ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ವ್ಯವಸಾಯ ಸೇವಾ ಸಹಕಾರಿ ಸಂಘವು ಯಡ್ತರೆ ಪ್ರಧಾನ ಕಚೇರಿ ಮತ್ತು 8 ಶಾಖೆಗಳ ಮೂಲಕ 7 ಗ್ರಾಮಗಳ ಜನರಿಗೆ ಸೇವೆ ಸಲ್ಲಿಸುತ್ತಿದೆ. ಹಿಂದಿನ ವರ್ಷ ₹ 427 ಕೋಟಿ ವ್ಯವಹಾರ ಮಾಡಿ, ₹34.06 ಲಕ್ಷ ನಿವ್ವಳ ಲಾಭಗಳಿಸಿದ್ದು, ಸದಸ್ಯರಿಗೆ ಶೇ 9 ಲಾಭಾಂಶ ನೀಡಲಾಗುತ್ತದೆ ಎಂದು ಸಂಘದ ಅಧ್ಯಕ್ಷ ಟಿ. ನಾರಾಯಣ ಹೆಗ್ಡೆ ಹೇಳಿದರು.
ಸಂಘದ ಪ್ರಧಾನ ಕಚೇರಿಯಲ್ಲಿ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಹಕಾರಿಯು ₹1.69 ಕೋಟಿ ಪಾಲು ಬಂಡವಾಳ ಹೊಂದಿದೆ. 2019-20ನೇ ಸಾಲಿನಲ್ಲಿ ₹48.95 ಕೋಟಿ ಠೇವಣಿ ಸಂಗ್ರಹಿಸಿ, ಸದಸ್ಯರಿಗೆ ₹33.49 ಕೋಟಿ ಸಾಲ ನೀಡಿದೆ. ಮುಂದಿನ ವರ್ಷ ₹50ಕೋಟಿ ಠೇವಣಿ ಸಂಗ್ರಹಿಸುವ ಗುರಿ ಹೊಂದಲಾಗಿದೆ.ಸಂಘದ ಶಾಖೆಗಳಿಗೆ ಹಂತಹಂತವಾಗಿ ನಿವೇಶನ ಖರೀದಿಸಿ, ಸ್ವಂತ ಕಟ್ಟಡ ನಿರ್ಮಿಸುವ ಯೋಜನೆ ರೂಪಿಸಲಾಗುವುದು ಎಂದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರ ಮೊಗೇರ , ಸಿಬ್ಬಂದಿ ಚಂದ್ರಶೇಖರ ಮೇಸ್ತ ವಂದಿಸಿದರು ನಿರ್ದೇಶಕರಾದ ಸಸಿಹಿತ್ಲು ವೆಂಕಟ ಪೂಜಾರಿ, ಕೃಷ್ಣ ದೇವಾಡಿಗ, ಗಿರೀಶ್ ಮೇಸ್ತ, ಚಿಕ್ಕು ಪೂಜಾರಿ, ವಸಂತಕುಮಾರ್ ಶೆಟ್ಟಿ, ಎನ್. ನಾಗರಾಜ ಶೆಟ್ಟಿ, ಕೃಷ್ಣ ನಾಯ್ಕ, ಶಂಕರ ನಾಯ್ಕ, ಸದಾಶಿವ ಡಿ. ಪಡುವರಿ, ಕೆ. ಬಾಬು ಶೆಟ್ಟಿ, ಜ್ಯೋತಿ ಶೇರುಗಾರ್, ರಜನಿ ಶ್ಯಾನುಭಾಗ್, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಶಿವರಾಮ ಪೂಜಾರಿ ಇದ್ದರು.










