ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು : ಕೊಲ್ಲೂರು ಮೂಕಾಂಬಿಕಾ ವ್ಯವಸಾಯ ಸಹಕಾರಿ ಸಂಘ ವಾರ್ಷಿಕ ಮಹಾಸಭೆಯು ಸಂಘದ ಪ್ರಧಾನ ಕಚೇರಿಯಲ್ಲಿ ಜರುಗಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ರೋಹಿತ್ ಜೋಯ್ಸ್, ಕೊಲ್ಲೂರು ಮೂಕಾಂಬಿಕಾ ವ್ಯವಸಾಯ ಸೇವಾ ಸಹಕಾರಿ ಸಂಘವು 2019-20 ಸಾಲಿನಲ್ಲಿ ₹97 ಕೋಟಿ ವ್ಯವಹಾರ ನಡೆಸಿ ₹30.34 ಲಕ್ಷ ಲಾಭಗಳಿಸಿದೆ. ಸದಸ್ಯರಿಗೆ ಶೇ. 12 ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಗ್ರಾಹಕರ ಸಹಕಾರ,ನಿಧಿಗಳ ಸಮರ್ಪಕ ನಿರ್ವಹಣೆ, ಸಾಲ ವಿತರಣೆ ಹಾಗೂ ಸಮಯೋಚಿತ ಹೂಡಿಕೆಗಳಿಂದಾಗಿ ಸಂಘವು ಉತ್ತಮ ಪ್ರಗತಿ ಸಾಧಿಸಿದೆ ಎಂದು ಹೇಳಿದರು.
ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ. ಗಣೇಶ ಶ್ಯಾನುಭೋಗ್ ವಾರ್ಷಿಕ ವರದಿ ಮಂಡಿಸಿ, ಸಂಘವು ₹91.32 ಲಕ್ಷ ಪಾಲು ಬಂಡವಾಳ ಹೊಂದಿದ್ದು, ₹17.24 ಕೋಟಿ ಠೇವಣಿ ಹೊಂದಿದೆ. ಸದಸ್ಯರಿಗೆ ₹16.51 ಕೋಟಿ ಸಾಲ ನೀಡಿದೆ.ಇದರಲ್ಲಿ ಕೃಷಿ ಸಾಲದ ಮೊತ್ತ ₹4.41 ಕೋಟಿ ಹಾಗೂ ವಿವಿಧಹೂಡಿಕೆಗಳಲ್ಲಿ ₹7.58 ಕೋಟಿ ವಿನಿಯೋಗಿಸಿದ್ದು, ಇದರಿಂದ ಸಂಘಕ್ಕೆ ₹2.01 ಲಕ್ಷ ಲಾಭ ದೊರಕಿದೆ’ ಎಂದರು.
ಉಪಾಧ್ಯಕ್ಷ ಸಂದೀಪ್ ಆರ್. , ನಾಗೇಂದ್ರ ಬಳೆಗಾರ್ , ನಿರ್ದೇಶಕರಾದ ಚಂದ್ರಶೇಖರ ಅಡಿಗ ಕೆ. ಎನ್., ಅರುಣಕುಮಾರ್ ಶೆಟ್ಟಿ ಎಂ, ಅರುಣಕುಮಾರ್ ಶೆಟ್ಟಿ, ಕೆ. ಪ್ರಕಾಶ, ಸುಧೀರ್ ಹೆಬ್ಬಾರ್, ಉದಯ್ ಶೇರುಗಾರ್, ರಾಜೇಶ್, ನಾಗೇಶ್, ದುರ್ಗಿ, ಶ್ರೀದೇವಿ
ಭಟ್, ನೇತ್ರಾವತಿ, ಸಹಕಾರಿ ಸಂಘದ ಮೇಲ್ವಿಚಾರಕ ಉದಯ್ ಶೆಟ್ಟಿ ಎ. ಇದ್ದರು.