ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮರವಂತೆ ಮೀನುಗಾರರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸಾಧನಾ ಸಮುದಾಯ ಭವನದಲ್ಲಿ ಜರುಗಿತು.
ಮರವಂತೆ ಮೀನುಗಾರರ ಸಹಕಾರಿ ಸಂಘವು ಕಳೆದ ವರ್ಷ ರೂ4.23 ಕೋಟಿ ವ್ಯವಹಾರ ನಡೆಸಿ, ರೂ 3.3 ಲಕ್ಷ ನಿವ್ವಳ ಲಾಭ ಗಳಿಸಿದೆ. ಸಂಘದ ಕಟ್ಟಡ ನವೀಕರಣಗೊಳ್ಳಬೇಕಾದ ಕಾರಣ ಸದಸ್ಯರಿಗೆ ಡಿವಿಡೆಂಡ್ ನೀಡದಿರಲು ನಿರ್ಧರಿಸಲಾಯಿತು.
ಸಂಘದ ಅಧ್ಯಕ್ಷ ಪ್ರವೀಣ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರತ್ನಾಕರ ಖಾರ್ವಿ, ನಿರ್ದೇಶಕರಾದ ನಾಗರಾಜ್ ಪಟ್ಗಾರ್, ಸುರೇಶ್ ಖಾರ್ವಿ, ಲೋಕೇಶ್ ಖಾರ್ವಿ, ಜನಾರ್ದನ ಕೆ ಎಂ, ಮಹಾದೇವ ಖಾರ್ವಿ, ನಾಗರಾಜ ಖಾರ್ವಿ, ಲೀಲಾವತಿ, ರಾಜೇಶ್ವರಿ, ಸಿಬ್ಬಂದಿ ಹಾಗೂ ಶ್ರೀರಾಮ ಸೇವಾ ಸಮಿತಿ ಅಧ್ಯಕ್ಷ ಮೋಹನ್ ಖಾರ್ವಿ ಇದ್ದರು.
ಗಂಗಾಧರ ಖಾರ್ವಿ ಸ್ವಾಗತಿಸಿದರು. ಕಾರ್ಯದರ್ಶಿ ಚೈತ್ರಾ ವರದಿ, ಆಯವ್ಯಯ ಮಂಡಿಸಿದರು.
ಅದೃಷ್ಟಶಾಲಿ ಸದಸ್ಯರಾಗಿ ಆಯ್ಕೆಯಾದ ನಾಗರತ್ನಾ, ಚಂದ್ರ ಖಾರ್ವಿ ಮತ್ತು ಪ್ರಮೋದ್ ಖಾರ್ವಿ ಅವರಿಗೆ ಬಹುಮಾನ ವಿತರಿಸಲಾಯಿತು.
















