ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಅತ್ಯಂತ ದೊಡ್ಡ ಸರಕಾರಿ ಪ್ರೌಡಶಾಲೆಯಾದ ಸಿದ್ಡಾಪುರದ ಸರಕಾರಿ ಪ್ರೌಢಶಾಲೆಯಲ್ಲಿ ಹೊಸವರ್ಷದಂದು ಸಂಭ್ರಮ ಮನೆಮಾಡಿತ್ತು.
ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ (ಡಯಟ್) ಉಡುಪಿ ಇಲ್ಲಿನ ಪ್ರಾಂಶುಪಾಲರಾದ ವೇದಮೂರ್ತಿ, ಹಿರಿಯ ಉಪನ್ಯಾಸಕರಾದ ಅಶೋಕ ಕಾಮತ್, ಸಮಗ್ರ ಶಿಕ್ಷಣ ಕರ್ನಾಟಕದ ಉಪ ಯೋಜನಾ ಸಮನ್ವಯಾಧಿಕಾರಿಗಳಾದ ಪ್ರಭಾಕರ ಮಿತ್ಯಾಂತ, ಡಯಟ್ ಉಪನ್ಯಾಸಕರಾದ ವೆಂಕಟೇಶ ನಾಯಕ ಪಾಲ್ಗೊಂಡರು.
ಶಾಲೆಯ ಮುಖ್ಯಶಿಕ್ಷಕರಾದ ಉದಯ ಗಾಂವಕಾರ ಎಲ್ಲರನ್ನೂ ಸ್ವಾಗತಿಸಿದರು. ಶಿಕ್ಷಕ ಶಿಕ್ಷಕಿಯರು, ಸಿಬ್ಬಂದಿ ವರ್ಗ ಶಾಲೆಯನ್ನು ಮುಂಚಿತವಾಗಿ ಶುಚಿಗೊಳಿಸಿ, ಅಲಂಕರಿಸಿದ್ದರು. ತೋರಣ, ಬಲೂನುಗಳೊಡನೆ ಶಾಲೆಯನ್ನು ಅಲಂಕರಿಸಲಾಗಿತ್ತು.











