ತಲ್ಲೂರು ನಾರಾಯಣ ವಿಶೇಷ ಮಕ್ಕಳ ಶಾಲೆಗೆ ಉಚಿತ ಮಣಿಪಾಲ ಆರೋಗ್ಯ ಕಾರ್ಡ ವಿತರಣೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉಡುಪಿ ಸ್ವಚ್ಚ ಭಾರತ ಫ್ರೆಂಡ್ಸ್ ಸದಸ್ಯ ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಹಳೆ ವಿದ್ಯಾರ್ಥಿ ಮಣಿಪಾಲ ಆರೋಗ್ಯ ಕಾರ್ಡ ಅಧಿಕೃತ ಪ್ರತಿನಿಧಿ ರಕ್ಷಿತ ಕುಮಾರ ವಂಡ್ಸೆಯವರು ತಲ್ಲೂರು ಫ್ಯಾಮಿಲಿ ಟ್ರಸ್ಟ್ ಪ್ರವರ್ತಿತ ನಾರಾಯಣ ವಿಶೇಷ ಮಕ್ಕಳ ಶಾಲೆಯ ಸುಮಾರು 37 ಮಕ್ಕಳಿಗೆ ಮಣಿಪಾಲ ಆರೋಗ್ಯ ಕಾರ್ಡುಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು.

Call us

Click Here

ರಕ್ಷಿತ ಕುಮಾರ ಮಾತನಾಡಿ, ಮಣಿಪಾಲ ಆರೋಗ್ಯ ಕಾರ್ಡುಗಳನ್ನು ಈ ಹಿಂದೆ ಉಡುಪಿ ಸಂತೆಕಟ್ಟೆಯಲ್ಲಿರುವ ಕೃಷ್ಣಾನುಗ್ರಹ ಅರ್ಹಸಂಸ್ಥೆ ಮತ್ತು ದತ್ತು ಸ್ವೀಕಾರ ಕೇಂದ್ರದ ಮಕ್ಕಳಿಗೆ ಉಚಿತವಾಗಿ ನೀಡಲಾಗಿದೆ. ತಮ್ಮ ದುಡಿಮೆಯ ಸ್ವಲ್ಪ ಹಣವನ್ನು ಪ್ರತಿ ವರ್ಷ ಇಂತಹ ವಿಶೇಷ ಮಕ್ಕಳ ಶಾಲೆ ಸಂಸ್ಥೆಗೆ ಕೊಡುವ ಉದ್ದೇಶವಾಗಿರುತ್ತದೆ. ಎಂದು ಹೇಳಿದರು.

ಈ ಸಂದರ್ಭದಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಸುರೇಶ ತಲ್ಲೂರು ,ಟ್ರಸ್ಟಿ ಮನೋರಮ ತಲ್ಲೂರು, ಶಿಕ್ಷಕರು, ಪ್ರಾಂಶುಪಾಲರು,  ಶಿಕ್ಷಕೇತರ ಸಿಬ್ಬಂದಿಗಳು, ಮತ್ತು ಪೋಷಕರು ಉಪಸ್ಥಿತರಿದ್ದರು.

Leave a Reply