ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕೈಗಾರಿಕೋದ್ಯಮಿ ಶಿಕ್ಷಣ ಶಿಲ್ಪಿ, ಪದ್ಮಭೂಷಣ ಡಾ ಆರ್. ಎನ್. ಶೆಟ್ಟಿ ಅವರ ನಿಧನಕ್ಕೆ ಸಂತಾಪ ಸಭೆ, ನುಡಿನಮನ ಕಾರ್ಯಕ್ರಮ ಬೈಂದೂರು ಬಂಟರ ಭವನದಲ್ಲಿ ಜರುಗಿತು.
ಮಾಜಿ ಶಾಸಕ ಅಪ್ಪಣ್ಣ ಹೆಗ್ಡೆ, ಸಂಘದ ಗೌರವ ಅಧ್ಯಕ್ಷ ಡಾ. ಸುಧಾಕರ ಹೆಗ್ಡೆ , ಬೈಂದೂರು ಬಂಟರ ಸಂಘದ ಅಧ್ಯಕ್ಷ ಕೆ. ವಿಠಲ ಶೆಟ್ಟಿ, ಹುಬ್ಬಳ್ಳಿ, ಧಾರವಾಡ ಬಂಟರ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಸಾಲ್ಗದ್ದೆ, ಬೈಂದೂರು ಸುರಭಿ ಕಲಾ ಸಂಸ್ಥೆಯ ನಿರ್ದೇಶಕ ಸುಧಾಕರ ಪಿ ಬೈಂದೂರು, ಉದ್ಯಮಿ ಬಾಡ ಪ್ರವೀಣ್ ಚಂದ್ರ ಶೆಟ್ಟಿ, ಶಿರೂರು ಬಂಟರ ಸಂಘದ ಅಧ್ಯಕ್ಷ ಸತೀಶ್ ಶೆಟ್ಟಿ ನುಡಿನಮನ ಸಲ್ಲಿಸಿದರು.
ವಸಂತ ಹೆಗ್ಡೆ ಕಳವಾಡಿ ಪ್ರಸ್ತಾವನೆಗೈದರು. ಸಾಲ್ಗದ್ದೆ ಶಶಿಧರ ಶೆಟ್ಟಿ ಸ್ವಾಗತಿಸಿ, ಸಂಘದ ಕಾರ್ಯದರ್ಶಿ ಎನ್. ಕರುಣಾಕರ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಪ್ರದೀಪ ಕುಮಾರ್ ಶೆಟ್ಟಿ ಕಾರಿಕಟ್ಟೆ ಧನ್ಯವಾದಗೈದರು.