ಸರಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಗಣನೀಯ ಹೆಚ್ಚಳ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕರ್ನಾಟಕ ರಾಜ್ಯ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಉಡುಪಿ ಜಿಲ್ಲೆ ಕುಂದಾಪುರ ಹಾಗೂ ಬೈಂದೂರು ತಾಲೂಕು ಘಟಕದ ವತಿಯಿಂದ ಬೈಂದೂರು ಶೈಕ್ಷಣಿಕ ವಲಯದ ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಮುಂದಿನಮನಿ ಅವರಿಗೆ ಗೌರವಾರ್ಪಣೆ ನಡೆಯಿತು.

Call us

Click Here

ಸ್ವೀಕರಿಸಿ ಮಾತನಾಡಿದ ಮುಂದಿನಮನಿ, ಎಸ್‌ಡಿಎಂಸಿ ಸಮನ್ವಯ ವೇದಿಕೆಯ ಉತ್ತಮ ಪ್ರಯತ್ನದಿಂದಾಗಿ ಸರಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ ಎಂದು ಹೇಳಿದರು. ಉಡುಪಿ ಜಿಲ್ಲಾ ಘಟಕದ ಎಸ್‌ಡಿಎಂಸಿ ಸಮನ್ವಯ ವೇದಿಕೆಯ ಅಧ್ಯಕ್ಷ ಅಬ್ದುಲ್ ಸಲಾಂ ಚಿತ್ತೂರು ಮಾತನಾಡಿದರು

ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಸಮನ್ವಯ ವೇದಿಕೆಯ ಪರವಾಗಿ ಸರಕಾರ ತತ್‌ಕ್ಷಣವೇ ಸುರಕ್ಷಾ ಕ್ರಮಗಳೊಂದಿಗೆ ಶಾಲೆಗಳನ್ನು ಪುನಾರಂಭಿಸುವಂತೆ ಅಥವಾ ವಿದ್ಯಾಗಮ ಶೈಕ್ಷಣಿಕ ಚಟುವಟಿಕೆಯನ್ನು ಮುಂದುವರಿಸುವಂತೆ ಕ್ಷೇತ್ರ ಶಿಕ್ಷಣಧಿಕಾರಿ ಮೂಲಕ ಸರಕಾರಕ್ಕೆ ಹಾಗೂ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು ಬೈಂದೂರು ತಾಲೂಕು ಘಟಕದ ಅಧ್ಯಕ್ಷ ಅವನೀಶ ಹೊಳ್ಳ ಶಿಕ್ಷಣಧಿಕಾರಿಯವರನ್ನು ಗೌರವಿಸಿದರು. ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಲಯದ ಶಾಲೆಗಳ ಎಸ್‌ಡಿಎಂಸಿ ಅಧ್ಯಕ್ಷರು ತಮ್ಮ ಶಾಲೆಗಳ ಅಭಿವೃದ್ಧಿ ಕಾರ್ಯಗಳ ಕುರಿತು ವಿವರಿಸಿದರು.

ಶಿಕ್ಷಣ ಸಂಯೋಜಕ ನಿತ್ಯಾನಂದ ಶೆಟ್ಟಿ ಸಲಹೆ ಸೂಚನೆ ನೀಡಿದರು ತಾ. ಕೋಶಾಧಿಕಾರಿ ರಾಘವೇಂದ್ರ ಗಾಣಿಗ, ಶಿರೂರು ಪಂಚಾಯತ್ ಘಟಕದ ಅಧ್ಯಕ್ಷ ಹರೀಶ್ ಕೆ. ಉಪಾಧ್ಯಕ್ಷೆ ಸವಿತಾ ಮನೋಜ್, ಪ್ರತಿನಿಧಿಗಳಾದ ಮುಸ್ತಾಕ್, ಮಲ್ಲಾ ಫಾರೂಕ್, ಮನೋಜ್ ಕುಮಾರ್, ನಾಗರತ್ನ ಗುಲ್ವಾಡಿ, ಪಂಚಾಯತ್ ಘಟಕದ ಅಧ್ಯಕ್ಷ ಸಾದಿಕ್ ಮಾವಿನಕಟ್ಟೆ, ಕೋಣಿ ಪಂಚಾಯತ್ ಘಟಕದ ಅಧ್ಯಕ್ಷೆ ರೇಖಾ ಗಣೇಶ್, ಸಂಪನ್ಮೂಲ ವ್ಯಕ್ತಿಗಳಾದ ಹರೀಶ್ಚಂದ್ರ ಆಚಾರ್, ರವಿಕುಮಾರ್ ಮರವಂತೆ, ಪ್ರಮೋದ ಕೆ ಶೆಟ್ಟಿ, ಕರುಣಾಕರ ಆಚಾರ್ ಮರವಂತೆ ವಿದ್ಯಾರ್ಥಿನಿ ಸ್ಪಂದನಾ ಉಪಸ್ಥಿತರಿದ್ದರು. ತಾಲೂಕು ಕಾರ್ಯದರ್ಶಿ ಜ್ಯೋತಿ ಶೆಟ್ಟಿ ಸ್ವಾಗತಿಸಿದರು.

Leave a Reply