ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನಿವೃತ್ತ ಉಪನ್ಯಾಸಕ ಡಾ. ಶ್ರೀಧರ ಉಪ್ಪೂರು(68) ಕೋಟೇಶ್ವರ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಬಸ್ರೂರು ಶಾರದಾ ಕಾಲೇಜಿನಲ್ಲಿ ಉಪನ್ಯಾಸಕ ವೃತ್ತಿ ಆರಂಭಿಸಿದ ಶ್ರೀಧರ ಉಪ್ಪೂರು ಯಕ್ಷಗಾನ ಪರಂಪರೆ ಹಾಗೂ ಪ್ರಯೋಗ ಎನ್ನುವ ಮಹಾ ಪ್ರಬಂಧವನ್ನಲ್ಲದೆ ಹಲವಾರು ಪ್ರಸಂಗಗಳನ್ನೂ ಬರೆದಿದಿದ್ದಾರೆ. ಭಾಗವತಿಕೆಯನ್ನೂ ಬಲ್ಲ ಡಾ.ಶ್ರೀಧರ ಉಪ್ಪೂರು ಬಸ್ರೂರು ಶಾರದಾ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆಸಲ್ಲಿಸಿ ಪ್ರಸ್ತುತ ನಿವೃತ್ತರಾಗಿದ್ದರು. ಪ್ರಾಚಾರ್ಯ ನಾರಣಪ್ಪ ಉಪ್ಪೂರ ಮಗರಾಗಿದ್ದು, ಪರಂಪರೆ ಮತ್ತು ಪ್ರಯೋಗ ಎಂಬ ಮಹಾ ಪ್ರಬಂಧ ಬರೆದು ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದರು. ಮೃತರು ಪತ್ನಿ ಇಬ್ಬರು ಪುತ್ರರ ಅಗಲಿದ್ದಾರೆ.










