್‌ಲೈನ್ ಮೂಲಕ ಸಲ್ಲಿಸಬಹುದು.

ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 226746 ಮಂದಿ ಮತದಾರರಿದ್ದು, ಇವರಲ್ಲಿ 110430 ಮಂದಿ ಗಂಡಸರು, 116314 ಮಂದಿ ಹೆಂಗಸರು ಹಾಗೂ 2 ತೃತೀಯ ಲಿಂಗಿ ಮತದಾರರಿದ್ದಾರೆ.

ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 97493 ಮಂದಿ ಗಂಡಸರು ಹಾಗೂ 105345 ಮಂದಿ ಹೆಂಗಸರು ಸೇರಿದಂತೆ ಒಟ್ಟು 202838 ಮಂದಿ ಮತದಾರರಿದ್ದಾರೆ.

ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 101740 ಮಂದಿ ಗಂಡಸರು ಹಾಗೂ 108611 ಮಂದಿ ಹೆಂಗಸರು ಸೇರಿದಂತೆ ಒಟ್ಟು 210351 ಮಂದಿ ಮತದಾರರಿದ್ದಾರೆ.

Click here

Click here

Click here

Click Here

Call us

Call us

ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 184790 ಮಂದಿ ಮತದಾರರಿದ್ದು, ಇವರಲ್ಲಿ 88158 ಮಂದಿ ಗಂಡಸರು, 96625 ಮಂದಿ ಹೆಂಗಸರು ಹಾಗೂ 7 ತೃತೀಯ ಲಿಂಗಿ ಮತದಾರರಿದ್ದಾರೆ.

ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 87926 ಮಂದಿ ಗಂಡಸರು ಹಾಗೂ 95569 ಮಂದಿ ಹೆಂಗಸರು ಸೇರಿದಂತೆ ಒಟ್ಟು 183495 ಮಂದಿ ಮತದಾರರಿದ್ದಾರೆ.

ಜಿಲ್ಲೆಯ 5 ವಿಧಾನ ಸಭಾ ಕ್ಷೇತ್ರಗಳಲ್ಲಿ ಒಟ್ಟು 1008220 ಮಂದಿ ಮತದಾರರಿದ್ದು, ಇದರಲ್ಲಿ 485747 ಮಂದಿ ಗಂಡಸರು, 522464 ಮಂದಿ ಹೆಂಗಸರು ಹಾಗೂ 9 ಮಂದಿ ತೃತೀಯ ಲಿಂಗಿ ಮತದಾರರಿದ್ದಾರೆ.

ಯಾವುದೇ ಅರ್ಹ ಭಾರತೀಯ ಪ್ರಜೆಯು ಎರಡು ಕಡೆ ನೊಂದಣಿ ಮಾಡಿಸಿಕೊಳ್ಳುವುದು ಪ್ರಜಾಪ್ರತಿನಿಧಿ ಕಾಯ್ದೆಯ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿರುತ್ತದೆ.

ನಿಗದಿತ ನಮೂನೆಯ ಅರ್ಜಿ ಹಾಗೂ ಹೆಚ್ಚಿನ ವಿವರಗಳಿಗೆ ಮತಗಟ್ಟೆ ಹಂತದ ಅಧಿಕಾರಿ(ಬಿ.ಎಲ್.ಓ) ಹಾಗೂ ಜಿಲ್ಲಾಧಿಕಾರಿಯವರ ಕಚೇರಿ ದೂ.ಸಂಖ್ಯೆ: 0820-2574926, ತಾಲೂಕು ಕಚೇರಿ ಉಡುಪಿ ದೂ.ಸಂಖ್ಯೆ: 0820-2521198, ತಾಲೂಕು ಕಚೇರಿ ಕುಂದಾಪುರ ದೂ.ಸಂಖ್ಯೆ: 08254-235567, ತಾಲೂಕು ಕಚೇರಿ ಕಾರ್ಕಳ ದೂರವಾಣಿ ಸಂಖ್ಯೆ: 08258-230057, ತಾಲೂಕು ಕಚೇರಿ ಕಾಪು ದೂ. ಸಂಖ್ಯೆ: 0820-2591444, ತಾಲೂಕು ಕಚೇರಿ ಬ್ರಹ್ಮಾವರ ದೂ.ಸಂಖ್ಯೆ; 0820-2560494, ತಾಲೂಕು ಕಚೇರಿ ಬೈಂದೂರು ದೂರವಾಣಿ ಸಂಖ್ಯೆ: 08254-251657, ಸಹಾಯಕ ಕಮೀಷನರ್ ಕುಂದಾಪುರ ದೂ.ಸಂಖ್ಯೆ: 08254-231984 ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮತದಾರರ ನೋಂದಣಿ ಅಭಿಯಾನ:
ಜಿಲ್ಲೆಯಾದ್ಯಂತ ಮತದಾರರ ಮಿಂಚಿನ ನೋಂದಣಿ ಅಭಿಯಾನವನ್ನು ನವೆಂಬರ್ 22, 29 ಹಾಗೂ ಡಿಸೆಂಬರ್ 6 ಮತ್ತು 13 ರಂದು ಹಮ್ಮಿಕೊಳ್ಳಲಾಗಿದೆ.

ವಿಕಲಚೇತನರು, ಮಹಿಳೆಯರು, ದುರ್ಬಲರು ಮತ್ತು ಯುವ ಮತದಾರರ ಅನುಕೂಲಕ್ಕಾಗಿ ಮತದಾರರ ಮಿಂಚಿನ ನೋಂದಣಿ ಅಭಿಯಾನವು ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ರ ವರೆಗೆ ನಡೆಯಲಿದೆ. ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಆಗದೇ ಇರುವವರು ಈ ಪ್ರಕ್ರಿಯೆಯ ಸದುಪಯೋಗ ಪಡೆದುಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply