ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹಾಲಾಡಿ ಲಕ್ಷ್ಮಿದೇವಿ ವಾಸುದೇವ ಕಾಮತ್ ಅವರ ಮನೆಯಲ್ಲಿ ಮನೆ ಭಜನಾ ಮಂಡಳಿಯವರ 184ನೇ ಮನೆ ಮನೆ ಭಜನಾ ಸಂಗಮ ಕಾರ್ಯಕ್ರಮವು ಅಧ್ಯಕ್ಷ ಹರೀಶ್ ಭಂಡಾರಿಯವರ ನೇತೃತ್ವದಲ್ಲಿ ನೆರವೇರಿತು.
ಭಜನಾ ಸಂಗಮದ ಪರವಾಗಿ ಅಧ್ಯಕ್ಷೆ ಲಕ್ಷ್ಮಿದೇವಿ ಹಿತನುಡಿಗಳನ್ನಾಡಿ ಹರೀಶ್ ಭಂಡಾರಿಯವರಿಗೆ ಶಾಲು ಹೊದಿಸಿ ಗೌರವಿಸಿದರು. ಇತರ ಸದಸ್ಯರಿಗೆ ಪ್ರೀತಿಯ ಸ್ಮರಣಿಕೆಗಳನ್ನು ನೀಡಿದರು.










