ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಿಂದ ಅಟೆಂಡರ್ ಸೇವೆಯಿಂದ ನಿವೃತ್ತಿ ಪಡೆದ ದಿನಕರ ಶೆಟ್ಟೆಗಾರ್. ಯು ಮತ್ತು ಸುಬ್ಬಣ್ಣ ಎಸ್. ಇವರಿಗೆ ಶಿಕ್ಷಕೇತರರ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.
ಸನ್ಮಾನ ಸ್ವೀಕರಿಸಿದ ದಿನಕರ ಶೆಟ್ಟೆಗಾರ್.ಯು ಮಾತನಾಡಿ ಭಂಡಾರ್ಕಾರ್ಸ್ ಕಾಲೇಜು ಕಛೇರಿಯ ಕಾರ್ಯವೈಖರಿ ಬಹಳ ಅನುಭವವನ್ನು ಕಟ್ಟಿಕೊಟ್ಟಿದೆ ಎಂದು ಹೇಳಿದರು.
ಸುಬ್ಬಣ್ಣ ಎಸ್ ಮಾತನಾಡಿ ಕಾಲೇಜು ನನ್ನ ಮನೆ ಇದ್ದಂತೆ. ನನಗೆ ನನ್ನ ಮನೆಗೆ ಅನ್ನ ನೀಡಿದ ಸಂಸ್ಥೆಗೆ ಸದಾ ಋಣಿಯಾಗಿದ್ದೇನೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ಎನ್ ಪಿ. ನಾರಾಯಣ ಶೆಟ್ಟಿ ಮಾತನಾಡಿ ಸಂಸ್ಥೆಯ ಬೆಳವಣಿಗೆಯಲ್ಲಿ ಹತ್ತು ಹಲವು ಕೊಡುಗೆ ಇರುತ್ತದೆ. ಅಲ್ಲದೆ ಸರಕಾರಿ ನಿಯಮದಂತೆ ಸೇವೆಯಿಂದ ನಿವೃತ್ತಿ ಪಡೆದರು ನಮ್ಮ ಮನಸಿನಾಳದಲಿ ಸದಾ ಇರುತ್ತಾರೆ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಕಾಲೇಜಿನ ಉಪ ಪ್ರಾಂಶುಪಾಲೆ ಡಾ. ರೇಖಾ ಬನ್ನಾಡಿ ಮಾತನಾಡಿ ಸಂಸ್ಥೆಯ ಬೆಳವಣಿಗೆಗೆ ಶಿಕ್ಷಕೇತರರು ತುಂಬಾ ಮುಖ್ಯ ಎಂದು ಹೇಳಿದರು. ಕಾಲೇಜಿನ ಕಛೇರಿ ಮುಖ್ಯಸ್ಥರಾದ ಗೋಪಾಲ್ ನಾಯ್ಕ್ ಮಾತನಾಡಿ ಸುಬ್ಬಣ್ಣ ಕಾಲೇಜಿನ ಯಾವುದೇ ಕೆಲಸವನ್ನು ತುಂಬಾ ಚೆನ್ನಾಗಿ ನಿರ್ವಹಿಸುತ್ತಿದ್ದರು. ಹಾಗೆ ದಿನಕರ ಅವರು ಕಛೇರಿ ಕಾರ್ಯದಲ್ಲಿ ಬಹಳ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು ಎಂದು ಹೇಳಿದರು.
ಕಾಲೇಜಿನ ಶಿಕ್ಷಕೇತರ ಸಿಬ್ಬಂದಿ ಹರಿಶ್ಚಂದ್ರ ಪ್ರಾರ್ಥಿಸಿದರು. ಶಾಂತಿ ಸ್ವಾಗತಿಸಿದರು. ಸತೀಶ್ ಎಂ. ಮತ್ತು ರಾಘವೇಂದ್ರ ಸನ್ಮಾನಿತರ ಪರಿಚಯಿಸಿದರು. ವಿದ್ಯಾ ವಂದಿಸಿದರು. ಸುರೇಶ್ ಕೆ. ಕಾರ್ಯಕ್ರಮ ನಿರ್ವಹಿಸಿದರು.