ಮಹಾಸತಿ ಪ್ರಾಥಮಿಕ ಮೀನುಗಾರರ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ಮಹಾಸಭೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಮಹಾಸತಿ ಪ್ರಾಥಮಿಕ ಮೀನುಗಾರರ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ 2019-20ನೇ ಸಾಲಿನ ಮಹಾಸಭೆಯು ಇಲ್ಲಿನ ಎಸ್.ವಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆಯಿತು.

Call us

Click Here

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಶಾರದಾ ಎಸ್.ಖಾರ್ವಿ ಮಾತನಾಡಿ, ಸಂಘವು 18.07 ಲಕ್ಷ ರೂ. ಪಾಲು ಬಂಡವಾಳ ಮತ್ತು 9.44 ಕೋಟಿಗೂ ಮಿಕ್ಕಿ ಠೇವಣಿಯನ್ನು ಹೊಂದಿದೆ. 2.28 ಕೋಟಿ ರೂ.ಗಳನ್ನು ವಿವಿಧ ಇತರ ಸಂಘ ಹಾಗೂ ಬ್ಯಾಂಕುಗಳಲ್ಲಿ ಹೂಡಿಕೆ ಮಾಡಲಾಗಿದೆ. ವರ್ಷಾಂತ್ಯಕ್ಕೆ ಸಂಘವು 10.53 ಲಕ್ಷ ರೂ. ನಿವ್ವಳ ಲಾಭ ಗಳಿಸಿದ್ದು ಸದಸ್ಯರಿಗೆ ಶೇ.10% ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಸಂಘದ ಉಪಾಧ್ಯಕ್ಷೆ ಮಾಲತಿ ಜಿ. ಖಾರ್ವಿ, ನಿರ್ದೇಶಕಿಯರಾದ ನೀಲಾವತಿ ಎಸ್. ಖಾರ್ವಿ, ಸುಶೀಲಾ ಎ. ಖಾರ್ವಿ, ಶಾರದಾ ಆರ್. ಹೆಗ್ಡೆ, ಶೈಲಾ ಎಂ. ಖಾರ್ವಿ, ಜಯಂತಿ ಆರ್. ಪಠೇಲ್, ದೀಪಾ ಎನ್. ಖಾರ್ವಿ, ರೇಖಾ ಜಿ. ಖಾರ್ವಿ ಉಪಸ್ಥಿತರಿದ್ದರು.

ನಿರ್ದೇಶಕಿ ಪಾರ್ವತಿ ಬಿ. ಖಾರ್ವಿ ಸ್ವಾಗತಿಸಿದರು. ಸಂಘದ ಮುಖ್ಯಕಾರ್ಯನಿರ್ವಣಾಧಿಕಾರಿ ಗಣಪತಿ ಖಾರ್ವಿ 2020-2021ನೇ ಸಾಲಿನ ಆಯ-ವ್ಯಯ ಅಂದಾಜು ಬಜೆಟ್ ಹಾಗೂ 2019-20ನೇ ಸಾಲಿನ ಲಾಭಾಂಶ ವಿಂಗಡನೆಯನ್ನು ಮಂಡಿಸಿ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಲೆಕ್ಕಿಗ ರವಿಚಂದ್ರ ಖಾರ್ವಿ ವಂದಿಸಿದರು.

Leave a Reply