ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬೀಚ್ ಸ್ವಚ್ಛತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಕುಂದಾಪುರ ಕೋಸ್ಟಲ್ ಲಯನ್ಸ್ ಕ್ಲಬ್ ಅಧ್ಯಕ್ಷ ರತ್ನಾಕರ ಶೆಟ್ಟಿ ಕಂದಾವರ ಹೇಳಿದರು.
ಕುಂದಾಪುರ ಕೋಡಿ ಕಡಲತೀರದಲ್ಲಿ ಹಮ್ಮಿಕೊಂಡ ಸ್ವಚ್ಛತಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮುದ್ರ ತೀರಗಳು ಸ್ವಚ್ಛವಾಗಿದ್ದರೆ ಪರಿಸರದಲ್ಲಿ ವಾಸಿಸುವವರ ಆರೋಗ್ಯ ಚೆನ್ನಾಗಿರುತ್ತದೆ. ಅಂತಹ ಸ್ಥಳಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಪ್ರವಾಸೋದ್ಯಮ ಅಭಿವೃದ್ಧಿ ಗೊಳ್ಳುವುದರ ಜತೆಗೆ ಸ್ಥಳೀಯರಿಗೆ ಆದಾಯ ಬರುತ್ತದೆ ಎಂದು ತಿಳಿಸಿದರು.
ಕ್ಲಬ್ ಪ್ರಧಾನ ಕಾರ್ಯದರ್ಶಿ ವಸಂತರಾಜ್ ಶೆಟ್ಟಿ, ಕೋಶಾಧಿಕಾರಿ ರಾಜೇಶ್ ಶೆಟ್ಟಿ, ಸ್ಥಾಪಕಾಧ್ಯಕ್ಷ ಅಶೋಕ್ ಶೆಟ್ಟಿ ಸಂಸಾಡಿ, ಪ್ರಥಮ ಉಪಾಧ್ಯಕ್ಷ ಜಯಶೀಲ ಶೆಟ್ಟಿ ಕಂದಾವರ, ನಿಕಟ ಪೂರ್ವ ಖಜಾಂಚಿ ಸುಕುಮಾರ ಶೆಟ್ಟಿ, ನಿರ್ದೇಶಕರಾದ ಅಂಪಾರು ನಿತ್ಯಾನಂದ ಶೆಟ್ಟಿ, ಗಿರೀಶ್ ಮೇಸ್ತ, ಉದಯ ಶೆಟ್ಟಿ ಮಚ್ಚಟ್ಟು, ಮಹಮದ್ ಅಶ್ರಫ್, ಅಣ್ಣಪ್ಪ ಶೆಟ್ಟಿ, ವೆಂಕಟರಮಣ ನಾಯಕ್, ಪ್ರಭಾಕರ ಶೆಟ್ಟಿ ಇದ್ದರು.