ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರೋಟರಿ ಕ್ಲಬ್ ಬೈಂದೂರು ಇಲ್ಲಿಗೆ ರೋಟರಿ ಜಿಲ್ಲೆ 3182ನ ಗವರ್ನರ್ ರೋ. ಪಿ.ಎಚ್.ಎಫ್. ರಾಜಾರಾಮ್ ಭಟ್.ಬಿ.ಭೇಟಿ ನೀಡಿದರು.
ಭೇಟಿಯ ಸಂದರ್ಭದಲ್ಲಿ ಕ್ಲಬ್ ಅಸೆಂಬ್ಲಿಯ ಮೂಲಕ ಇದುವರೆಗಿನ ಕಾರ್ಯಚಟುವಟಿಕೆಗಳ ಪರಾಮರ್ಶೆ ನಡೆಸಿ ಸೂಕ್ತ ಮಾರ್ಗದರ್ಶನ ನೀಡಿದರು..ಹಾಗೂ ರೋಟರಿ ಕ್ಲಬ್ ಬೈಂದೂರು ಇದರ ಸಾಮಾಜಿಕ ಕಳಕಳಿ ಸಮಾಜಮುಖಿ ಕಾರ್ಯಕ್ರಮಗಳು ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು..
ರೈತಬಂಧು ಕಾರ್ಯಕ್ರಮದಡಿಯಲ್ಲಿ ರೈತ ಮುಖಂಡರು, ಪ್ರಗತಿಪರ ರೈತರು ,ಸಹಕಾರಿ ಧುರೀಣರಾದ ಎಸ್ ಪ್ರಕಾಶ್ ಚಂದ್ರಶೆಟ್ಟಿ ಅವರನ್ನು ಕ್ಲಬ್ ನ ವತಿಯಿಂದ ಸನ್ಮಾನಿಸಲಾಯಿತು.. ರೋಟರಿ ಕ್ಲಬ್ ಬೈಂದೂರು ಇದರ ಅಧ್ಯಕ್ಷರಾದ ರೋ.ಯು. ಗೋಪಾಲಶೆಟ್ಟಿ ಸಭಾಧ್ಯಕ್ಷತೆ ವಹಿಸಿದ್ದರು. ಭೇಟಿಯ ಸಂದರ್ಭದಲ್ಲಿ ಝೋನ್ 1ರ ಸಹಾಯಕ ಗವರ್ನರ್ ರೋ. ಪಿ.ಎಚ್.ಎಫ್ ನಾಗಭೂಷಣ ಉಡುಪ ರೋಟರಿ ಜಿಲ್ಲೆ 3182ನ ಪಥಮ ಮಹಿಳೆ ರೋ.ವರದಾಂಬ, ವಲಯ ಸೇನಾನಿ ರೋ.ಐ ನಾರಾಯಣ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ 2021-22 ನೇ ಸಾಲಿನ ನಿಯೋಜಿತ ಅಧ್ಯಕ್ಷರಾಗಿ ರೋ.ಡಾ. ಪ್ರವೀಣ್ ಶೆಟ್ಟಿ ಕಾರ್ಯದರ್ಶಿಯಾಗಿ ರೋ.ಮಂಗೇಶ ಶಾನುಬಾಗ್ ಇವರನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿ ರೋ.ಎಂ.ಗೋವಿಂದ ವರದಿ ವಾಚಿಸಿದರು, ರೋ.ಸುಬ್ರಹ್ಮಣ್ಯ ಬಿಂದುವಾಣಿ ಬಿಡುಗಡೆಗೆ ಸಹಕರಿಸಿದರು,ರೋ. ಮಂಜುನಾಥ ಮಹಾಲೆ ಅತಿಥಿಗಳನ್ನು ಪರಿಚಯಿಸಿದರು.
ರೋ.ಸುಧಾಕರ.ಪಿ. ಮತ್ತು ರೋ.ಮಂಗೇಶ್ ಶಾನಭಾಗ್ ಕಾರ್ಯಕ್ರಮ ನಿರೂಪಿಸಿದರು.