ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪ್ರತಿಷ್ಠಿತ ಬಸ್ರೂರು ಆಚಾರ್ಯ ಮನೆತನದ ವೈದಿಕ ಪರಂಪರೆ ಸಾಧಕ ನಮ್ಮ ಭೂಮಿ ಸಂಸ್ಥಾಪಕ ಸದಸ್ಯ ವೇ.ಮೂ.ದಾಮೋದರ ಆಚಾರ್ಯ (64) ಬುಧವಾರ ಸ್ವಲ್ಪಕಾಲದ ಅನಾರೋಗ್ಯದಿಂದ ಬೆಂಗಳೂರು ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ ಮತ್ತು ಇಬ್ಬರು ಪುತ್ರರ ಅಗಲಿದ್ದಾರೆ.
ದಾಮೋದರ ಆಚಾರ್ಯ ತಂದೆ ಸ್ಥಾಪಿಸಿದ ಶ್ರೀ ರಾಮಚಂದ್ರ ಪುಸ್ತಕ ಭಂಡಾರ ಕಳೆದ 35ವರ್ಷದಿಂದ ನಡೆಸಿಕೊಂಡು ಬಂದಿದ್ದು, ಆಚಾರ್ಯ ಪಬ್ಲಿಕೇಶನ್ ಮೂಲಕ ವೈದಿಕ ಕರ್ಮಾಂಗ ಮತ್ತು ಅಷ್ಟಾವಧಾನ ಮಂಜರಿ, ಸಮಂತ್ರಕ ಅನ್ವದಾನ, ವಿಷ್ಣುಯಾಗ ಪ್ರದೀಪಿಕಾ ಮೂರು ಪುಸ್ತಕ ಪ್ರಕಾಶಿಸಿದ್ದರು.
ಆಚಾರ್ಯ ಕುಟುಂಬದವರು 60 ವರ್ಷದಿಂದ ಬಸ್ರೂರು ಮೂರುಕೇರಿಯ ಶ್ರೀ ರಾಮಚಂದ್ರ ದೇವಸ್ಥಾನ ಅರ್ಚಕರಾಗಿ ನಡೆಸಿಕೊಂಡು ಬಂದಿದ್ದರು. ದಾಮೋದರ ಆಚಾರ್ಯ ಬಸ್ರೂರು ಶ್ರೀ ನಾರಾಯಣ ದೇವಸ್ಥಾನ ತಾಂತ್ರಿಕರಾಗಿ ಕಾರ‍್ಯನಿರ್ವಹಿಸಿದ್ದರು. ಬಸ್ರೂರು, ಕಂಡ್ಲೂರು, ಅಂಪಾರು, ಬೈಲೂರು, ಸಿದ್ದಾಪುರ, ಹೊಸಂಗಡಿ, ಗಂಗೊಳ್ಳಿ, ಮಲೆನಾಡು ಪ್ರಾಂತ್ಯದಲ್ಲಿ ಅಪಾರ ಶಿಷ್ಯ ವೃಂದದವರ ಹೊಂದಿದ್ದರು. ದಿ.ಕನ್ಸಲ್ಸ್ಡ್ ಫಾರ್ ವರ್ಕಿಂಗ್ ಚಿಲ್ಟ್ರನ್ ನಮ್ಮ ಭೂಮಿ ಕಾರ್ಯಕಾರಿ ನಿದೇಶಕರಾಗಿ ಬಾಲ್ಯ ವಿವಾಹ ತಡೆಯುವ ಮೂಲಕ ದೇಶಾದ್ಯಂತ ಹೆಸರು ಮಾಡಿದ್ದು, ನಮ್ಮಭೂಮಿಯಲ್ಲಿ ಸಾಕ್ಷಷ್ಟು ಮಕ್ಕಳ ಬಗ್ಗೆ ಕೆಲಸ ಮಾಡಿದ್ದು, ದೇಶ ವಿದೇಶದಲ್ಲಿ ಮಕ್ಕಳು ಹಕ್ಕು ಇನ್ನಿತರ ವಿಷಯಗಳ ಬಗ್ಗೆ ಸಮ್ಮೇಳನ, ವರ್ಕ್‌ಶಾಪ್ ಆಯೋಜಿಸಿದ್ದರು.