ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕು ಹಿರಿಯ ನಾಗರಿಕರ ವೇದಿಕೆಯ ಆಶ್ರಯದಲ್ಲಿ ಮಹಾಂಕಾಳಿ ದೇವಸ್ಥಾನದ ಸಭಾಂಗಣದಲ್ಲಿ ಮಾಸಿಕ ಸವ೯ ಸದಸ್ಯರ ಸಭೆ ನಡೆಯಿತು.
ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷ ಗೋವಿಂದ. ಎಂ ಮಾತನಾಡಿ, ತಾಲೂಕು ಹಿರಿಯ ನಾಗರಿಕರ ವೇದಿಕೆಯ ಕಚೇರಿ ನಿವ೯ಹಣೆ ಹಾಗೂ ಹಿರಿಯ ನಾಗರಿಕರ ಪರ ಚಟುವಟಿಕೆ ವಿಸ್ತರಣೆ ಮಾಡುವುದಕ್ಕೆ ಸೂಕ್ತ ಸರಕಾರಿ ನಿವೇಶನ ಸ್ಥಳ ಮಂಜೂರು ಮಾಡಬೇಕು ಎಂದು ಜಿಲ್ಲಾಡಳಿತವನ್ನು ಆಗ್ರಹಿಸಿದರು.
ನಿವೃತ್ತ ಅದ್ಯಾಪಕ ಹಿರಿಯ ನಾಗರಿಕ ಜಿ. ತಿಮ್ಮಪ್ಪಯ್ಯ ಬೈಂದೂರು ಮನೋರಂಜನಾ ಕಾಯ೯ಕ್ರಮ ನೀಡಿದರು.ನೂತನ ಸದಸ್ಯ ರಿಸವ್೯ ಬ್ಯಾಂಕ್ ನಿವೃತ್ತ ಎಜಿಎಂ ಪ್ರೆಮಾನಂದ ತಗ್ಗಸೆ೯ ಇವರನ್ನುಗೌರವಿಸಲಾಯಿತು. ವೇದಿಕೆ ಕಾಯ೯ದಶಿ೯ ಸಂಜೀವ ಆಚಾಯ೯ ಕಳವಾಡಿ ಚಟುವಟಿಕೆ ವರದಿಯನ್ನು ಮಂಡಿಸಿದರು.ಇತ್ತೀಚೆಗೆ ನಿಧನರಾದ ಸದಸ್ಯ ಹಿರಿಯ ನಾಗರಿಕ ಚಾಂಡಿ ಕಲ್ಮಕ್ಕಿಯವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ವೇದಿಕೆ ಉಪಾಧ್ಯಕ್ಷ ಶ್ರೀನಿವಾಸ ಪಡುವರಿ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.










